ABP-CVoter survey: ತೆನೆ ಇಳಿಸಿ, 'ಕೈ' ಹಿಡಿದ ಹಳೇ ಮೈಸೂರು ಭಾಗದ ಮತದಾರ!

ಬೆಂಗಳೂರು, ಮೇ. 07: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ, ಎಬಿಪಿ ನ್ಯೂಸ್ - ಸಿವೋಟರ್ ಸಹಯೋಗದೊಂದಿಗೆ ಅಂತಿಮ ಹಂತದ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಭಾನುವಾರ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಾಂಗ್ರೆಸ್ ಈ ಬಾರಿ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ತಿಳಿಸಿದೆ.

ಆಡಳಿತೆರೂಢ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಬಸವರಾಜ ಬೊಮ್ಮಾಯಿ ಸರ್ಕಾರ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದರೆ, ಕಾಂಗ್ರೆಸ್ ಕೂಡ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಕೂಡ ಕಾಂಗ್ರೆಸ್‌ಗೆ ಗೆಲುವು ಎಂಬ ಭವಿಷ್ಯ ನುಡಿದಿದ್ದು, ಚುನಾವಣಾ ಫಲಿತಾಂಶ ತಮ್ಮ ಪರವಾಗಿರಲಿದೆ ಎಂದು ಕಾಂಗ್ರೆಸ್ ಹೇಳಿದೆ. ಜಾತ್ಯತೀತ ಜನತಾ ದಳ ಕೂಡ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ.

Karnataka elections 2023: ABP - CVoter pre poll survey results about Old Mysuru Region

224 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಪ್ರಸ್ತುತ 119 ಸ್ಥಾನಗಳನ್ನು ಹೊಂದಿದೆ, ಕಾಂಗ್ರೆಸ್ 75 ಸ್ಥಾನಗಳನ್ನು ಹೊಂದಿದ್ದು, ಜೆಡಿಎಸ್ 28 ಶಾಸಕರನ್ನು ಹೊಂದಿದೆ. ಎರಡು ಸ್ಥಾನಗಳು ಖಾಲಿ ಉಳಿದಿವೆ. ಈ ಬಾರಿ ರಾಜ್ಯದಲ್ಲಿ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಎಬಿಪಿ - ಸಿವೋಟರ್ ಅಭಿಪ್ರಾಯ ಸಂಗ್ರಹ ಫಲಿತಾಂಶಗಳು

ಕರ್ನಾಟಕ ವಿಧಾನಸಭೆಯ ಒಟ್ಟು 224 ಸ್ಥಾನಗಳಲ್ಲಿ ಎಬಿಪಿ-ಸಿವೋಟರ್ ಸಮೀಕ್ಷೆಯ ಫಲಿತಾಂಶಗಳು ಬಿಜೆಪಿ 73 ರಿಂದ 85 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ ಎಂದು ತೋರಿಸಿದೆ. ಕಾಂಗ್ರೆಸ್ 110 ರಿಂದ 122 ಸ್ಥಾನಗಳನ್ನು ಮತ್ತು ಜೆಡಿಎಸ್ 21 ರಿಂದ 29 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದಿದೆ.

ಹಳೇ ಮೈಸೂರು ಭಾಗದಲ್ಲಿ 55 ಸ್ಥಾನಗಳಿದ್ದು, ಇದರಲ್ಲಿ ಆಡಳಿತರೂಢ ಬಿಜೆಪಿ 4 ರಿಂದ 8 ಸ್ಥಾನಗಳನ್ನು ಪಡೆಯಲಿದೆ, ಕಾಂಗ್ರೆಸ್ 24 ರಿಂದ 28 ಸ್ಥಾನಗಳೊಂದಿಗೆ ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಪ್ರಮುಖ ಪಕ್ಷವಾಗಲಿದೆ. ಇನ್ನು, ಈ ಪ್ರದೇಶದಲ್ಲಿ ಹಿಡಿತ ಹೊಂದಿರುವ ಜೆಡಿಎಸ್ 19 ರಿಂದ 23 ಸ್ಥಾನಗಳನ್ನು ಗೆಲ್ಲಲಿದೆ. ಇದರ ಜೊತೆಗೆ ಇತರ ಪಕ್ಷಗಳು 0 ರಿಂದ 3 ಸ್ಥಾನಗಳಲ್ಲಿ ಗೆಲ್ಲುತ್ತವೆ ಎಂದು ಹೇಳಿದೆ.

ಇನ್ನು, ಬಿಜೆಪಿ 25% ಮತ ಹಂಚಿಕೆಯನ್ನು, ಕಾಂಗ್ರೆಸ್ 24-28 ಸ್ಥಾನಗಳೊಂದಿಗೆ 35% ಮತ ಹಂಚಿಕೆಯನ್ನು ಪಡೆಯಲಿದೆ. ಜೆಡಿಎಸ್ 33% ಮತ ಹಂಚಿಕೆಯನ್ನು ಪಡೆಯಲಿದೆ ಎಂದು ABP - CVoter ನ ಸಮೀಕ್ಷೆಯ ಫಲಿತಾಂಶಗಳು ತೋರಿಸಿವೆ.

ಜೆಡಿಎಸ್ 2018 ರ ಚುನಾವಣೆಯಲ್ಲಿ ಈ ಭಾಗದಲ್ಲಿ 27 ಸ್ಥಾನಗಳನ್ನು ಬಾಚಿಕೊಂಡಿತ್ತು. ಕಾಂಗ್ರೆಸ್ ಈ ಭಾಗದಲ್ಲಿ 17 ಸ್ಥಾನಗಳಲ್ಲಿ ಜಯಗಳಿಸಿತ್ತು. ಬಿಜೆಪಿ ಈ ಭಾಗದಲ್ಲಿ 11 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ, ಈ ಬಾರಿಯ ABP - CVoter ಸಮೀಕ್ಷೆ ಪ್ರಕಾರ ಕಾಂಗ್ರೆಸ್ 24 ರಿಂದ 28 ಸ್ಥಾನಗಳಲ್ಲಿ ಜಯಗಳಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+