ರಾಜ್ಯದಲ್ಲಿ ಶೇಕಡಾ 72.67 ರಷ್ಟು ಮತದಾನ: ಹೊಸಕೋಟೆಯಲ್ಲಿ ದಾಖಲೆಯ ಮತದಾನ
ಕರ್ನಾಟಕ ರಾಜ್ಯ ಚುನಾವಣೆ ಮುಕ್ತಾಯವಾಗಿದೆ. ಮೇ 10 ರಂದು ರಾಜ್ಯದ 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ಮುಕ್ತಾಯವಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಂಜೆ 5 ಗಂಟೆಯ ವೇಳೆಗೆ ರಾಜ್ಯದಲ್ಲಿ ಶೇಕಡ 72.67 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಈ ಸಂಖ್ಯೆ ತಾತ್ಕಾಲಿಕವಾಗಿದ್ದು, ಮೇ 11ರಂದು ಸ್ಪಷ್ಟ ಮಾಹಿತಿ ದೊರೆಯಲಿದೆ.
2615 ಅಭ್ಯಥಿಗಳ ಹಣೆಬರದ ಮತಯಂತ್ರದಲ್ಲಿ ಭದ್ರವಾಗಿದ್ದು, ಮೇ 13ರಂದು ಫಲಿತಾಂಶ ಹೊರಬೀಳಲಿದೆ. ಎಂದಿನಂತೆ ಬೆಂಗಳೂರಿನ ಮತದಾರರು ಮತದಾನಕ್ಕೆ ಹೆಚ್ಚಿನ ಆಸಕ್ತಿಯನ್ನು ತೋರಿಸಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಶೇ. 52.80 ರಷ್ಟು ಮತದಾನವಾಗಿದ್ದು ಅತಿ ಕಡಿಮೆ ಮತದಾನದ ಪ್ರಮಾಣ ದಾಖಲಾದ ಜಿಲ್ಲೆ ಎನಿಸಿಕೊಂಡಿದೆ.

ಸದ್ಯದ ಅಂಕಿಅಂಶಗಳ ಪ್ರಕಾರ ಚಿಕ್ಕಬಳ್ಳಾಪುರದಲ್ಲಿ ಶೇ. 85.83 ರಷ್ಟು ಮತದಾನವಾಗಿದ್ದು ಅತಿ ಹೆಚ್ಚು ಮತ ಚಲಾವಣೆಯಾದ ಜಿಲ್ಲೆ ಎನಿಸಿಕೊಂಡಿದೆ. ರಾಮನಗರದಲ್ಲಿ ಶೇ. 84.98 ರಷ್ಟು ಮತದಾನವಾಗಿದ್ದು, ಮಂಡ್ಯದಲ್ಲಿ 84.36ರಷ್ಟು ಮತದಾನವಾಗಿದೆ.
ಜಿಲ್ಲಾವಾರು ಮತದಾನದ ಪ್ರಮಾಣ (ತಾತ್ಕಾಲಿಕ)
ಬೆಂಗಳೂರು ಗ್ರಾಮಾಂತರ - ಶೇ. 83.76
ಬೆಂಗಳೂರು ನಗರ - ಶೇ. 56.98
ಬೆಂಗಳೂರು ಸೆಂಟ್ರಲ್ - ಶೇ. 55.39
ಬೆಂಗಳೂರು ಉತ್ತರ - ಶೇ. 52.88
ಬೆಂಗಳೂರು ದಕ್ಷಿಣ - ಶೇ. 52.80
ಬೆಳಗಾವಿ - ಶೇ. 76.33
ಬಾಗಲಕೋಟೆ ಶೇ. 74.63
ಕಲಬುರಗಿ - ಶೇ. 65.22
ವಿಜಯಪುರ - ಶೇ. 70.78
ಬೀದರ್ - ಶೇ. 71.76
ರಾಯಚೂರು - ಶೇ. 69.79
ಕೊಪ್ಪಳ - ಶೇ. 77.25
ಗದಗ - ಶೇ. 75.21
ಧಾರವಾಡ - ಶೇ. 71.02
ಉತ್ತರ ಕನ್ನಡ - ಶೇ. 76.72
ಹಾವೇರಿ - ಶೇ. 81.17
ವಿಜಯನಗರ - ಶೇ. 77.62
ಬಳ್ಳಾರಿ - ಶೇ. 76.13
ಚಿತ್ರದುರ್ಗ - ಶೇ. 8.37
ದಾವಣಗೆರೆ - ಶೇ. 77.47
ಶಿವಮೊಗ್ಗ - ಶೇ. 77.22
ಉಡುಪಿ - ಶೇ. 78.46
ಚಿಕ್ಕಮಗಳೂರು - ಶೇ. 77.89
ತುಮಕೂರು - ಶೇ. 83.46
ಚಿಕ್ಕಬಳ್ಳಾಪುರ - ಶೇ. 85.83
ಕೋಲಾರ - ಶೇ. 81.22
ರಾಮನಗರ - ಶೇ. 84.98
ಮಂಡ್ಯ - ಶೇ. 84.36
ಹಾಸನ - ಶೇ. 81.59
ದಕ್ಷಿಣ ಕನ್ನಡ - ಶೇ. 76.15
ಕೊಡಗು - ಶೇ. 74.74
ಮೈಸೂರು - ಶೇ. 75.04
ಚಾಮರಾಜನಗರ - ಶೇ. 80.81
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 90.86 ರಷ್ಟು ಮತದಾನವಾಗಿದ್ದು ದಾಖಲೆ ಬರೆದಿದೆ. ಸಿವಿ ರಾಮನ್ ಕ್ಷೇತ್ರದಲ್ಲಿ ಸಿವಿ ರಾಮನ್ ನಗರದಲ್ಲಿ ಶೇಕಡಾ 42.1 ರಷ್ಟು ಮತದಾನವಾಗಿದ್ದು, ಕಡಿಮೆ ಮತದಾನ ಪ್ರಮಾಣ ಹೊಂದಿರುವ ಕ್ಷೇತ್ರ ಎನಿಸಿಕೊಂಡಿದೆ.












Click it and Unblock the Notifications