Karnataka Election ADR Report 2023: ಕಣದಲ್ಲಿರುವ ಅಭ್ಯರ್ಥಿಗಳ ಪಕ್ಷವಾರು ಆಸ್ತಿ ಮೌಲ್ಯ 2018 vs 2023 ಹೆಚ್ಚಾಗಿದೆ

ಬೆಂಗಳೂರು, ಮೇ 05: ಕರ್ನಾಟಕ ರಾಜ್ಯದ ಜನರ ಚಿತ್ತ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರತ್ತ ನೆಟ್ಟಿದೆ. ಪಕ್ಷಗಳು ಗೆಲುವಿನ ನಿರೀಕ್ಷೆಯಲ್ಲಿ ಭರ್ಜರಿ ಪ್ರಚಾರ ಆರಂಭಿಸಿವೆ. ಈ ಮಧ್ಯೆ ಪ್ರಮುಖ ರಾಜಕೀಯ ಪಕ್ಷಗಳ ಚುನಾವಣಾ ಸ್ಪರ್ಧಾಳುಗಳ ಆಸ್ತಿ ಏರಿಕೆ ಆಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಯಾವ ಪಕ್ಷಗಳ ನಾಯಕರ ಆಸ್ತಿ ಎಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಇಲ್ಲಿದೆ.

2023ರಲ್ಲಿ ಸಾರ್ವತ್ರಿಕ ಚುನಾವಣಾ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳ ಪಕ್ಷವಾರು (ಅಭ್ಯರ್ಥಿಗಳು ಆಸ್ತಿ ಏರಿಕೆ) ಆಸ್ತಿ ಹೆಚ್ಚಾಗಿದ್ದರ ಬಗ್ಗೆ ಪ್ರಜಾಪ್ರಭುತ್ವ-ಚುನಾವಣೆ-ಪಕ್ಷಗಳು-ಅಭ್ಯರ್ಥಿಗಳ ಕುರಿತು ಸರ್ವೇ ನಡೆಸುವ 'ADR Survey'(ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ಸಮೀಕ್ಷೆ ನಡೆಸಿದೆ. ಆ ಸಮೀಕ್ಷಾ ವರದಿ ಪ್ರಕಾರ, 2018ಕ್ಕಿಂತ ಈ ವರ್ಷ 2023ರಲ್ಲಿ ಎಲ್ಲ ಪಕ್ಷದವರ ಆಸ್ತಿ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

Karnataka Election ADR Report 2023: Party Wise Percentage of Crorepati Candidate 2018 vs 2023

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ 2023ರಲ್ಲಿ ಸ್ಪರ್ಧಿಸುತ್ತಿರುವ ಪ್ರತಿ ಅಭ್ಯರ್ಥಿಯ ಆಸ್ತಿ ಮೌಲ್ಯ ಸರಿಸಾರಿ 12.26 ಕೋಟಿ ರೂಪಾಯಿಗೆ ಹೆಚ್ಚಾಗಿದೆ. 2018 ರಲ್ಲಿ ಇದೇ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 7.54 ಕೋಟಿ ರೂಪಾಯಿಯಷ್ಟಿತ್ತು ಎಂದು ಎಡಿಆರ್ ಸಮೀಕ್ಷಾ ವರದಿ (ADR Report) ತಿಳಿಸಿದೆ.

ರಾಜಕೀಯ ಪ್ರಮುಖ ಪಕ್ಷಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 221 ಅಭ್ಯರ್ಥಿಗಳ ಸರಾಸರಿ 49.82 ಕೋಟಿ ರೂಪಾಯಿ, ಬಿಜೆಪಿಯ 224 ಅಭ್ಯರ್ಥಿಗಳ ಸರಿಸಾರಿ 39.41 ಕೋಟಿ ರೂಪಾಯಿ, ಜೆಡಿಎಸ್ 208 ಅಭ್ಯರ್ಥಿಗಳ ಸರಿಸಾರಿ ಆಸ್ತಿ 24.45 ರೂಪಾಯಿ ಮತ್ತು ಆಮ್ ಆದ್ಮಿ ಪಕ್ಷದ 208 ಅಭ್ಯರ್ಥಿಗಳ ಸರಾಸರಿ ಆಸ್ತಿ 4.25 ಕೋಟಿ ರೂಪಾಯಿ ಘೋಷಿಸಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗಿದೆ.

ಈ ಎಡಿಆರ್ ವರದಿಯ ನಾಮಪತ್ರ ಸಲ್ಲಿಕೆ ವೇಳೆ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರಗಳ ದೃಢೀಕರಣ ಮೇರೆಗೆ ವಿಶ್ಲೇಷಿಸಲಾಗಿದೆ ಎಂದು ಎಡಿಆರ್ ಸಂಸ್ಥೆ ಹೇಳಿಕೊಂಡಿದೆ.

Karnataka Election ADR Report 2023: Party Wise Percentage of Crorepati Candidate 2018 vs 2023

ಪಕ್ಷವಾರು ಆಸ್ತಿ ಏರಿಕೆ 2018-2023ರ ಮಾಹಿತಿ

ಕಾಂಗ್ರೆಸ್ ಪಕ್ಷದ ಎಲ್ಲ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 2018 ರಲ್ಲಿ ಶೇಕಡಾ 94ರಷ್ಟು ಇದ್ದದ್ದು, 2023ರಲ್ಲಿ ಶೇಕಡಾ 97ಕ್ಕೆ ಹೆಚ್ಚಾಗಿದೆ. ಬಿಜೆಪಿ ಪಕ್ಷದ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 2018 ರಲ್ಲಿ ಶೇಕಡಾ 93 ರಷ್ಟಿತ್ತು, ಅದು 2023ರಲ್ಲಿ ಶೇಕಡಾ 96 ಕ್ಕೆ ಏರಿಕೆ ಆಗಿದೆ.

ಇನ್ನೂ ರಾಜ್ಯ ಪ್ರಾದೇಶಿಕ ಜೆಡಿಎಸ್ ಪಕ್ಷದ ಎಲ್ಲ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 2018 ರಲ್ಲಿ ಶೇಕಡಾ 77ರಷ್ಟು ಇದ್ದದ್ದು, ಇದೀಗ 2023ರಲ್ಲಿ 82ಕ್ಕೆ ಏರಿಕೆ ಆಗಿದೆ. ಇನ್ನೂ ಆಮ್ ಆದ್ಮಿ ಪಕ್ಷದ (AAP) ಎಲ್ಲ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 2018 ರಲ್ಲಿ ಶೇಕಡಾ 33ರಷ್ಟು ಇತ್ತು, ಅದೀಗ 2023ರಲ್ಲಿ ಶೇಕಡಾ 51ರಷ್ಟು ಹೆಚ್ಚಾಗಿದೆ.

ಅದೇ ರೀತಿ ಪಕ್ಷೇತರ ಅಭ್ಯರ್ಥಿಗಳದ್ದು 2018ರಲ್ಲಿ ಶೇಕಡಾ 18ರಿಂದ 2023ರಲ್ಲಿ ಶೇಕಡಾ 24 ರಷ್ಟು ಹೆಚ್ಚಳವಾಗಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (NCP) ಅಭ್ಯರ್ಥಿಗಳ ಆಸ್ತಿ ಗಳಿಕೆಯಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಎನ್‌ಸಿಪಿ ಪಕ್ಷದ ಎಲ್ಲ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 2018 ರಲ್ಲಿ ಶೇಕಡಾ 14ರಷ್ಟಿತ್ತು, ಕೇವಲ ಐದೇ ವರ್ಷದಲ್ಲಿ 2023ರಲ್ಲಿ ಶೇಕಡಾ 56ರಷ್ಟು ಹೆಚ್ಚಾಗಿದೆ. ಸಿಪಿಐ (ಎಂ) ಪಕ್ಷದ ಎಲ್ಲ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 2018 ರಲ್ಲಿ ಶೇಕಡಾ 05ರಷ್ಟಿದ್ದದ್ದು, ಈ ಬಾರಿ ಶೇಕಡಾ 33ರಷ್ಟಕ್ಕೆ ಏರಿಕೆ ಕಂಡಿದೆ ಎಂದು ಎಡಿಆರ್ ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+