Karnataka Poll 2023 LIVE: ನಾಳೆ (ಮೇ 6) ಕರ್ನಾಟಕ ಚುನಾವಣಾ ಕಣದಲ್ಲಿ ಸೋನಿಯಾ ಗಾಂಧಿ
ಕರ್ನಾಟಕ ವಿಧಾನಸಭಾ ಚುನಾವಣೆ 2023 ಲೈವ್ ಸುದ್ದಿ:ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ಶನಿವಾರದ ದಿನದಂದು ಪ್ರಧಾನಿ ಮೋದಿಯವರು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಇತ್ತ,ಸೋನಿಯಾ ಗಾಂಧಿಯವರು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೇ ಆರರಂದು ಬೆಳಗಾವಿ ಜಿಲ್ಲೆ ಯಮಕನಮರಡಿಯಲ್ಲಿ ಮಧ್ಯಾಹ್ನ 2.15ಕ್ಕೆ, ಚಿಕ್ಕೋಡಿಯಲ್ಲಿ ಮಧ್ಯಾಹ್ನ 3.45ಕ್ಕೆ ಪ್ರಚಾರ ನಡೆಸಲಿದ್ದಾರೆ. ಸಂಜೆ 5.30ಕ್ಕೆ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿದ್ದು ಇದರಲ್ಲಿ ಸೋನಿಯಾ ಗಾಂಧಿ ಪಾಲ್ಗೊಳ್ಳಲಿದ್ದಾರೆ.
ಕೊನೆಯ ಹಂತಕ್ಕೆ ಬಂದು ತಲುಪಿರುವ ಬಹಿರಂಗ ಪ್ರಚಾರದಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರವನ್ನ ನಡೆಸುತ್ತಿದ್ದು, ಬಿಜೆಪಿ ಹೈಕಮಾಂಡ್ ತಂಡವೇ ಕರ್ನಾಟಕದಲ್ಲಿ ಸರ್ಕಾರ ರಚನೆಗೆ ನಾನಾ ಕಸರತ್ತುಗಳನ್ನ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಬಳ್ಳಾರಿ ಹಾಗೂ ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಬೇಟೆಯನ್ನ ನಡೆಸಲಿದ್ದಾರೆ. ಇನ್ನೂ ಕಾಂಗ್ರೆಸ್ ನಾಯಕರ ಮಲ್ಲಿಕಾರ್ಜುನ್ ಖರ್ಗೆ ಅವರು ಕಲಬುರಗಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರವನ್ನ ನಡೆಸಲಿದ್ದಾರೆ.

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಮೇ 8ರಂದು ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾಗಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
'ಒನ್ ಇಂಡಿಯಾ ಕನ್ನಡ' ಜಾಲತಾಣ ಓದುಗರಿಗೆ ಚುನಾವಣಾ ಬೆಳವಣಿಗೆಯ ಮಾಹಿತಿಯನ್ನು ಲೈವ್ ಬ್ಲಾಗ್ ಮೂಲಕ ನೀಡಲಿದೆ. ನೀವು ಇಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ಪ್ರಚಾರ, ಭರವಸೆ, ಸಾರ್ವಜನಿಕ ಸಭೆಗಳು, ಹೇಳಿಕೆಗಳು, ಚರ್ಚೆಗಳು, ಪ್ರಚಾರದ ಸದ್ದು-ಗದ್ದಲಗಳ ಕ್ಷಣ ಕ್ಷಣದ ಮಾಹಿತಿ ತಿಳಿದುಕೊಳ್ಳಬಹುದು.
ಚುನಾವಣೆ ಪ್ರಚಾರದ ವೇಳೆ ಕುಣಿಗಲ್ ಪಟ್ಟಣದಲ್ಲಿ ಜನಸಾಗರ.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) May 5, 2023
ಕ್ಷೇತ್ರದ ಮಹಾಜನತೆಗೆ ಅನಂತ ಧನ್ಯವಾದಗಳು.#ಈ_ಬಾರಿ_ಜನತಾ_ಸರಕಾರ #ಪಂಚರತ್ನ #ಕುಣಿಗಲ್ pic.twitter.com/e8XItppifN
ಬೆಳಗಾವಿಯಲ್ಲಿ ಶಿವಣ್ಣ ಮತಯಾಚನೆ
ರಾಹುಲ್ ಮತ್ತು ಸೋನಿಯಾ ಗಾಂಧಿ ಮೇ ಆರರಂದು ಪ್ರಚಾರ
ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಜೋಷಿ ಪ್ರಚಾರ
ವರುಣಾದಲ್ಲಿ ಸಿಎಂ ಭರ್ಜರಿ ರೋಡ್ ಶೋ
ಮೋದಿ ರೋಡ್ ಶೋಗೆ ಹೈಕೋರ್ಟ್ ಸಮ್ಮತಿ
ನರೇಂದ್ರ ಮೋದಿ ರೋಡ್ ಶೋ ಮೊದಲ ದಿನದ ರೂಟ್ ಮ್ಯಾಪ್#narendramodi #modiroadshow #nammabengaluru #routemap pic.twitter.com/zRodV2XbNl
— oneindiakannada (@OneindiaKannada) May 5, 2023
ತುಮಕೂರಿನಲ್ಲಿ ಪಿಎಂ ಮೋದಿ
ಶಿವರಾಜ್ ಕುಮಾರ್ ಎಲ್ಲರನ್ನೂ ಪ್ರೀತಿಸುವ ಮನುಷ್ಯ
ಬಳ್ಳಾರಿಯಲ್ಲಿ ಮೋದಿ: ಭಾಷಣಕ್ಕೂ ಮೊದಲು ಹುಲಿಕುಂಟೆ ಆಂಜನೇಯ ಸ್ವಾಮಿ ನೆನೆದ ಪ್ರಧಾನಿ
"ಲಿಂಗಾಯತರ ಅಗತ್ಯವಿಲ್ಲ" ಎಂಬುದನ್ನು ಬಿಜೆಪಿ ಕ್ರಿಯೆಯಲ್ಲೂ ತೋರಿಸಿದೆ.
— Karnataka Congress (@INCKarnataka) May 5, 2023
ಸವದಿ, ಶೆಟ್ಟರ್, BSY ಸೇರಿದಂತೆ ಹಲವು ಲಿಂಗಾಯತ ನಾಯಕರನ್ನು ಎತ್ತಿ ಎಸೆದಿದ್ದು ಲಿಂಗಾಯತರು ಬೇಡ ಎಂಬ ಕಾರಣಕ್ಕಾಗಿಯೇ ಅಲ್ಲವೇ?
ಯಡಿಯೂರಪ್ಪ ಕಟ್ಟಿದ ಹುತ್ತದಲ್ಲಿ ಹಾವೊಂದು ಸಂತೋಷದಿಂದ ಸಾಮ್ರಾಜ್ಯ ಸ್ಥಾಪಿಸಲು ಹವಣಿಸುತ್ತಿರುವುದು ಬಿಜೆಪಿಯ ಅವನತಿಗೆ ಮುನ್ನುಡಿ…
ಕಾಫಿನಾಡಲ್ಲಿ ದೇವೇಗೌಡರ ಮತ ಬೇಟೆ
ಸಕಲೇಶಪುರದಲ್ಲಿ ಬಿಎಸ್‌ವೈ ರೋಡ್ ಶೋ: ಜೋಳದ ಹಾರ ಹಾಕಿ ಅದ್ಧೂರಿ ಸ್ವಾಗತ
Karnataka Elections : 4 ಲಕ್ಷಕ್ಕೂ ಅಧಿಕ ಮತದಾರರು ಇರುವ 8 ಕ್ಷೇತ್ರಗಳ ಪಟ್ಟಿ
PM Shri @narendramodi is coming to Bengaluru on 6 May, to partake in the ongoing festival of democracy in Karnataka.
— BJP Karnataka (@BJP4Karnataka) May 5, 2023
Let us welcome Shri Modi Ji in huge numbers with enthusiasm, further inspiring his unwavering commitment to serve the nation.#NammaBengaluruNammaModi pic.twitter.com/aQcudF8m97
ಮೋದಿ ರೋಡ್ ಶೋಗೆ ಅಡ್ಡಿಪಡಿಸಲು ಕಾಂಗ್ರೆಸ್ ಷಡ್ಯಂತ್ರ
ರಾಜ್ಯದ ಅತ್ಯಂತ ಶ್ರೀಮಂತ ಅಭ್ಯರ್ಥಿಗಳು
ಬಿಜೆಪಿಗೆ BSYಅವರ ಅಗತ್ಯ ಇನ್ನು ಕೆಲವೇ ದಿನ, ನಂತರ ಉತ್ಸವ ಮೂರ್ತಿಯಾಗಿದ್ದವರನ್ನು ವಿಸರ್ಜನಾ ಮೂರ್ತಿಯನ್ನಾಗಿಸುತ್ತದೆ.
— Karnataka Congress (@INCKarnataka) May 5, 2023
ಬೊಮ್ಮಾಯಿಯವರ ಕೌಂಟ್ ಡೌನ್ ಕೂಡ ಶುರುವಾಗಿದೆ.
ಮೋದಿ ಮುಖ ನೋಡಿ ಮತ ಕೊಡಿ ಎನ್ನುತ್ತಿರುವ ಬಿಜೆಪಿ ಮುಂದೆ ಇಲ್ಲಿ ತೋರಿಸುವ ಮುಖ ಯಾವುದು ಜೋಷಿಯದ್ದೋ, ಸಂತೋಷರದ್ದೋ?
ಜೋಶಿ ದರ್ಬಾರ್ಗಾಗಿ ಲಿಂಗಾಯತ ನಾಯಕರೆಲ್ಲರನ್ನೂ…
ನೀಟ್ ಪರೀಕ್ಷೆ ಹಿನ್ನೆಲೆ ಮೋದಿ ರೋಡ್ ಶೋ ಅದಲು-ಬದಲು; ಇಲ್ಲಿದೆ ಹೊಸ ರೂಟ್ ಮ್ಯಾಪ್
ಕೊಪ್ಪಳದಲ್ಲಿ ನಿಗದಿಯಾಗಿದ್ದ ಅಮಿತ್ ಶಾ ಕಾರ್ಯಕ್ರಮಗಳು ರದ್ದು
ಚಿಕ್ಕಬಳ್ಳಾಪುರ ಮಾತ್ರವಲ್ಲ, ರಾಜ್ಯದ ಅಭಿವೃದ್ಧಿಗೆ ಸಹಕರಿಸಿ: ಸಚಿವ ಸುಧಾಕರ್ ಪರ ನಟ ದರ್ಶನ್ ಮತ ಬೇಟೆ
ತುಮಕೂರಿನಲ್ಲಿ ಮೋದಿ : ವಾಹನ ಸಂಚಾರಕ್ಕೆ ನಿರ್ಬಂಧ
ಮೇ 18 ರಂದು ಕುಮಾರಸ್ವಾಮಿ ಪ್ರಮಾಣ ವಚನ :ಎಚ್ ಡಿ ದೇವೇಗೌಡ
ಬಿಜೆಪಿ ವಿರುದ್ಧ ಜಗದೀಶ್ ಶೆಟ್ಟರ್ ಕಿಡಿ
ವಿಪಕ್ಷ ನಾಯಕರಾದ @siddaramaiah ಅವರು 05-05-2023 ರಂದು ಮೈಸೂರು ಜಿಲ್ಲೆಯ ವರುಣಾ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ pic.twitter.com/S9UJvEHHcf
— Karnataka Congress (@INCKarnataka) May 5, 2023












Click it and Unblock the Notifications