ನೀಟ್ ಪರೀಕ್ಷೆ ಹಿನ್ನೆಲೆ ಮೋದಿ ರೋಡ್ ಶೋ ಅದಲು-ಬದಲು; ಇಲ್ಲಿದೆ ಹೊಸ ರೂಟ್ ಮ್ಯಾಪ್
ಬೆಂಗಳೂರು, ಮೇ5: ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನ ಶತಾಯುಗತಯ ಅಧಿಕಾರಕ್ಕೆ ತರಲು ಪ್ರಧಾನಿ ನರೇಂದ್ರ ಮೋದಿ ಪಣ ತೊಟ್‌ಟಿದ್ದು, ಬಿಜೆಪಿಯ ಹೈಕಮಾಂಡ್ ನಾಯಕರ ದಂಡು ರಾಜ್ಯಾದ್ಯಾಂತ ಅಬ್ಬರದ ಪ್ರವಾಸವನ್ನ ನಡೆಸುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿದ್ದು, ಕಮಲ ಕಲಿಗಳು ರಾಜ್ಯದ ಉದ್ದಗಲಕ್ಕೂ ದಂಡಯಾತ್ರೆ ಕೈಗೊಂಡಿದ್ದಾರೆ
ಕೊನೆ ಹಂತದ ಮತಬೇಟೆಗೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಮ್ಮ ಕರ್ನಾಟಕ ಯಾತ್ರೆ ಹೆಸರಿನಲ್ಲಿ(ಮೇ 6) ಶನಿವಾರಾ ಹಾಗೂ ಭಾನುವಾರ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಬೃಹತ್ ರೋಡ್ ಶೋನಡೆಸಲಿದ್ದಾರೆ.

ಈಗಾಗಲೇ ಬದಲಾವಣೆಯಾಗಿದ್ದ ರೋಡ್ ಶೋ ಮಾರ್ಗ ಮತ್ತೆ ಬದಲಾವಣೆ ಮಾಡಲಾಗಿದೆ. ಭಾನುವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಶನಿವಾರಕ್ಕೆ ನಿಗದಿ ಮಾಡಲಾಗಿದೆ. ಭಾನುವಾರ ನೀಟ್ ಪರೀಕ್ಷೆ ಹಿನ್ನೆಲೆ ಪ್ರಧಾನಿ ಕಚೇರಿ ನಿರ್ದೇಶನದಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ.
ನೀಟ್ ಪರೀಕ್ಷೆ ಹಿನ್ನೆಲೆ ಮೋದಿ ರೋಡ್ ಶೋನಲ್ಲಿ ಬದಲಾವಣೆ
ಭಾನುವಾರ ನೀಟ್ ಪರೀಕ್ಷೆ ಹಿನ್ನೆಲೆ ಪ್ರಧಾನಿ ಕಚೇರಿ ನಿರ್ದೇಶನದಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಭಾನುವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಶನಿವಾರಕ್ಕೆ ಫಿಕ್ಸ್ ಮಾಡಲಾಗಿದ್ದು, ಶನಿವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಭಾನುವಾರಕ್ಕೆ ನಿಗದಿ ಮಾಡಲಾಗಿದೆ. ಭಾನುವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಶನಿವಾರಕ್ಕೆ ನಿಗದಿಯಾಗಿದೆ. ಶನಿವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಭಾನುವಾರಕ್ಕೆ ಫಿಕ್ಸ್ ಮಾಡಲಾಗಿದೆ.
ಇನ್ನೂ ಶನಿವಾರ ಬೆಳಗ್ಗೆ 10 ಗಂಟೆಯಿಂದ ಧ್ಯಾಹ್ನ 12.30ರವರೆಗೆ ರೋಡ್ ಶೋ ನಡೆಯಲಿದ್ದು, ಜೆ.ಪಿ.ನಗರದ ಬ್ರಿಗೇಡ್ ಮಿಲೇನಿಯಂನಿಂದ ರೋಡ್ ಶೋ ಆರಂಭವಾಗಲಿದೆ. ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ಟೆಂಪಲ್‌ವರೆಗೆ ರೋಡ್ ಶೋವನ್ನ ಪ್ರಧಾನಿ ಮೋದಿ ಮಾಡಲಿದ್ದಾರೆ.
ಶನಿವಾರ ಮೋದಿ ರೋಡ್ ಶೋ ಮಾರ್ಗವನ್ನ ನೋಡುವುದಾದರೇ ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂ->ಸಾರಕ್ಕಿ ಜಂಕ್ಷನ್-> ಸೌತ್ ಎಂಡ್ ಸರ್ಕಲ್->ಕೃಷ್ಣರಾವ್ ಪಾರ್ಕ್->ರಾಮಕೃಷ್ಣ ಆಶ್ರಮ-> ಮಕ್ಕಳ ಕೂಟ->ಟೌನ್ ಹಾಲ್->ಕಾವೇರಿ ಭವನ->ಮೆಜೆಸ್ಟಿಕ್-> ಮಾಗಡಿ ರೋಡ್->GT ವರ್ಲ್ಡ್ ಮಾಲ್->ಹೌಸಿಂಗ್ ಬೋರ್ಡ್->ಬಸವೇಶ್ವರ ನಗರ->ಶಂಕರ ಮಠ ಸರ್ಕಲ್-> ಮೋದಿ ಆಸ್ಪತ್ರೆ ರಸ್ತೆ->ನವರಂಗ್ ಸರ್ಕಲ್->ಮಹಾಕವಿ ಕುವೆಂಪು ರಸ್ತೆ->ಮಲ್ಲೇಶ್ವರಂ ಸರ್ಕಲ್ ->ಸಂಪಿಗೆ ರಸ್ತೆ-> ಸರ್ಕಲ್ ಮಾರಮ್ಮ ದೇವಸ್ಥಾನದ ವರೆಗೂ ರೋಡ್ ಶೋ ನಡೆಯಲಿದೆ.

ಇನ್ನೂ ಶನಿವಾರ ಮಾತ್ರವಲ್ಲದೇ ಭಾನುವಾರವೂ ರೋಡ್ ಶೋ ನಡೆಯಲಿದೆ. ಭಾನುವಾರ ಬೆಳಗ್ಗೆ 10 ಗಂಟೆಯಿಂದ 11.30ರವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಸುರಂಜನ್‌ದಾಸ್ ಸರ್ಕಲ್‌ನಿಂದ ಟ್ರಿನಿಟಿ ಸರ್ಕಲ್‌ವರೆಗೆ ರೋಡ್ ಶೋ ನಡೆಯಲಿದೆ. ಭಾನುವಾರ ನಡೆಯುವ ಪ್ರಧಾನಿ ರೋಡ್ ಶೋ 4 ಕಿ.ಮೀ. ಕಡಿತ ಮಾಡಲಾಗಿದೆ.
ಎರಡು ಬಾರೀ ಬದಲಾವಣೆ ಮಾಡಲಾಗಿರುವ ಮೋದಿ ರೋಡ್ ಶೋ, ಇದೀಗ ನೀಟ್ ಪರೀಕ್ಷೆ ಹಿನ್ನೆಲೆ ರೋಡ್ ಶೋ ರೂಟ್‌ನಲ್ಲಿ ಬದಲಾವಣೆ ಮಾಡಲಾಗಿದ್ದು, ಟ್ರಾಫಿಕ್ ಸಮಸ್ಯೆ ಆಗಬಹುದು ಅನ್ನೋ ಕಾರಣಕ್ಕೆ ಪ್ರಧಾನಿ ಕಚೇರಿ ನಿರ್ದೇಶನದಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಭಾನುವಾರದ ರೋಡ್ ಶೋ ಮಾರ್ಗವನ್ನ ನೋಡುವುದಾದರೇ, ಬೆಮೆಲ್ ಸರ್ಕಲ್->ತಿಪ್ಪಸಂದ್ರ ಮುಖ್ಯರಸ್ತೆ->ಇಎಸ್ಐ ಆಸ್ಪತ್ರೆ, CMH ರೋಡ್->ಇಂದಿರಾನಗರ->ಹಲಸೂರು ಪೊಲೀಸ್ ಸ್ಟೇಷನ್- ಎಂ.ಜಿ ರಸ್ತೆ->ಬ್ರಿಗೇಡ್ ರೋಡ್ ತಲುಪಲಿದೆ.












Click it and Unblock the Notifications