Darshan Thoogudeepa: ರಾಜ್ಯದ ಹಲವು ಜಿಲ್ಲೆಗಳಲ್ಲಿ ರೋಡ್‌ ಶೋ ಮಾಡಲಿರುವ ಡಿ.ಬಾಸ್‌, ಕಾರ್ಯಕ್ರಮಗಳ ವಿವರ ಇಲ್ಲಿದೆ

ಕರ್ನಾಟಕ, ಏಪ್ರಿಲ್‌, 28: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯ ನಾಯಕರ ಪರವಾಗಿ ರಾಷ್ಟ್ರನಾಯಕರು ಈಗಾಗಲೇ ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ. ಜೊತೆಗೆ ಸ್ಟಾರ್‌ ಪ್ರಚಾರಕರು ಕೂಡ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಆರಂಭಿಸಿದ್ದಾರೆ. ಅದೇ ರೀತಿಯಲ್ಲಿ ಇಂದು ಚಾಲೆಂಜಿಗ್‌ ಸ್ಟಾರ್‌ ಡಿ.ಬಾಸ್‌ ಅವರು ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರವನ್ನು ಮಾಡಲಿದ್ದಾರೆ.

ಚಾಲೆಂಜಿಂಗ್‌ ಸ್ಟಾರ್‌, ಡಿ.ಬಾಸ್‌ ಅಂತಲೇ ಪ್ರಖ್ಯಾತಿ ಪಡೆದಿರುವ ದರ್ಶನ್‌ ಅವರು ಇಂದು ರಾಜ್ಯದ ಹಲವು ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಹಾಗಾದರೆ ಇಂದಿನ ಕಾರ್ಯಕ್ರಮಗಳ ವಿವರವನ್ನು ಇಲ್ಲಿ ತಿಳಿಯಿರಿ.

Karnataka election 2023: Know details of Darshan Thoogudeepa road show programs in Karnataka

*ಕಾರ್ಯಕ್ರಮ-1: ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ ಕ್ಷೇತ್ರಕ್ಕೆ ಬೆಳಗ್ಗೆ 10ಕ್ಕೇ ಭೇಟಿ ನೀಡಲಿದ್ದು, ಇಲ್ಲಿನ ಬಿಜೆಪಿ ಅಭ್ಯರ್ಥಿ ಪರ ರೋಡ್‌ ಮಾಡಲಿದ್ದಾರೆ.

*ಕಾರ್ಯಕ್ರಮ-2: ಕೋಲಾರ ಜಿಲ್ಲೆಯ ಬಂಗಾರ ಪೇಟೆ ಕ್ಷೇತ್ರಕ್ಕೆ ಬೆಳಗ್ಗೆ 11 ಗಂಟೆಗೆ ಭೇಟಿ ನೀಡಿ ಇಲ್ಲಿನ ಬಿಜೆಪಿ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ಮಾಡಲಿದ್ದಾರೆ.

*ಕಾರ್ಯಕ್ರಮ-3: ಇನ್ನು ಕೋಲಾರ ಕ್ಷೇತ್ರಕ್ಕೆ ಮಧ್ಯಾಹ್ನ 12 ಗಂಟೆಗೆ ಭೇಟಿ ನೀಡಿ ಇಲ್ಲಿ ಅಭ್ಯರ್ಥಿ ಪರ ರೋಡ್‌ ಮಾಡಲಿದ್ದಾರೆ.

*ಕಾರ್ಯಕ್ರಮ-4: ಕೋಲಾರ ಜಿಲ್ಲೆಯ ಮಾಲೂರು ವಿಧಾನಸಕ್ಕೆ ಕ್ಷೇತ್ರಕ್ಕೆ ಮಧ್ಯಾಹ್ನ 3 ಗಂಟೆಗೆ ಭೇಟಿ ನೀಡಿ ಇಲ್ಲಿನ ಬಿಜೆಪಿ ಅಭ್ಯರ್ಥಿ ಪರ ರೋಡ್‌ ಶೋ ಮಾಡಲಿದ್ದಾರೆ.

*ಕಾರ್ಯಕ್ರಮ-5: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಜೆ 4 ಗಂಟೆಗೆ ಭೇಟಿ ನೀಡಲಿದ್ದು, ಇಲ್ಲಿನ ಅಭ್ಯರ್ಥಿ ಪರ ರೋಡ್‌ ಶೋ ಮಾಡಲಿದ್ದಾರೆ.

*ಕಾರ್ಯಕ್ರಮ-6: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದ ವಿಜಯಪುರಕ್ಕೆ ಸಂಜೆ 5 ಗಂಟೆಗೆ ಭೇಟಿ ನೀಡಲಿದ್ದು, ಇಲ್ಲಿನ ಅಭ್ಯರ್ಥಿ ಪರ ರೋಡ್‌ ಶೋ ಮಾಡಲಿದ್ದಾರೆ.

*ಕಾರ್ಯಕ್ರಮ-7: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರಕ್ಕೆ ಸಂಜೆ 6 ಗಂಟೆಗೆ ಭೇಟಿ ನೀಡಲಿದ್ದು, ಇಲ್ಲಿನ ಅಭ್ಯರ್ಥಿ ಪರ ರೋಡ್‌ ಶೋ ಮಾಡಲಿದ್ದಾರೆ.

*ಕಾರ್ಯಕ್ರಮ- 8: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಜೆ 7 ಗಂಟೆಗೆ ಭೇಟಿ ನೀಡಲಿದ್ದು, ಇಲ್ಲಿನ ಬಿಜೆಪಿ ಅಭ್ಯರ್ಥಿ ಪರ ರೋಡ್‌ ಶೋ ಮಾಡಲಿದ್ದಾರೆ.

*ಕಾರ್ಯಕ್ರಮ- 9: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಕ್ಷೇತ್ರಕ್ಕೆ ಸಂಜೆ 8 ಗಂಟೆಗೆ ಭೇಟಿ ನೀಡಲಿದ್ದು, ಇಲ್ಲಿನ ಬಿಜೆಪಿ ಅಭ್ಯರ್ಥಿ ಪರ ರೋಡ್‌ ಶೋ ಮಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+