Karnataka Dam Water Level: ಕೆಆರ್ಎಸ್ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ನದಿಗೆ: 14 ಡ್ಯಾಂಗಳ ನೀರಿನ ಮಟ್ಟ ಎಷ್ಟು?
ಬೆಂಗಳೂರು, ಜುಲೈ 31: ಕರ್ನಾಟಕ, ಕೇರಳದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಕಾವೇರಿ ಕೊಳ್ಳದ ಜಲಾಶಯಗಳಿಂದ ನದಿಗೆ ಅಪಾರ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ. ರಾಜ್ಯದ ಉದ್ದಗಲಕ್ಕೂ ಮಳೆಯಾಗುತ್ತಿದ್ದು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಗಾಳಿ, ಧಾರಾಕಾರ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಕರ್ನಾಟಕದಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ರಾಜ್ಯದ ಬಹುತೇಕ ಡ್ಯಾಂಗಳು ತುಂಬಿ ಹರಿಯುತ್ತಿವೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಕೃಷ್ಣಾ, ಘಟಪ್ರಭಾ, ಮಲಪ್ರಭಾ ಜಲಾಶಯಗಳಿಗೆ ಒಳಹರಿವು ಹೆಚ್ಚಿದೆ. ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಕೃಷ್ಣರಾಜಸಾಗರ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಬರುತ್ತಿರುದೆ.

ಕಳೆದ ವರ್ಷಕ್ಕಿಂತ ಈ ವರ್ಷ ಭಾರೀ ಮಳೆಯಿಂದಾಗಿ ಕೆಆರ್ಎಸ್ ಜಲಾಶಯ ಭರ್ತಿಯಾಗಿದ್ದು, ಕೆಆರ್ ಎಸ್ ಜಲಾಶಯದಿಂದ ಸುಮಾರು 1,10,000 ಕ್ಯೂಸೆಕ್ಸ್ ಹಾಗೂ ಕಬಿನಿ ಜಲಾಶಯದಿಂದ ಈಗಾಗಲೇ 80,000 ಕ್ಯೂಸೆಕ್ಸ್ಗೂ ಅಧಿಕ ನೀರನ್ನು ಕಾವೇರಿ ನದಿಗೆ ಹರಿಯ ಬಿಡಲಾಗಿತ್ತಿದೆ. ಈ ಪ್ರಮಾಣವೂ ಸುಮಾರು 2,00,000 ಕ್ಯೂಸೆಕ್ಸ್ ಗಿಂತ ಅಧಿಕವಾಗುವ ಸಂಭವವಿರುತ್ತದೆ.
ರಾಜ್ಯದ ಪ್ರಮುಖ ಜಲಾಶಯಗಳ ಫೈಕಿ ಹಾರಂಗಿ, ಘಟಪ್ರಭಾ, ಉತ್ತರ ಕರ್ನಾಟಕದ ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಹಾಗಾದ್ರೆ ಭದ್ರಾ ಜಲಾಶಯ ಸೇರಿದಂತೆ ಇಂದು(ಜುಲೈ 31) ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
| ಪ್ರಮುಖ ಜಲಾಶಗಳು | ಒಟ್ಟು ಸಾಮರ್ಥ್ಯ (ಟಿಎಂಸಿ) | ಇಂದಿನ ಮಟ್ಟ (ಟಿಎಂಸಿ) | ಒಳಹರಿವು (ಕ್ಯೂಸೆಕ್ಸ್) |
| ಆಗಮಟ್ಟಿ ಜಲಾಶಯ | 123.08 | 67.86 | 3,02,573 |
| ತುಂಗಭದ್ರಾ ಜಲಾಶಯ | 105.79 | 100.68 | 1,31,821 |
| ಮಲಪ್ರಭಾ ಜಲಾಶಯ | 37.73 | 30.57 | 7,707 |
| ಕೆ ಆರ್ ಎಸ್ | 49.45 | 47.99 | 62,683 |
| ಲಿಂಗನಮಕ್ಕಿ ಜಲಾಶಯ | 151.75 | 124.60 | 50,710 |
| ಕಬಿನಿ ಜಲಾಶಯ | 19.52 | 19.52 | 47,675 |
| ಭದ್ರಾ ಜಲಾಶಯ | 71.54 | 68.01 | 20,774 |
| ಫಟಪ್ರಭಾ ಜಲಾಶಯ | 51.00 | 47.16 | 38,012 |
| ಹೇಮಾವತಿ ಜಲಾಶಯ | 37.10 | 36.12 | 26,600 |
| ವರಾಹಿ ಜಲಾಶಯ | 31.10 | 16.94 | 8,810 |
| ಹಾರಂಗಿ ಜಲಾಶಯ | 8.50 | 7.83 | 12,317 |
| ಸೂಫಾ | 145.33 | 100.14 | 36,661 |
| ನಾರಾಯಣಪುರ ಜಲಾಶಯ | 33.31 | 23.50 | 2,90,646 |
| ವಾಣಿವಿಲಾಸ ಸಾಗರ | 30.42 | 18.35 | 4737 |












Click it and Unblock the Notifications