Karnataka Dam Water Level: ಆಲಮಟ್ಟಿ ಡ್ಯಾಂನ ಒಳಹರಿವು ಹೆಚ್ಚಳ; 14 ಡ್ಯಾಂಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ವಿವರ
ಬೆಂಗಳೂರು, ಜುಲೈ 30: ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದೆ. ಮಳೆರಾಯನ ಆರ್ಭಟದಿಂದ ಜಲಾಶಯಗಳಿಗೆ ನಿರಂತರವಾಗಿ ಒಳಹರಿವು ಹೆಚ್ಚಾಗುತ್ತಿದೆ.
ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಂಗಳವಾರವೂ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮಲೆನಾಡಿನ ಶಿವಮೊಗ್ಗ ಹಾಗೂ ಚಿಕ್ಕಮಗಳೂರು, ಕರಾವಳಿ ಹಾಗೂ ಮಲೆನಾಡು ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರೀಯಿಂದ ಹೆಚ್ಚು ಮಳೆಯಾಗುವ ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ.

ಇನ್ನೂ ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದ ಕೃಷ್ಣ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಮುಂಜಾಗ್ರತೆ ಕ್ರಮವಾಗಿ ಒಳಹರಿವಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಗರಿಷ್ಠ 519.60 ಮೀಟರ್ ಎತ್ತರವಿರುವ ಆಲಮಟ್ಟಿ ಜಲಾಶಯ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಮಂಗಳವಾರ 67.86 ನೀರು ಸಂಗ್ರಹವಾಗಿದೆ. 3 ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. 2 ಲಕ್ಷ ಕ್ಯುಸೆಕ್ ಒಳಹರಿವು ಇದೆ.
ರಾಜ್ಯದ ಪ್ರಮುಖ ಜಲಾಶಯಗಳ ಫೈಕಿ ತುಂಗಭದ್ರಾ, ಕೆಆರ್ಎಸ್, ಹಾರಂಗಿ, ಘಟಪ್ರಭಾ, ಉತ್ತರ ಕರ್ನಾಟಕದ ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಹಾಗಾದ್ರೆ ಭದ್ರಾ ಜಲಾಶಯ ಸೇರಿದಂತೆ ಇಂದು(ಜುಲೈ 30) ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
| ಪ್ರಮುಖ ಜಲಾಶಗಳು | ಒಟ್ಟು ಸಾಮರ್ಥ್ಯ (ಟಿಎಂಸಿ) | ಇಂದಿನ ಮಟ್ಟ(ಟಿಎಂಸಿ) | ಒಳಹರಿವು(ಕ್ಯೂಸೆಕ್ಸ್) |
| ಆಲಮಟ್ಟಿ ಜಲಾಶಯ | 123.08 | 67.86 | 2,71,385 |
| ತುಂಗಭದ್ರಾ ಜಲಾಶಯ | 105.79 | 97.41 | 1,47,122 |
| ಮಲಪ್ರಭಾ ಜಲಾಶಯ | 37.73 | 30.27 | 14,277 |
| ಕೆಆರ್ ಎಸ್ | 49.45 | 47.45 | 57,012 |
| ಲಿಂಗನಮಕ್ಕಿ ಜಲಾಶಯ | 151.75 | 120.52 | 40,382 |
| ಕಬಿನಿ ಜಲಾಶಯ | 19.52 | 19.00 | 20,346 |
| ಭದ್ರಾ ಜಲಾಶಯ | 71.54 | 66.38 | 18,381 |
| ಘಟಪ್ರಭಾ ಜಲಾಶಯ | 51.00 | 46.96 | 47,420 |
| ಹೇಮಾವತಿ ಜಲಾಶಯ | 37.10 | 35.29 | 32.622 |
| ವರಾಹಿ ಜಲಾಶಯ | 31.10 | 16.18 | 5,035 |
| ಹಾರಂಗಿ ಜಲಾಶಯ | 8.50 | 7.43 | 7,613 |
| ಸೂಫಾ | 145.33 | 96.97 | 25,995 |
| ನಾರಾಯಣಪುರ | 33.31 | 24.01 | 3,01,771 |
| ವಾಣಿವಿಲಾಸ ಸಾಗರ | 30.42 | 17.94 | 974 |












Click it and Unblock the Notifications