Karnataka Dam Water Level: ರಾಜ್ಯದಲ್ಲಿ ಮಳೆ ಆರ್ಭಟಕ್ಕೆ ಡ್ಯಾಂ ಭರ್ತಿ; 14 ಡ್ಯಾಂಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ವಿವರ
ಬೆಂಗಳೂರು, ಜುಲೈ 29: ಕರ್ನಾಟಕ ಎಲ್ಲೆಡೆ ಮಳೆರಾಯನ ಆರ್ಭಟ ಹೆಚ್ಚಳವಾಗಿದ್ದು, ಜಲಾಶಯಗಳಿಗೆ ನಿರಂತರವಾಗಿ ಒಳಹರಿವು ಹೆಚ್ಚಾಗುತ್ತಿದೆ. ರೈತರ ಜೀವನಾಡಿ, ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಸೋಮವಾರ) ಬಾಗಿನ ಅರ್ಪಿಸಲಿದ್ದಾರೆ.
ಕಳೆದ ಬಾರಿಗಿಂತ ಈ ವರ್ಷ ಕರ್ನಾಟಕದಲ್ಲಿ ಮುಂಗಾರು ಮಳೆ ಚೆನ್ನಾಗಿ ಆಗುತ್ತಿದೆ. ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ. ಕರ್ನಾಟಕದ ಕೆಲವು ಜಲಾಶಯ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ತುಂಗಭದ್ರಾ, ಕೆಆರ್ಎಸ್, ಹಾರಂಗಿ, ಘಟಪ್ರಭಾ, ಉತ್ತರ ಕರ್ನಾಟಕದ ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಹಾಗಾದ್ರೆ ಭದ್ರಾ ಜಲಾಶಯ ಸೇರಿದಂತೆ ಇಂದು(ಜುಲೈ 29) ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

| ಪ್ರಮುಖ ಜಲಾಶಗಳು | ಒಟ್ಟು ಸಾಮರ್ಥ್ಯ (ಟಿಎಂಸಿ) | ಇಂದಿನ ಮಟ್ಟ(ಟಿಎಂಸಿ) | ಒಳಹರಿವು(ಕ್ಯೂಸೆಕ್ಸ್) |
| ಆಲಮಟ್ಟಿ ಜಲಾಶಯ | 123.08 | 71.71 | 2,54,829 |
| ತುಂಗಭದ್ರಾ ಜಲಾಶಯ | 105.79 | 98.22 | 1,24,361 |
| ಮಲಪ್ರಭಾ ಜಲಾಶಯ | 37.73 | 29.49 | 28,972 |
| ಕೆಆರ್ ಎಸ್ | 49.45 | 47.43 | 1,17,066 |
| ಲಿಂಗನಮಕ್ಕಿ ಜಲಾಶಯ | 151.75 | 117.55 | 37,733 |
| ಕಬಿನಿ ಜಲಾಶಯ | 19.52 | 18.27 | 32,867 |
| ಭದ್ರಾ ಜಲಾಶಯ | 71.54 | 64.88 | 35,557 |
| ಘಟಪ್ರಭಾ ಜಲಾಶಯ | 51.00 | 47.22 | 50,337 |
| ಹೇಮಾವತಿ ಜಲಾಶಯ | 37.10 | 35.22 | 51,998 |
| ವರಾಹಿ ಜಲಾಶಯ | 31.10 | 15.47 | 1,800 |
| ಹಾರಂಗಿ ಜಲಾಶಯ | 8.50 | 7.16 | 10,569 |
| ಸೂಫಾ | 145.33 | 91.67 | 35,294 |
| ನಾರಾಯಣಪುರ | 33.31 | 24.94 | 3,01,033 |
| ವಾಣಿವಿಲಾಸ ಸಾಗರ | 30.42 | 17.87 | 0 |












Click it and Unblock the Notifications