Karnataka Dam Water Level: ಭರ್ಜರಿ ಮಳೆ; KRS ಡ್ಯಾಂ ಸೇರಿದಂತೆ ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ಎಷ್ಟು?

ಬೆಂಗಳೂರು, ಜುಲೈ 12: ಕಳೆದ ವರ್ಷಕ್ಕಿಂತ ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದ ಬಾರಿ ಭೀಕರ ಬರಗಾಲದ ನಡುವೆಯೂ ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಸಲಾಗಿದೆ. ಈ ಬಾರಿ ಮುಂಗಾರು ಉತ್ತಮವಾಗಿದ್ದು ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾಗುತ್ತವೆ, ಬೆಳೆ ಬೆಳೆಯಬಹುದು ಎಂದು ಕಾಯುತ್ತಿದ್ದ ರೈತರಿಗೆ ಆಘಾತ ಎದುರಾಗಿದೆ.

ಹೌದು, ತಮಿಳುನಾಡಿಗೆ ಜುಲೈ 31 ರವರೆಗೆ ಪ್ರತಿನಿತ್ಯ 1 ಟಿಎಂಸಿ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಸಮಿತಿ ಸೂಚನೆ ನೀಡಿದೆ. ಜುಲೈ 12 ರಿಂದ ಜುಲೈ 31 ಅವಧಿಯಲ್ಲಿ ಬಿಳಿಗುಂಡ್ಲುವಿನಲ್ಲಿ ಸಂಚಿತ ನೀರಿನ ಹರಿವನ್ನು ದಿನಕ್ಕೆ 1 ಟಿಎಂಸಿ (ಸರಾಸರಿ 11,500 ಕ್ಯುಸೆಕ್ಗಳ ಹರಿವು) ಇರುವಂತೆ ಕರ್ನಾಟಕವು ತನ್ನ ಜಲಾಶಯಗಳಿಂದ ನೀರಿನ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿದೆ. ಹಾಗಾದರೆ ಕೆಆರ್​ಎಸ್​​ ಸೇರಿದಂತೆ ತುಂಗಭದ್ರಾ, ಮಲಪ್ರಭಾ, ವಾರಾಹಿ ಜಲಾಶಯಗಳಲ್ಲಿ ಜುಲೈ 12 ರಂದು ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Dams Water level Today KRS Kabini Bhadra dam water level as on July 12th
ಕರ್ನಾಟಕದ ಪ್ರಮುಖ ಜಲಾಶಯಗಳು ಗರಿಷ್ಠ ನೀರಿನ ಮಟ್ಟ(ಮೀ) ಇಂದಿನ ನೀರಿನ ಮಟ್ಟ(ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ 519.60 84.58 69492 430
ತುಂಗಭದ್ರಾ ಜಲಾಶಯ 497.71 27.33 25349 286
ಮಲಪ್ರಭಾ ಜಲಾಶಯ 633.80 12.10 6780 194
ಕೆ ಆರ್‌ ಎಸ್‌ 38.04 26.09 9146 1972
ಲಿಂಗನಮಕ್ಕಿ ಜಲಾಶಯ 554.44 42.42 13128 34229
ಕಬಿನಿ ಜಲಾಶಯ 696.13 18.67 5118 5000
ಭದ್ರಾ ಜಲಾಶಯ 657.73

24.24

6246 158
ಘಟಪ್ರಭಾ ಜಲಾಶಯ 662.91 23.46 74542 123
ಹೇಮಾವತಿ ಜಲಾಶಯ 890.58 19.78 6019 250
ವರಾಹಿ ಜಲಾಶಯ 594.36 6.73 2124 0
ಹಾರಂಗಿ ಜಲಾಶಯ 871.38 6.08 2059 200
ಸೂಫಾ ಜಲಾಶಯ 564.00 46.57 8378 2522
ನಾರಾಯಣಪುರ ಜಲಾಶಯ 492.25 21.16 201 201
ವಾಣಿವಿಲಾಸ ಸಾಗರ 652.24 18.04 0 147

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+