Karnataka Dam Water Level: ಭರ್ಜರಿ ಮಳೆಯಿಂದ ತುಂಬಿ ಹರಿಯುತ್ತಿರೋ ಡ್ಯಾಂಗಳು; 14 ಜಲಾಶಯಗಳ ನೀರಿನ ಮಟ್ಟ?
ಬೆಂಗಳೂರು,ಆಗಸ್ಟ್ 03: ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕರ್ನಾಟಕ ರಾಜ್ಯದ ಕೃಷ್ಣರಾಜ ಸಾಗರ , ಕಬಿನಿ ಸೇರಿದಂತೆ ಬಹುತೇಕ ಅಣೆಕಟ್ಟುಗಳು ತುಂಬಿ ಹರಿಯುತ್ತಿವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮೆಟ್ಟೂರು ಅಣೆಕಟ್ಟೆಯಿಂದ 1 ಲಕ್ಷದ 20 ಸಾವಿರ ಘನ ಅಡಿ ನೀರು ಬಿಡಲಾಗುತ್ತಿದೆ.
ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದ ಕೃಷ್ಣ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಮುಂದುವರೆದಿದೆ. ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ವರ್ಷ ಮಳೆಯಾಗದ ಹಿನ್ನೆಲೆ ಕೊಪ್ಪಳ ಜಿಲ್ಲೆಯ ಬಹುತೇಕ ಭಾಗದ ಜನರು ತೀವ್ರ ಮಳೆ ಕೊರತೆಯನ್ನು ಅನುಭವಿಸಿದ್ರು. ಇದೀಗ ಮಲೆನಾಡಿನ ಮಳೆಗೆ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ಡ್ಯಾಂ ಕೆಳಭಾಗದ ಜನರು ನೆರೆಯ ಸಂಕಷ್ಟ ಅನುಭವಿಸುವಂತಾಗಿದೆ.

ಕಳೆದ ಒಂದು ತಿಂಗಳಿನಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಗೆ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ತುಂಗಭದ್ರಾ ಡ್ಯಾಂ ನಿಂದ ನದಿಗೆ 1.70 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಡ್ಯಾಂ ಗೆ ಸರಿಸುಮಾರು ಎರಡು ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ಇದೆ.
ತುಂಗಾ, ಭದ್ರಾ, ವರದಾ ನದಿಗಳಿಂದ ಅಪಾರ ಪ್ರಮಾಣದ ನೀರು ಜಲಾಶಯಕ್ಕೆ ಬಂದು ಸೇರುತ್ತಿರುವುದರಿಂದ ಹೆಚ್ಚಿನ ಪ್ರಮಾಣದ ನೀರನ್ನು ಡ್ಯಾಂನಿಂದ ನದಿಗೆ ಹರಿಸಲಾಗುತ್ತಿದೆ. ಹಾಗಾದರೆ ಇಂದು (ಆಗಸ್ಟ್ 03) ಕರ್ನಾಟಕದ ಪ್ರಮುಖ 14 ಜಲಾಶಯಗಳ ನೀರಿನ ಮಟ್ಟ ವಿವರ ಇಲ್ಲಿದೆ.
| ಪ್ರಮುಖ ಜಲಾಶಯಗಳು | ಒಟ್ಟು ಸಾಮರ್ಥ್ಯ (ಟಿಎಂಸಿ) | ಇಂದಿನ ಮಟ್ಟ(ಟಿಎಂಸಿ) | ಒಳಹರಿವು (ಕ್ಯೂಸೆಕ್ಸ್) |
| ಆಲಮಟ್ಟಿ ಜಲಾಶಯ | 123.08 | 67.86 | 3,41,004 |
| ತುಂಗಭದ್ರಾ ಜಲಾಶಯ | 105.79 | 98.73 | 1,97,468 |
| ಮಲಪ್ರಭಾ ಜಲಾಶಯ | 37.73 | 32.99 | 19,031 |
| ಕೆ ಆರ್ ಎಸ್ | 49.45 | 46.03 | 98,910 |
| ಲಿಂಗನಮಕ್ಕಿ ಜಲಾಶಯ | 151.75 | 138.42 | 51,961 |
| ಕಬಿನಿ ಜಲಾಶಯ | 19.52 | 17.63 | 45,260 |
| ಭದ್ರಾ ಜಲಾಶಯ | 71.54 | 67.30 | 38,870 |
| ಘಟಪ್ರಭಾ ಜಲಾಶಯ | 51.00 | 98.73 | 1,97,468 |
| ಹೇಮಾವತಿ ಜಲಾಶಯ | 37.10 | 35.08 | 27,126 |
| ವರಾಹಿ ಜಲಾಶಯ | 31.10 | 18.83 | 5,202 |
| ಹಾರಂಗಿ ಜಲಾಶಯ | 8.50 | 7.36 | 10,683 |
| ಸೂಫಾ ಜಲಾಶಯ | 145.33 | 111.61 | 44,613 |
| ನಾರಾಯಣಪುರ | 33.31 | 23.64 | 3,18,096 |
| ವಾಣಿವಿಲಾಸ ಸಾಗರ | 30.42 | 18.57 | 728 |












Click it and Unblock the Notifications