Karnataka Dam Water Level: ಮಳೆಯಿಂದ ತುಂಗಭದ್ರಾ ಡ್ಯಾಂಗೆ ಭರ್ಜರಿ ನೀರು: ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ಎಷ್ಟು?
ಬೆಂಗಳೂರು, ಆಗಸ್ಟ್ 26: ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕರ್ನಾಟಕದ ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಜಲಾಯಶಗಳು ಕೂಡ ಭರ್ತಿಯಾಗಿವೆ. ರೈತರಿಗೆ ಸಂತಸ ಮೂಡಿಸಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ 26ರ ಸೋಮವಾರದಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಭದ್ರಾ, ಹಾರಂಗಿ, ಕಬಿನಿ, ಕೆಆರ್ಎಸ್, ಹೇಮಾವತಿ, ಲಿಂಗನಮಕ್ಕಿ ಅಣೆಕಟ್ಟುಗಳ ನೀರಿನ ಮಟ್ಟ ಹೆಚ್ಚಳವಾಗಿದೆ.

ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ, ಕರಾವಳಿ ಭಾಗದಲ್ಲಿ ಹಾಗೂ ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಇನ್ನೂ ಮಳೆ ಮುಂದುವರೆದಿದೆ. ಇದರಿಂದ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುತ್ತಲೇ ಇದೆ. ಇದರಿಂದ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಅಣೆಕ್ಕಟ್ಟೆಯ 19ನೇ ಗೇಟ್ ಇದ್ದ ಸ್ಥಳದಲ್ಲಿ ಹೊಸ ಗೇಟ್ ಅಳವಡಿಸಿದ ಬಳಿಕ 10 ದಿನಗಳಲ್ಲಿ ನೀರಿನ ಮಟ್ಟ 15 ಟಿಎಂಸಿ ಏರಿಕೆಯಾಗಿದೆ. ಹಾಗಾದ್ರೆ ಭದ್ರಾ ಜಲಾಶಯ ಸೇರಿದಂತೆ ಇಂದು(ಆಗಸ್ಟ್ 26) ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
| ಪ್ರಮುಖ ಜಲಾಶಗಳು | ಒಟ್ಟು ಸಾಮರ್ಥ್ಯ (ಟಿಎಂಸಿ) | ಇಂದಿನ ಮಟ್ಟ(ಟಿಎಂಸಿ) | ಒಳಹರಿವು(ಕ್ಯೂಸೆಕ್ಸ್) |
| ಆಲಮಟ್ಟಿ ಜಲಾಶಯ | 123.08 | 123.08 | 28838 |
| ತುಂಗಭದ್ರಾ ಜಲಾಶಯ | 105.79 | 86.27 | 23725 |
| ಮಲಪ್ರಭಾ ಜಲಾಶಯ | 37.73 | 35.25 | 11912 |
| ಕೆ ಆರ್ ಎಸ್ | 49.45 | 47.95 | 4695 |
| ಲಿಂಗನಮಕ್ಕಿ ಜಲಾಶಯ | 151.75 | 144.75 | 14970 |
| ಕಬಿನಿ ಜಲಾಶಯ | 19.52 | 18.42 | 2176 |
| ಭದ್ರಾ ಜಲಾಶಯ | 71.54 | 64.67 | 5486 |
| ಘಟಪ್ರಭಾ ಜಲಾಶಯ | 51.00 | 50.40 | 13524 |
| ಹೇಮಾವತಿ ಜಲಾಶಯ | 37.10 | 36.14 | 5172 |
| ವರಾಹಿ ಜಲಾಶಯ | 31.10 | 22.19 | 1314 |
| ಹಾರಂಗಿ ಜಲಾಶಯ | 8.50 | 8.06 | 576 |
| ಸೂಫಾ | 145.33 | 124.45 | 25952 |
| ನಾರಾಯಣಪುರ | 33.31 | 31.68 | 28480 |
| ವಾಣಿವಿಲಾಸ ಸಾಗರ | 30.42 | 20.84 | 693 |












Click it and Unblock the Notifications