Karnataka Dam Water Level: ಭರ್ಜರಿ ಮಳೆಗೆ ಆಲಮಟ್ಟಿ ಜಲಾಶಯ ಭರ್ತಿ; 14 ಡ್ಯಾಂಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ಮಾಹಿತಿ
ಬೆಂಗಳೂರು, ಆಗಸ್ಟ್ 19: ಕಳೆದ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕರ್ನಾಟಕ ರಾಜ್ಯದ ಕೃಷ್ಣರಾಜ ಸಾಗರ , ಕಬಿನಿ ಸೇರಿದಂತೆ ಬಹುತೇಕ ಅಣೆಕಟ್ಟುಗಳು ತುಂಬಿ ಹರಿಯುತ್ತಿವೆ. ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದ ಕೃಷ್ಣ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಮುಂದುವರೆದಿದೆ. ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ.
ಆಲಮಟ್ಟಿ ಜಲಾಶಯ ಉತ್ತರ ಕರ್ನಾಟಕದ ಜೀವನಾಡಿಯಾಗಿದ್ದು, ಈ ಜಲಾಶಯ 9 ಜಿಲ್ಲೆಗಳಿಗೆ ನೀರು ಒದಗಿಸುತ್ತದೆ. ಈ ಬಾರಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಉತ್ತರ ಕರ್ನಾಟಕದ ಜೀವನದಿಯಾಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಹರಿದು ಬರುತ್ತಿದೆ. ಇದರಿಂದ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾನದಿಗೆ ಅಡ್ಡಲಾಗಿ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ನಿರ್ಮಾಣ ಮಾಡಲಾಗಿದೆ.

ನಿರಂತರವಾಗಿ ಸುರಿದ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಜಲಾಶಯ ಭರ್ತಿಯಾಗಿದೆ. ಹಾಗಾದರೆ ಇಂದು (ಆಗಸ್ಟ್ 19) ಕರ್ನಾಟಕದ ಪ್ರಮುಖ 14 ಜಲಾಶಯಗಳ ನೀರಿನ ಮಟ್ಟ ವಿವರ ಇಲ್ಲಿದೆ.
| ಕರ್ನಾಟಕದ ಜಲಾಶಯಗಳು | ಒಟ್ಟು ಸಾಮರ್ಥ್ಯ (ಟಿಎಂಸಿ) | ಇಂದಿನ ನೀರಿನ ಮಟ್ಟ (ಟಿಎಂಸಿ) | ಒಳಹರಿವು (ಕ್ಯೂಸೆಕ್ಸ್) |
| ಆಲಮಟ್ಟಿ ಜಲಾಶಯ | 123.08 | 123.08 | 17468 |
| ತುಂಗಭದ್ರಾ ಜಲಾಶಯ | 105.79 | 72.80 | 44038 |
| ಮಲಪ್ರಭಾ ಜಲಾಶಯ | 37.73 | 34.45 | 1644 |
| ಕೆಆರ್ ಎಸ್ | 49.45 | 47.46 | 13127 |
| ಲಿಂಗನಮಕ್ಕಿ ಜಲಾಶಯ | 151.75 | 144.58 | 6536 |
| ಕಬಿನಿ ಜಲಾಶಯ | 19.52 | 18.41 | 2966 |
| ಭದ್ರಾ ಜಲಾಶಯ | 71.52 | 64.28 | 7030 |
| ಘಟಪ್ರಭಾ ಜಲಾಶಯ | 51.00 | 51.00 | 3065 |
| ಹೇಮಾವತಿ ಜಲಾಶಯ | 37.10 | 36.19 | 5019 |
| ವರಾಹಿ ಜಲಾಶಯ | 31.10 | 21.67 | 751 |
| ಹಾರಂಗಿ ಜಲಾಶಯ | 8.50 | 8.04 | 1737 |
| ಸೂಫಾ ಜಲಾಶಯ | 145.33 | 122.72 | 3018 |
| ನಾರಾಯಣಪುರ ಜಲಾಶಯ | 492.25 | 33.31 | 21011 |
| ವಾಣಿವಿಲಾಸ ಸಾಗರ | 30.42 | 19.97 | 3004 |












Click it and Unblock the Notifications