Karnataka Dams Water Level: ಆಗಸ್ಟ್ 09ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
Karnataka Dam Water Level: ಕಳೆದ ಬಾರಿ ಅಂದರೆ 2023ರಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರಾಜ್ಯದ ಕೆರೆ-ಕಟ್ಟೆಗಳು, ನದಿ, ಜಲಾಶಯಗಳು ಸಂಪೂರ್ಣ ಬತ್ತಿಹೋಗುವ ಹಂತವನ್ನು ತಲುಪಿದ್ದವು. ಆದರೆ ಇದೀಗ ಈ ಬಾರಿ 2024ರ ಜೂನ್ ಆರಂಭವಾಗುತ್ತಿದ್ದಂತೆ ಮುಂಗಾರು ಆರ್ಭಟದಿಂದ ಬಹುತೇಕ ಪ್ರಮುಖ ಜಲಾಶಯಗಳು ತುಂಬಿದ್ದು, ಇನ್ನು ಕೆಲವು ಡ್ಯಾಂಗಳು ಭರ್ತಿಯಾಗುವ ಹಂತದಲ್ಲಿವೆ.
ಈಗಾಗಲೇ ಭಾರೀ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಅವಾಂತರಗಳೇ ಸೃಷ್ಟಿಯಾಗಿವೆ. ಅಲ್ಲದೆ, ಜಲಾಶಯಗಳು ಕೂಡ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗಳಿಗೆ ಹರಿಸಲಾಗುತ್ತಿದೆ. ಹಾಗಾದರೆ ಇಂದು (ಆಗಸ್ಟ್ 09) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿಯಾದ ಕೆಆರ್‌ಎಸ್ (ಕೃಷ್ಣರಾಜ ಸಾಗರ) ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 49.01 ಟಿಎಂಸಿ
* ಒಳಹರಿವು - 12,619 ಕ್ಯೂಸೆಕ್
* ಹೊರಹರಿವು - 12,575 ಕ್ಯೂಸೆಕ್
2. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 696.13 ಮೀಟರ್
* ಇಂದಿನ ನೀರಿನ ಮಟ್ಟ - 19.17 ಟಿಎಂಸಿ
* ಒಳಹರಿವು - 6,471 ಕ್ಯೂಸೆಕ್
* ಹೊರಹರಿವು - 6,350 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಇಂದಿನ ನೀರಿನ ಮಟ್ಟ - 100.93 ಟಿಎಂಸಿ
* ಒಳಹರಿವು - 2,77,959 ಕ್ಯೂಸೆಕ್
* ಹೊರಹರಿವು - 2,01,941 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 497.71 ಮೀಟರ್
* ಇಂದಿನ ನೀರಿನ ಮಟ್ಟ- 103.58 ಟಿಎಂಸಿ
* ಒಳಹರಿವು - 57,819 ಕ್ಯೂಸೆಕ್
* ಹೊರಹರಿವು - 60,142 ಕ್ಯೂಸೆಕ್
5. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 633.8 ಮೀಟರ್
* ಇಂದಿನ ನೀರಿನ ಮಟ್ಟ - 34.11 ಟಿಎಂಸಿ
* ಒಳಹರಿವು - 6,250 ಕ್ಯೂಸೆಕ್
* ಹೊರಹರಿವು - 3,194 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 554.44 ಮೀಟರ್
* ಇಂದಿನ ನೀರಿನ ಮಟ್ಟ - 142.92 ಟಿಎಂಸಿ
* ಒಳಹರಿವು - 15,360 ಕ್ಯೂಸೆಕ್
* ಹೊರಹರಿವು - 14,063 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 657.73 ಮೀಟರ್
* ಇಂದಿನ ನೀರಿನ ಮಟ್ಟ - 64.48 ಟಿಎಂಸಿ
* ಒಳಹರಿವು - 9,114 ಕ್ಯೂಸೆಕ್
* ಹೊರಹರಿವು - 6,811 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 662.91 ಮೀಟರ್
* ಇಂದಿನ ನೀರಿನ ಮಟ್ಟ - 49.76 ಟಿಎಂಸಿ
* ಒಳಹರಿವು - 10,138 ಕ್ಯೂಸೆಕ್
* ಹೊರಹರಿವು - 8,225 ಕ್ಯೂಸೆಕ್
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 890.58 ಮೀಟರ್
* ಇಂದಿನ ನೀರಿನ ಮಟ್ಟ - 37.10 ಟಿಎಂಸಿ
* ಒಳಹರಿವು - 12,619 ಕ್ಯೂಸೆಕ್
* ಹೊರಹರಿವು - 12,575 ಕ್ಯೂಸೆಕ್
10. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 871.38 ಮೀಟರ್
* ಇಂದಿನ ನೀರಿನ ಮಟ್ಟ - 7.81 ಟಿಎಂಸಿ
* ಒಳಹರಿವು - 3,542 ಕ್ಯೂಸೆಕ್
* ಹೊರಹರಿವು - 2,883 ಕ್ಯೂಸೆಕ್












Click it and Unblock the Notifications