karnataka Dams Water Level: 99 ಅಡಿಗೆ ಕುಸಿದ KRS, ಇನ್ನುಳಿದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟು?
ಕರ್ನಾಟಕ, ಸೆಪ್ಟೆಂಬರ್, 04: ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕು ಪಡೆದಿದೆ. ಕಳೆದ ಒಂದು ತಿಂಗಳಿನಿಂದಲೂ ಬಿಸಿಲಿನ ಬೇಗೆಯಿಂದ ಬೆಂದಿದ್ದ ಹಲವು ಜಿಲ್ಲೆಗಳಿಗೆ ಎರಡು ದಿನಗಳಿಂದ ಮಳೆರಾಯ ತಂಪೆರೆದಿದ್ದಾನೆ. ಅಲ್ಲದೆ ಕೆಲವೆಡೆ ಜಲಾಶಯಗಳ ನೀರಿನ ಮಟ್ಟ ಸುಧಾರಿಸುತ್ತಿದೆ. ಮಳೆ ಹೀಗೆ ಮುಂದುವರೆದರೆ ರಾಜ್ಯದ ಬಹುತೇಕ ಜಲಾಶಯಗಳ ನೀರಿನ ಮಟ್ಟದಲ್ಲಿ ತುಸು ಸುಧಾರಣೆ ಆದಂತಾಗುತ್ತಿದೆ. ಮತ್ತೊಂದೆಡೆ ಕೆಆರ್‌ಎಸ್ ಜಲಾಶಯದಲ್ಲಿ ಮಾತ್ರ ನೀರಿನ ಮಟ್ಟ 99 ಅಡಿಗೆ ಕುಸಿದಿದೆ.
ಮತ್ತೊಂದೆಡೆ ಆಗಸ್ಟ್‌ನಲ್ಲಿ ಸುಧೀರ್ಘ ಒಣಹವೆಯ ನಂತರ, ಕಲಬುರಗಿ, ಬೀದರ್, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಭಾನುವಾರದಂದು ಧಾರಾಕಾರ ಮಳೆ ಸುರಿದಿದ್ದು, ಇಲ್ಲಿನ ಸಣ್ಣಪುಟ್ಟ ಜಲಾಶಯಗಳು ತುಂಬಿ ಹರಿಯುತ್ತಿವೆ. ಹಾಗೆಯೇ ಇಂದು ಕೂಡ ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಇನ್ನು ಮೈಸೂರು, ಬೆಂಗಳೂರು, ಮಂಡ್ಯ ಜಿಲ್ಲೆಗಳ ಜೀವನಾಡಿಯಾದ ಕೃಷ್ಣ ರಾಜ ಸಾಗರ (KRS) ಜಲಾಶಯದ ನೀರಿನ ಮಟ್ಟ ಕಳೆದ ನಾಲ್ಕು ವಾರಗಳ ಹಿಂದೆ 115 ಅಡಿಗೆ ತಲುಪಿತ್ತು. ಆದರೆ ಆಗಸ್ಟ್ ತಿಂಗಳಿನಲ್ಲಿ ಮಳೆಯಿಲ್ಲದ ಕಾರಣ ಸತತವಾಗಿ ಕುಸಿಯುತ್ತಲೇ ಇದೆ. ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 99.46 ಅಡಿ ಇದೆ. ಹಾಗೆಯೇ ಇನ್ನುಳಿನ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.
1. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಇಂದಿನ ನೀರಿನ ಮಟ್ಟ - 2,855.29 ಅಡಿ
* ಒಳಹರಿವು - 404 ಕ್ಯೂಸೆಕ್
* ಹೊರಹರಿವು - 1,700 ಕ್ಯೂಸೆಕ್
2. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 99.46 ಅಡಿ
* ಒಳಹರಿವು - 4,214 ಕ್ಯೂಸೆಕ್
* ಹೊರಹರಿವು - 6,231 ಕ್ಯೂಸೆಕ್
3. ಆಲಮಟ್ಟಿ ಜಲಾಶಯ (ಮೀ)
* ಗರಿಷ್ಠ ನೀರಿನ ಮಟ್ಟ- 519.60 ಮೀಟರ್
* ಇಂದಿನ ನೀರಿನ ಮಟ್ಟ - 519.56 ಮೀಟರ್
* ಒಳಹರಿವು - 5,725 ಕ್ಯೂಸೆಕ್
* ಹೊರಹರಿವು - 3,689 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಇಂದಿನ ನೀರಿನ ಮಟ್ಟ- 1,624.39 ಅಡಿ
* ಒಳಹರಿವು - 1,450 ಕ್ಯೂಸೆಕ್
* ಹೊರಹರಿವು - 10,158 ಕ್ಯೂಸೆಕ್
5. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.50 ಅಡಿ
* ಇಂದಿನ ನೀರಿನ ಮಟ್ಟ - 2,066.15 ಅಡಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 1,194 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಇಂದಿನ ನೀರಿನ ಮಟ್ಟ - 1,784.60 ಅಡಿ
* ಒಳಹರಿವು - 1,149 ಕ್ಯೂಸೆಕ್
* ಹೊರಹರಿವು - 5,465 ಕ್ಯೂಸೆಕ್
7. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,273.74 ಅಡಿ
* ಒಳಹರಿವು - 855 ಕ್ಯೂಸೆಕ್
* ಹೊರಹರಿವು - 1,000 ಕ್ಯೂಸೆಕ್
8. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಇಂದಿನ ನೀರಿನ ಮಟ್ಟ - 163.6 ಅಡಿ
* ಒಳಹರಿವು - 388 ಕ್ಯೂಸೆಕ್
* ಹೊರಹರಿವು - 3,224 ಕ್ಯೂಸೆಕ್
9. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಇಂದಿನ ನೀರಿನ ಮಟ್ಟ - 2,162.58 ಅಡಿ
* ಒಳಹರಿವು - 750 ಕ್ಯೂಸೆಕ್
* ಹೊರಹರಿವು - 186 ಕ್ಯೂಸೆಕ್
10. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಇಂದಿನ ನೀರಿನ ಮಟ್ಟ - 2,905.68 ಅಡಿ
* ಒಳಹರಿವು - 774 ಕ್ಯೂಸೆಕ್
* ಹೊರಹರಿವು - 5,800 ಕ್ಯೂಸೆಕ್
11. ಸೂಪಾ ಜಲಾಶಯ (ಮೀ)
* ಗರಿಷ್ಠ ನೀರಿನ ಮಟ್ಟ - 564 ಮೀಟರ್
* ಇಂದಿನ ನೀರಿನ ಮಟ್ಟ - 545.50 ಮೀಟರ್
* ಒಳಹರಿವು - 1,224 ಕ್ಯೂಸೆಕ್
* ಹೊರಹರಿವು - 3,981 ಕ್ಯೂಸೆಕ್












Click it and Unblock the Notifications