Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ನವೆಂಬರ್ 9ರ ವರದಿ ಹೀಗಿದೆ
ಕರ್ನಾಟಕ, ನವೆಂಬರ್, 09: ರಾಜ್ಯದ ಹಲವೆಡೆ ಕಳೆದ ಒಂದು ವಾರದಿಂದ ಅಬ್ಬರದ ಮಳೆಯಾಗುತ್ತಿದೆ. ಭಾರೀ ಮಳೆ ಹಿನ್ನೆಲೆ ಕೆಲವು ಜಿಲ್ಲೆಗಳಲ್ಲಿ ನೀರಿನ ಮೂಲಗಳಿಗೆ ಜೀವಕಳೆ ಬಂದಂತಾಗಿದೆ. ಇನ್ನು ಮಂಡ್ಯ, ಬೆಂಗಳೂರು, ಮೈಸೂರು ಜಿಲ್ಲೆಗಳ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ ಜಲಾಶಯದಲ್ಲೂ ಒಳಹರಿವಿನ ಪ್ರಮಾಣ ಕೊಂಚ ಹೆಚ್ಚಳವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹಾಗಾದರೆ ಕೆಆರ್‌ಎಸ್ ಸೇರಿದಂತೆ ಇನ್ನುಳಿದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂದು ತಿಳಿಯಿರಿ.
ಜುಲೈನಲ್ಲಿ ಮಳೆರಾಯ ಅಬ್ಬರಿಸಿದ್ದು, ಆಗಸ್ಟ್ ತಿಂಗಳಿನಲ್ಲಿ ಸಂಪೂರ್ಣವಾಗಿ ಕೈಕೊಟ್ಟಿದ್ದ. ಬಳಿಕ ಅಕ್ಟೋಬರ್ ತಿಂಗಳಿನಲ್ಲೂ ಅಷ್ಟಕಷ್ಟೇ ಎನ್ನುವಂತೆ ಆಗಾಗ ಕೆಲವು ಕಡೆ ತುಂತುರು ಮಳೆಯಾದರೆ, ಇನ್ನು ಬಹುತೇಕ ಭಾಗಗಳಲ್ಲಿ ಬಿಸಿಲಿನ ವಾತಾವರಣವೇ ಮುಂದುವರೆದಿತ್ತು. ಇದೀಗ ನವೆಂಬರ್ ತಿಂಗಳ ಆರಂಭದಿಂದಲೂ ಹಿಂಗಾರು ಚುರುಕು ಪಡೆದಿದ್ದು, ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹಾಗೆಯೇ ಬತ್ತಿಹೋಗುವ ಹಂತ ತಪುಪಿದ್ದ ಜಲಾಶಯಗಳಿಗೂ ಜೀವಕಳೆ ಬಂದಂತಾಗಿದೆ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 22.55 ಟಿಎಂಸಿ
* ಒಳಹರಿವು - 3,411 ಕ್ಯೂಸೆಕ್
* ಹೊರಹರಿವು - 968 ಕ್ಯೂಸೆಕ್
2. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 871.38 ಮೀಟರ್
* ಇಂದಿನ ನೀರಿನ ಮಟ್ಟ - 5.50 ಟಿಎಂಸಿ
* ಒಳಹರಿವು - 81 ಕ್ಯೂಸೆಕ್
* ಹೊರಹರಿವು - 150 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಇಂದಿನ ನೀರಿನ ಮಟ್ಟ - 82.02 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 11,307 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 497.71 ಮೀಟರ್
* ಇಂದಿನ ನೀರಿನ ಮಟ್ಟ- 26.37 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 10,097 ಕ್ಯೂಸೆಕ್
5. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 633.80 ಮೀಟರ್
* ಇಂದಿನ ನೀರಿನ ಮಟ್ಟ - 18.02 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 1,023 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 554.44 ಮೀಟರ್
* ಇಂದಿನ ನೀರಿನ ಮಟ್ಟ - 64.68 ಟಿಎಂಸಿ
* ಒಳಹರಿವು - 4,140 ಕ್ಯೂಸೆಕ್
* ಹೊರಹರಿವು - 1,773 ಕ್ಯೂಸೆಕ್
7. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 696.13 ಮೀಟರ್
* ಇಂದಿನ ನೀರಿನ ಮಟ್ಟ - 14.14 ಟಿಎಂಸಿ
* ಒಳಹರಿವು - 4,858 ಕ್ಯೂಸೆಕ್
* ಹೊರಹರಿವು - 300 ಕ್ಯೂಸೆಕ್
8. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 657.73 ಮೀಟರ್
* ಇಂದಿನ ನೀರಿನ ಮಟ್ಟ - 36.18 ಟಿಎಂಸಿ
* ಒಳಹರಿವು - 2,016 ಕ್ಯೂಸೆಕ್
* ಹೊರಹರಿವು - 2,606 ಕ್ಯೂಸೆಕ್
9. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 662.91 ಮೀಟರ್
* ಇಂದಿನ ನೀರಿನ ಮಟ್ಟ - 40.64 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 141 ಕ್ಯೂಸೆಕ್
10. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 890.58 ಮೀಟರ್
* ಇಂದಿನ ನೀರಿನ ಮಟ್ಟ - 15.79 ಟಿಎಂಸಿ
* ಒಳಹರಿವು - 4,574 ಕ್ಯೂಸೆಕ್
* ಹೊರಹರಿವು - 1300 ಕ್ಯೂಸೆಕ್












Click it and Unblock the Notifications