Dam Water Levels: ಕರ್ನಾಟಕದಲ್ಲಿ ಜುಲೈ 28ರವರೆಗೆ ಮಳೆ ಮುನ್ಸೂಚನೆ: KRS ಸೇರಿ 13 ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

Dam Water Levels: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ. ಕರ್ನಾಟಕದಲ್ಲಿ ಜುಲೈ 28ರ ವರೆಗೆ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯು ಪರಿಚಲನೆ ಪ್ರಸ್ತುತ ಉತ್ತರ ಮಧ್ಯಪ್ರದೇಶದ ಮಧ್ಯ ಭಾಗಗಳ ಮೇಲೆ ನೆಲೆಗೊಂಡಿದ್ದು, ಇದು ಸರಾಸರಿ ಸಮುದ್ರಮಟ್ಟದಿಂದ 7.6 ಕಿ.ಮೀ. ಎತ್ತರದವರೆಗೆ ವಿಸ್ತರಿಸಿದೆ. ಎತ್ತರದೊಂದಿಗೆ ಆಗ್ನೇಯ ದಿಕ್ಕಿನತ್ತ ವಾಲಿದೆ. ಸರಾಸರಿ ಸಮುದ್ರಮಟ್ಟದಲ್ಲಿರುವ ಮುಂಗಾರು ಟ್ರಫ್ ರೇಖೆ (Monsoon Trough) ಪ್ರಸ್ತುತ ಬಿಕಾನೇರ್, ಬನಸ್ಥಳಿ ವಿದ್ಯಾಪೀಠ, ಗುನಾ, ದಮೋಹ್, ಪೆಂದ್ರಾ ರೋಡ್, ಮಿಡ್ವಾಫೋರ್ ಮೂಲಕ ಹಾದು, ಅಲ್ಲಿಂದ ಈಶಾನ್ಯ ಬಂಗಾಳ ಕೊಲ್ಲಿಯತ್ತ ಆಗ್ನೇಯ ದಿಕ್ಕಿನಲ್ಲಿ ಮುಂದುವರಿದಿದೆ. ಇದು ಸರಾಸರಿ ಸಮುದ್ರಮಟ್ಟದಿಂದ 3.1 ಕಿ.ಮೀ. ಎತ್ತರದವರೆಗೆ ವಿಸ್ತರಿಸಿದ್ದು, ಮೇಲಿನ ವಾಯು ಪರಿಚಲನೆಯಲ್ಲಿ ಎತ್ತರದೊಂದಿಗೆ ದಕ್ಷಿಣದ ಕಡೆಗೆ ವಾಲಿದೆ.

ಸುಮಾರು 22° ಉತ್ತರ ಅಕ್ಷಾಂಶದ (22°N Latitude) ಉದ್ದಕ್ಕೂ ಇರುವ ಪೂರ್ವ-ಪಶ್ಚಿಮ ಶಿಯರ್ ವಲಯ (East-West Shear Zone) ಮುಂದುವರಿದಿದ್ದು, ಇದು ಪ್ರಸ್ತುತ ಸರಾಸರಿ ಸಮುದ್ರಮಟ್ಟದಿಂದ 5.8 ರಿಂದ 7.6 ಕಿ.ಮೀ. ಎತ್ತರದ ನಡುವೆ ಕಂಡುಬರುತ್ತಿದೆ. ಮೇಲ್ಕಂಡ ವಾಯು ಪರಿಚಲನೆಯ ಪ್ರದೇಶದಲ್ಲಿ ಎತ್ತರ ಹೆಚ್ಚಾದಂತೆ ದಕ್ಷಿಣದತ್ತ ವಾಲಿದೆ ಎಂದೂ ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ. ಕರ್ನಾಟಕದಲ್ಲಿ ವಿವಿಧ ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಜಲಾಯಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಜುಲೈ 23ರ ಗುರುವಾರ ಕರ್ನಾಟಕದ 13 ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

Karnataka Dam Water Levels

ಕೆಆರ್‌ಎಸ್ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 124.80
ಇಂದಿನ ಮಟ್ಟ: 92.24
ಒಳಹರಿವು: 852
ಹೊರಹರಿವು: 1801 ಕ್ಯೂಸೆಕ್ಸ್‌ಗಳಲ್ಲಿ

ಹಾರಂಗಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,859
ಇಂದಿನ ಮಟ್ಟ: 2,854.13
ಒಳಹರಿವು: 3,145
ಹೊರಹರಿವು: 180 ಕ್ಯೂಸೆಕ್ಸ್‌ಗಳಲ್ಲಿ

ಕಬಿನಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,284.00
ಇಂದಿನ ಮಟ್ಟ: 227.65
ಒಳಹರಿವು: 3,132
ಹೊರಹರಿವು: 500 ಕ್ಯೂಸೆಕ್ಸ್‌ಗಳಲ್ಲಿ

ಹೇಮಾವತಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,922
ಇಂದಿನ ಮಟ್ಟ: 2904.50
ಒಳಹರಿವು: 1058
ಹೊರಹರಿವು: 600 ಕ್ಯೂಸೆಕ್ಸ್‌ಗಳಲ್ಲಿ

ಲಿಂಗನಮಕ್ಕಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 1,819
ಇಂದಿನ ಮಟ್ಟ: 1,767.25
ಒಳಹರಿವು: 13,308
ಹೊರಹರಿವು: 2,199 ಕ್ಯೂಸೆಕ್ಸ್‌ಗಳಲ್ಲಿ

ಸೂಪಾ ಜಲಾಶಯ

ಗರಿಷ್ಠ ಮಟ್ಟ (ಮೀ.ಗಳಲ್ಲಿ): 564
ಇಂದಿನ ಮಟ್ಟ: 532
ಒಳಹರಿವು: 16,908
ಹೊರಹರಿವು: 282.73 ಕ್ಯೂಸೆಕ್ಸ್‌ಗಳಲ್ಲಿ

ಮಾಣಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 595
ಇಂದಿನ ಮಟ್ಟ: 578.90
ಒಳಹರಿವು: 1,984
ಹೊರಹರಿವು: 1,209

ತುಂಗಭದ್ರಾ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 1,633
ಇಂದಿನ ಮಟ್ಟ: 1,603.54
ಒಳಹರಿವು: 10,938
ಹೊರಹರಿವು: 3,184

ಮಲಪ್ರಭಾ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,079.5
ಇಂದಿನ ಮಟ್ಟ: 2,055.60
ಒಳಹರಿವು: 1,814
ಹೊರಹರಿವು: 194

ಘಟಪ್ರಭಾ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,175
ಇಂದಿನ ಮಟ್ಟ: 2,135.93
ಒಳಹರಿವು: 11,749
ಹೊರಹರಿವು: 145

ಭದ್ರಾ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 186
ಇಂದಿನ ಮಟ್ಟ: 150.4
ಒಳಹರಿವು: 6,331
ಹೊರಹರಿವು: 174

ಆಲಮಟ್ಟಿ ಜಲಾಶಯ

ಗರಿಷ್ಠ ಮಟ್ಟ (ಮೀ.ಗಳಲ್ಲಿ): 519.60
ಇಂದಿನ ಮಟ್ಟ: 518.25
ಒಳಹರಿವು: 63,792
ಹೊರಹರಿವು: 42,500

ನಾರಾಯಣಪುರ ಜಲಾಶಯ

ಗರಿಷ್ಠ ಮಟ್ಟ (ಮೀ. ಗಳಲ್ಲಿ): 492.25
ಇಂದಿನ ಮಟ್ಟ: 489.26
ಒಳಹರಿವು: 14,771
ಹೊರಹರಿವು: 6,000

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+