Karnataka Dam Water Level: ಭಾರೀ ಮಳೆ, KRS, ಕಬಿನಿ, ಹಾರಂಗಿ ಡ್ಯಾಂಗಳ ಹೊರಹರಿವು ಹೆಚ್ಚಳ, ಇಂದಿನ ಮಟ್ಟ
ಬೆಂಗಳೂರು, ಜುಲೈ 02: ಕರ್ನಾಟಕ ರಾಜ್ಯದ ಹಳೆ ಮೈಸೂರು ಭಾಗ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮಳೆ ಮತ್ತಷ್ಟು ಚುರುಕಾಗಲಿದೆ. ಈಗಾಗಲೇ ಬಂದ ಮಳೆಯಿಂದಾಗಿ ರಾಜ್ಯದ ಪ್ರಮುಖ ಅಣೆಕಟ್ಟುಗಳ ಭರ್ತಿಯಾಗಿವೆ. ಅವಧಿಗು ಮೊದಲೇ ಕೆಲವು ನದಿಗಳು, ಜಲಾಶಯಗಳು ತುಂಬಿ ಹರಿಯುತ್ತಿವೆ. ಮಳೆಗಾದ ಮೊದಲ ಒಂದೇ ತಿಂಗಳಲ್ಲಿ (ಜೂನ್) ಉತ್ತಮ ಮಳೆಯಿಂದಾಗಿ ಡ್ಯಾಂ ಒಳ ಹಾಗೂ ಹೊರ ಹರಿವು ಏರಿಕೆ ಆಗಿದೆ. ಇಂದಿನ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ.
ತಲಕಾವೇರಿ, ಕೊಡಗು, ಹಳೇ ಮೈಸೂರು ಭಾಗದ ಪ್ರದೇಶಗಳು, ಕೇರಳದ ಅರಣ್ಯ ಪ್ರದೇಶ, ಪಶ್ಚಿಮ ಘಟ್ಟಗಳು ಸೇರಿದಂತೆ ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಆಗುತ್ತಿದೆ. ಪರಿಣಾಮ ಕೃಷ್ಣ ರಾಜಸಾಗರ, ಹೇಮಾವತಿ, ಕಬಿನಿ, ಹಾರಂಗಿ, ಆಲಮಟ್ಟಿ ಸೇರಿದಂತೆ ಅನೇಕ ಡ್ಯಾಂಗಳು ತುಂಬಿ ಹರಿಯುತ್ತಿವೆ. ಜುಲೈ 3ರಂದು ಗುರುವಾರ ಸಾವಿರಾರು ಕ್ಯೂಸೆಕ್ ನೀರು ಹೊರ ಬಿಡುವ ಸಾಧ್ಯತೆ ಇದೆ. ನದಿ ಪಾತ್ರದ ಜನರಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ.

ಜುಲೈ 3ರಂದು ಗುರುವಾರ ಕಾವೇರಿ ನೀರಾವರಿ ನಿಗಮ ಮತ್ತಷ್ಟು ನೀರನ್ನು ಹೊರ ಬಿಡಲು ತೀರ್ಮಾನಿಸಿದೆ. ಕಾವೇರಿ ನದಿಗೆ ಮಾತ್ರವಲ್ಲದೇ ಆಯಾ ಜಲಾಶಯಗಳಿಂದ ಉಪ ನದಿಗಳಿಗೆ ನೀರು ಹರಿಸಲಿದೆ. ಅದರ ಪಟ್ಟಿ ಇಲ್ಲಿದೆ.
* ಕೆಆರ್‌ಎಸ್ ಅಣೆಕಟ್ಟು : 16,100 ಕ್ಯೂಸೆಕ್
* ಹೇಮಾವತಿ ಅಣೆಕಟ್ಟು : 12,000 ಕ್ಯೂಸೆಕ್
* ಕಬಿನಿ ಅಣೆಕಟ್ಟು : 7400 ಕ್ಯೂಸೆಕ್
* ಹಾರಂಗಿ ಅಣೆಕಟ್ಟು: 3500 ಕ್ಯೂಸೆಕ್
* ಮೆಟ್ಟೂರು ಅಣೆಕಟ್ಟು: 35,300 ಕ್ಯೂಸೆಕ್
ಕರ್ನಾಟಕ ಅಣೆಕಟ್ಟುಗಳ ಇಂದಿನ (ಜುಲೈ 2) ಮಟ್ಟ
KRS ಜಲಾಶಯದ ಇಂದಿನ ಮಟ್ಟ
* ಡ್ಯಾಂ ಒಟ್ಟು ಎತ್ತರ: 124.80 ಅಡಿ
* ಇಂದಿನ ಡ್ಯಾಂ ನೀರಿನ ಸಂಗ್ರಹ: 124.74 ಅಡಿ
* ಒಟ್ಟು ನೀರಿನ ಸಾಮರ್ಥ್ಯ: 49.452 ಟಿಎಂಸಿ
* ಇಂದಿನ ಡ್ಯಾಂ ನೀರು ಸಂಗ್ರಹ: 49.368 ಟಿಎಂಸಿ
* ಒಳಹರಿವು: 15,180 ಕ್ಯೂಸೆಕ್
* ಹೊರಹರಿವು: 15,941 ಕ್ಯೂಸೆಕ್
ಹಾರಂಗಿ ಅಣೆಕಟ್ಟಿನ ಒಟ್ಟು ವಿವರ
* ಡ್ಯಾಂ ಒಟ್ಟು ಎತ್ತರ : 2859 ಅಡಿ
* ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 8.5 ಟಿಎಂಸಿ
* ಇಂದಿನ ನೀರು ಸಂಗ್ರಹ: 6.49 ಟಿಎಂಸಿ
* ಒಳಹರಿವು : 3688 ಕ್ಯೂಸೆಕ್
* ಹೊರಹರಿವು : 1500 ಕ್ಯೂಸೆಕ್ (ನದಿ)
ಕಬಿನಿ ಜಲಾಶಯದ ನೀರಿನ ಮಾಹಿತಿ
* ಡ್ಯಾಂ ಒಟ್ಟು ಎತ್ತರ: 2284 ಅಡಿ
* ಸಂಗ್ರಹವಾದ ನೀರಿನ ಪ್ರಮಾಣ: 2277.46 ಅಡಿ
* ಡ್ಯಾಂ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 19.52 ಟಿಎಂಸಿ
* ಇಂದಿನ ನೀರು ಸಂಗ್ರಹಣೆ: 15.61 ಅಡಿ
* ಒಳಹರಿವು : 7496 ಕ್ಯೂಸೆಕ್
* ಹೊರಹರಿವು : 5729 ಕ್ಯೂಸೆಕ್
ಹೇಮಾವತಿ ಡ್ಯಾಂ ನೀರಿನ ಸಂಗ್ರಹ
* ಅಣೆಕಟ್ಟಿನ ಒಟ್ಟು ಎತ್ತರ: 2922 ಅಡಿಗಳು
* ಇಂದಿನ ನೀರು ಸಂಗ್ರಹ: 2917.47 ಅಡಿಗಳು
* ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 37.10 ಟಿಎಂಸಿ
* ಇಂದಿನ ನೀರು ಸಂಗ್ರಹ : 32.844 ಟಿಎಂಸಿ
* ಒಳಹರಿವು:13,521 ಕ್ಯೂಸೆಕ್ಸ್
* ಹೊರಹರಿವು ನದಿ: 11,860 ಕ್ಯೂಸೆಕ್ಸ್
ಕರ್ನಾಟಕದಾದ್ಯಂತ ಮುಂದಿನ ಒಂದು ವಾರಗಳ ಕಾಲ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಮಲೆನಾಡಿನಲ್ಲಿ ಈಗಾಗಲೇ ಮಳೆ ಮುಂದುವರಿದಿದೆ. ಹೀಗೆ ಮಳೆ ಶುರುವಿಟ್ಟುಕೊಂಡರೆ ನದಿಗಳಲ್ಲಿ ಒಳಹರಿವು ಮತ್ತಷ್ಟು ಹೆಚ್ಚಾಗು ನಿರೀಕ್ಷೆ ಇದೆ.












Click it and Unblock the Notifications