Karnataka Dam Water Level: ಭಾರೀ ಮಳೆ, ಆಲಮಟ್ಟಿ ಒಳಹರಿವು ಹೆಚ್ಚಳ, ಇತರ ಪ್ರಮುಖ ಡ್ಯಾಂಗಳ ನೀರಿನ ಮಟ್ಟ

ಬೆಂಗಳೂರು, ಜೂನ್ 12: ಕರ್ನಾಟಕದಾದ್ಯಂತ ವರ್ಷಧಾರೆ ಅಬ್ಬರ ಜೋರಾಗಿದೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ನರ್ತನ ಶುರುವಾಗಿದೆ. ತುಂತುರು ಮಳೆ ಬರುವ ಜಾಗಗಳಲ್ಲಿ ಭಾರೀ ಮಳೆ, ಭಾರೀ ಮಳೆಯ ಬರುವ ಸ್ಥಳಗಳಲ್ಲಿ ಅತ್ಯಧಿಕ ಹೇರಳ ಮಳೆ ದಾಖಲಾಗುತ್ತಿದೆ. ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳ ಒಳಹರಿವು, ನದಿ ನೀರಿನ ಸಂಗ್ರಹದಲ್ಲಿ ಭಾರೀ ಏರಿಕೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.

ಜೂನ್ 12ರಿಂದ ರಾಜ್ಯಾದ್ಯಂತ ಮೂರು ದಿನ ಭಾರೀ ಮಳೆ ಆಗಲಿದೆ. ಈಗಾಗಲೇ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೇಮಾವತಿ, ತುಂಗಭದ್ರಾ, ಹಾರಂಗಿ, ಕೆಆರ್‌ಎಸ್ ಸೇರಿದಂತೆ ವಿವಿಧ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೆಚ್ಚಾಗಿದೆ. ಬೇಸಿಗೆ ಕಳೆದು ಎರಡು ವಾರಗಳಲ್ಲೇ ಜಲಾಶಯಗಳ ನೀರಿನ ಒಳಹರಿವು ಭಾರೀ ಪ್ರಮಾಣದಲ್ಲಿ ಏರಿಕೆ ಆಗಿದೆ. ಹಾಗಾದರೆ KSNDMC ಪ್ರಕಾರ, ಯಾವೆಲ್ಲ ಜಲಾಶಗಳ ನೀರಿನ ಸಂಗ್ರಹ ಇಂದು ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

Karnataka Dam Water Level on June 12th Almatti Inflow 12 641 cusecs Raised Due Heavy Rain

ಕರ್ನಾಟಕದ ಆಲಮಟ್ಟಿ ಅಣೆಕಟ್ಟಿನಲ್ಲಿ ಇಂದಿನ ಒಳಹರಿವು 12,641 ಕ್ಯೂಸೆಕ್ ನಷ್ಟಿದೆ. ಈ ಒಂದೇ ದಿನ 2000 ಹೊರ ಹರಿವು ಕಂಡು ಬಂದಿದೆ. ಕೆಲವು ತುಂಗಭದ್ರಾ ಡ್ಯಾಂನಲ್ಲಿ ಕ್ರೆಸ್ಟ್ ಗೇಟ್ ಸುರಕ್ಷತೆ ಕಾರಣಕ್ಕೆ ಹೆಚ್ಚಿನ ನೀರು ಹೊರ ಬಿಡಲಾಗುತ್ತಿದೆ ಎಂಬ ಮಾಹಿತಿ ಇದೆ.

ಕಬಿನಿ ಡ್ಯಾಂ ನೀರಿನ ಮಟ್ಟ

* ನೀರಿನ ಒಟ್ಟು ಸಂಗ್ರಹ: 19.52 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 15.60 ಟಿಎಂಸಿ
* ಇಂದಿನ ಒಳಹರಿವು: 1796 ಕ್ಯೂಸೆಕ್
* ಒಟ್ಟು ಹೊರ ಹರಿವು: 5000 ಕ್ಯೂಸೆಕ್

ಭದ್ರಾ ಜಲಾಶಯದ ವಿವರ

* ನೀರಿನ ಒಟ್ಟು ಸಂಗ್ರಹ: 72.51 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 29.35 ಟಿಎಂಸಿ
* ಇಂದಿನ ಒಳಹರಿವು: 2364 ಕ್ಯೂಸೆಕ್
* ಒಟ್ಟು ಹೊರ ಹರಿವು: 268 ಕ್ಯೂಸೆಕ್

ಹಾರಂಗಿ ಡ್ಯಾಂ ನೀರಿನ ವಿವರ

* ನೀರು ಸಂಗ್ರಹದ ಒಟ್ಟು ಸಾಮರ್ಥ್ಯ: 8.5 ಟಿಎಂಸಿ
* ಇಂದಿನ ನೀರು ಸಂಗ್ರಹ: 6.218 ಟಿಎಂಸಿ
* ಇಂದಿನ ಒಳಹರಿವು: 1689 ಕ್ಯೂಸೆಕ್
* ಒಟ್ಟು ಹೊರ ಹರಿವು: 2000 ಕ್ಯೂಸೆಕ್

KRS ಅಣೆಕಟ್ಟಿನ ಇಂದಿನ ಮಾಹಿತಿ

* ನೀರಿನ ಒಟ್ಟು ಸಂಗ್ರಹ: 49.452 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 30.377 ಟಿಎಂಸಿ
* ಇಂದಿನ ಒಳಹರಿವು:844 ಕ್ಯೂಸೆಕ್
* ಒಟ್ಟು ಹೊರ ಹರಿವು: 894 ಕ್ಯೂಸೆಕ್

ತುಂಗಭದ್ರಾ ಅಣೆಕಟ್ಟಿನ ನೀರು ಸಂಗ್ರಹ

* ನೀರಿನ ಒಟ್ಟು ಸಂಗ್ರಹ: 105. 79 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 24.89 ಟಿಎಂಸಿ
* ಇಂದಿನ ಒಳಹರಿವು: 5306 ಕ್ಯೂಸೆಕ್
* ಒಟ್ಟು ಹೊರ ಹರಿವು: 96 ಕ್ಯೂಸೆಕ್

ಹೇಮಾವತಿ ಡ್ಯಾಂ ನೀರು ಸಂಗ್ರಹ

* ನೀರಿನ ಒಟ್ಟು ಸಂಗ್ರಹ: 37.10 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 24.71 ಟಿಎಂಸಿ
* ಇಂದಿನ ಒಳಹರಿವು: 1412 ಕ್ಯೂಸೆಕ್
* ಒಟ್ಟು ಹೊರ ಹರಿವು: 350 ಕ್ಯೂಸೆಕ್

ಆಲಮಟ್ಟಿ ಡ್ಯಾಂ ನೀರು ಸಂಗ್ರಹ

* ನೀರಿನ ಒಟ್ಟು ಸಂಗ್ರಹ: 123 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 61.48 ಟಿಎಂಸಿ
* ಇಂದಿನ ಒಳಹರಿವು: 12,641 ಕ್ಯೂಸೆಕ್
* ಒಟ್ಟು ಹೊರ ಹರಿವು: 2000 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+