3,000 ರೂಪಾಯಿಗೆ ಗೃಹಲಕ್ಷ್ಮೀ ಯೋಜನೆ ಹಣ ಏರಿಕೆ ಮಾಡಲು... Gruha Lakshmi

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಂತರ ಹಲವು ಸವಾಲುಗಳನ್ನ ಎದುರಿಸುತ್ತಿದ್ದು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನ ಮುಂದುವರಿಸಲು ಕೈಯಲ್ಲಿ ಕಾಸು ಇಲ್ಲದೆ ಬೆಲೆ ಏರಿಕೆ ಮಾಡುತ್ತಿದೆ ಎಂಬ ಆರೋಪವನ್ನು ವಿರೋಧ ಪಕ್ಷಗಳ ನಾಯಕರು ಈಗ ಮಾಡುತ್ತಿದ್ದಾರೆ. ವಿಜಯೇಂದ್ರ ನೇತೃತ್ವದಲ್ಲಿ ಈಗಾಗಲೇ ವಿರೋಧ ಪಕ್ಷದ ನಾಯಕರು ಭಾರಿ ದೊಡ್ಡ ಪ್ರತಿಭಟನೆ ಶುರು ಮಾಡಿದ್ದಾರೆ. ಹೀಗಿದ್ದಾಗಲೇ, 3,000 ರೂಪಾಯಿಗೆ ಗೃಹಲಕ್ಷ್ಮೀ ಯೋಜನೆ ಹಣ ಏರಿಕೆ ಮಾಡಲು...

ಬಿಜೆಪಿ ಇಡೀ ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ, ಆದರೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದು ಬೀಗುವಲ್ಲಿ ಗ್ಯಾರಂಟಿ ಯೋಜನೆಗಳು ಪ್ರಮುಖವಾದ ಪಾತ್ರ ಬೀರಿ ಸಂಚಲನ ಸೃಷ್ಟಿ ಮಾಡಿದ್ದವು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಯೋಜನೆ, ಪ್ರತಿ ಕುಟುಂಬದ ಆಹಾರ ಭದ್ರತೆಗೆ ಅನ್ನಭಾಗ್ಯ ಯೋಜನೆ, ಬಡವರ ಮನೆಗಳಿಗೆ ಉಚಿತವಾಗಿ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಯುವ ಸಮುದಾಯಕ್ಕೆ ಕೆಲಸ ಸಿಗುವವರೆಗೂ ನೆರವಾಗುವ ಯುವನಿಧಿ ಯೋಜನೆ, ಇದೆಲ್ಲವನ್ನೂ ಮೀರಿ ಮಹಿಳೆಯರಿಗೆ ಪ್ರತಿ ತಿಂಗಳೂ 2,000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆ ಭಾರಿ ಸದ್ದು ಮಾಡುತ್ತಿದೆ!

Karnataka CM Siddaramaiah Faces Demand to Increase Gruha Lakshmi Scheme Amount To 3000 Rupees

3,000 ರೂಪಾಯಿಗೆ ಗೃಹಲಕ್ಷ್ಮೀ ಹಣ ಏರಿಕೆ...

ಗೃಹಲಕ್ಷ್ಮೀ ಯೋಜನೆ ಕಾಂಗ್ರೆಸ್ ಸರ್ಕಾರಕ್ಕೆ ಭಾರಿ ದೊಡ್ಡ ಹೊರೆಯಾಗಿದ್ದು, ಪ್ರತಿ ತಿಂಗಳು ಸಾವಿರಾರು ಕೋಟಿ ರೂಪಾಯಿ ಇದೇ ಯೋಜನೆಗೆ ಹಣ ಹೊಂದಿಸಬೇಕಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳು ಹೊರೆಯಾಗುತ್ತಿವೆ ಎಂಬ ಆರೋಪದ ನಡುವೆ ಇದೀಗ ಬೆಲೆ ಏರಿಕೆ ಮಾಡಲಾಗಿದ್ದು, ದೊಡ್ಡ ಚರ್ಚೆ ಕೂಡ ನಡೆಯುತ್ತಿದೆ. ಈ ಸಮಯದಲ್ಲೇ, 3,000 ರೂಪಾಯಿಗೆ ಗೃಹಲಕ್ಷ್ಮೀ ಯೋಜನೆ ಹಣ ಏರಿಕೆ ಮಾಡಲು...

3000 ರೂಪಾಯಿ? ಅಥವಾ 2000 ರೂಪಾಯಿ?

ಹೌದು, ರಾಜ್ಯದಲ್ಲಿ ಎಲ್ಲಾ ಬೆಲೆ ಏರಿಕೆ ಮಾಡಿರುವ ಕಾರಣಕ್ಕೆ ಇದೀಗ ಗೃಹಲಕ್ಷ್ಮೀ ಯೋಜನೆ ಹಣವನ್ನೂ ಏರಿಕೆ ಮಾಡಬೇಕು ಎಂಬ ಬೇಡಿಕೆ ಶುರುವಾಗಿದೆ. 3000 ರೂಪಾಯಿಗೆ ಗೃಹಲಕ್ಷ್ಮೀ ಯೋಜನೆ ಹಣ ಏರಿಕೆ ಮಾಡಲು ಇದೀಗ ಗೃಹಿಣಿಯರು ಬೇಡಿಕೆ ಇಡುತ್ತಿದ್ದಾರೆ. ಬೆಲೆ ಏರಿಕೆ ಹಿನ್ನೆಲೆ ಗ್ಯಾರಂಟಿ ಯೋಜನೆಯ ಹಣ ಕೂಡ ಏರಿಕೆ ಆಗಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಆದರೆ 2000 ರೂಪಾಯಿ ಕೊಡುವುದಕ್ಕೇ ಕಷ್ಟ ಆಗುತ್ತಿರುವ ಸಮಯದಲ್ಲಿ, 3000 ರೂಪಾಯಿಗೆ ಗೃಹಲಕ್ಷ್ಮೀ ಯೋಜನೆ ಹಣ ಏರಿಕೆ ಮಾಡುವುದು ಅನುಮಾನ ಎಂಬ ವಾದ ಕೂಡ ಮೂಡಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದೆ. ಹೀಗಾಗಿ ಸರ್ಕಾರ ಯಾವ ನಡೆ ಇಡುತ್ತದೆ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+