ಕರ್ನಾಟಕ ಸಿಇಟಿ ಫಲಿತಾಂಶಕ್ಕೆ ಕ್ಷಣಗಣನೆ ಆರಂಭ
Recommended Video

ಬೆಂಗಳೂರು, ಜೂನ್ 1: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಇಂದು(ಜೂನ್.1) ರಂದು ಪ್ರಕಟವಾಗಲಿದೆ. ಈ ಮೊದಲು ಮೇ 26ರಂದು ಸಿಇಟಿ ಫಲಿತಾಂಶ ಪ್ರಕಟವಾಗಬೇಕಿತ್ತು.
ದ್ವಿತೀಯ ಪಿಯುಸಿ ಫಲಿತಾಂಶ ಗೊಂದಲದಿಂದ ಮೇ.26ರಂದು ಪ್ರಕಟವಾಗಬೇಕಿದ್ದ ಫಲಿತಾಂಶ ಜೂನ್ 1ರಂದು ಮಧ್ಯಾಹ್ನ 1 ಗಂಟೆಗೆ
ಗಂಟೆಗೆ ಪ್ರಕಟವಾಗಲಿದೆ ಎಂದು ಹೇಳಲಾಗುತ್ತಿದೆ.
(http://kea.kar.nic.in/cet_2015.htm ಹಾಗೂ http://karresults.nic.in/) ಸೇರಿದಂತೆ ಕೆಲ ವೆಬ್ ಸೈಟ್ ಗಳಲ್ಲಿ ಮಾತ್ರ ಸಿಇಟಿ ಫಲಿತಾಂಶ ಪ್ರಕಟಗೊಳ್ಳಲಿದೆ.

ಈ ಬಾರಿ ಕರ್ನಾಟಕ ಸಿಇಟಿ ಮೇ 12 ಹಾಗೂ 13 ರಂದು ನಡೆಸಲಾಯಿತು. ಒಟ್ಟು 1,57,580 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಬೆಂಗಳೂರಿನಲ್ಲಿ 73 ಕೇಂದ್ರಗಳು ಸೇರಿದಂತೆ ರಾಜ್ಯಾದ್ಯಂತ 343 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು ಇದರಲ್ಲಿ 82079 ವಿದ್ಯಾ ರ್ಥಿಗಳಿದ್ದರೆ, 75501 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು.
ಮೆಡಿಕಲ್, ಡೆಂಟಲ್ ಅಥವಾ ಇಂಜಿನಿಯರಿಂಗ್ ಪೂರ್ಣಾವಧಿ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.












Click it and Unblock the Notifications