ಮಂಗಳವಾರ ಮಧ್ಯಾಹ್ನ ಕರ್ನಾಟಕ ಸಿಇಟಿ ಫಲಿತಾಂಶ
ಬೆಂಗಳೂರು, ಮೇ 27: ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಮೇ 4ರಂದು ನಡೆದಿದ್ದ ಸಿಇಟಿ ಫಲಿತಾಂಶ ಮಂಗಳವಾರ ಮೇ.27ರಂದು ಪ್ರಕಟಗೊಳ್ಳಲಿದೆ.
ಮಧ್ಯಾಹ್ನ 12 ಗಂಟೆಗೆ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಭಾಂಗಣದಲ್ಲಿ ಸಿಇಟಿ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. ಮಧ್ಯಾಹ್ನ ಒಂದು ಗಂಟೆಯ ನಂತರ ಫಲಿತಾಂಶ ಕೆಇಎ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ.

ಈ ವರ್ಷ 1.40 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದು,ರಾಜ್ಯದ 314 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಕಾಲೇಜುಗಳಲ್ಲಿರುವ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಈ ವರ್ಷ ಯಾವುದೇ ಗೊಂದಲ ಇಲ್ಲ. ಕಳೆದ ಬಾರಿ ಖಾಸಗಿ ಕಾಲೇಜು ಮತ್ತು ಸರ್ಕಾರಗಳ ನಡುವಿನ ಒಪ್ಪಂದ ಮುಂದುವರಿಯುದರಿಂದ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಕಳೆದ ಬಾರಿ ಲಭ್ಯವಿದ್ದ 50 ಸಾವಿರ ಇಂಜಿನಿಯರಿಂಗ್, 1400 ದಂತ ವೈದ್ಯಕೀಯ, 2095 ವೈದ್ಯಕೀಯ ಸೀಟುಗಳು ಸರ್ಕಾರಿ ಕೋಟಾದಡಿ ಲಭ್ಯವಾಗಲಿದೆ.
ಈ ಕೆಳಕಂಡ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ.
httto://karresults.nic.in
http://cet.kar.nic.in
http://kea. kar.nic.in
www.bangaloreEducation.com












Click it and Unblock the Notifications