ಸಿಇಟಿ ಪರೀಕ್ಷೆ: ಸರ್ಕಾರ ಮೊದಲ ಶ್ರೇಣಿಯಲ್ಲಿ ಪಾಸ್

ಬೆಂಗಳೂರು, ಮೇ, 04: "ಕರ್ನಾಟಕ ಪಿಯು ಬೋರ್ಡ್ ನ ಅಗತ್ಯವೇ ಇಲ್ಲ, ಇದು ಕೇವಲ ಲೀಕ್ ಮಾಡುವುದಕ್ಕೆ ಮಾತ್ರ ಇರುವ ಬೋರ್ಡ್, ಸುಮ್ಮನೆ ಸಿಬಿಎಸ್ ಇ ಬೋರ್ಡ್ ಜತೆ ವಿಲೀನ ಮಾಡಿಬಿಡಿ" ಇದು ಸಿಇಟಿ ಬರೆದು ಹೊರಬಂದ ವಿದ್ಯಾರ್ಥಿಯೊಬ್ಬರ ನೋವು ಭರಿತ ಆಕ್ರೋಶದ ಮಾತು.

ಇದಕ್ಕೆ ಅವರು ಕೊಡುವ ಕಾರಣವನ್ನು ಒಪ್ಪಿಕೊಳ್ಳಲೇಬೇಕು. ಸಿಇಟಿ ಪತ್ರಿಕೆಗಳು ಯಾವುದು ಸೋರಿಕೆಯಾಗಿಲ್ಲ. ಆದರೆ ಹಿಂದೆ ಎರಡು ಸಾರಿ ಸೋರಿಕೆಯಾಗಿದ್ದ ಕೆಮಿಸ್ಟ್ರಿ ಪತ್ರಿಕೆಯ ಪರಿಣಾಮ ಅವರನ್ನು ಇನ್ನು ಕಾಡುತ್ತಿದೆ.[ಸಿಇಟಿ ಬರೆದು ಬಂದ ವಿದ್ಯಾರ್ಥಿಗಳು ಏನಂದ್ರು?]

ಮತ್ತೆ ಮತ್ತೆ ಒಂದೇ ಪರೀಕ್ಷೆ ಬರೆಯಬೇಕಾದ ಅನಿವಾರ್ಯತೆ ಎದುರಾದಾಗ ಇತರೆ ವಿಷಯಗಳಿಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗಲಿಲ್ಲ. ಜತೆಗೆ ಸಮಯದ ಅವಕಾಶವೂ ಕಡಿಮೆಯಾಗುತ್ತಾ ಬಂತು ಎಂದು ಆಕ್ರೋಶ ಹೊರಹಾಕಿದರು.

ಸಿಇಟಿ ಪರೀಕ್ಷೆಯನ್ನು ಕರ್ನಾಟಕ ಸರ್ಕಾರ ಯಶಸ್ವಿಯಾಗಿ ಮಾಡಿ ಮುಗಿಸಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದು ಮುಗಿಸಿದ ವಿದ್ಯಾರ್ಥಿಗಳು ಒನ್ ಇಂಡಿಯಾದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.[ಪಿಯು ಪತ್ರಿಕೆ ಸೋರಿಕೆ: ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಯ ಬಹಿರಂಗ ಪತ್ರ]

ಬೆಂಗಳೂರಿನ 82 ಕೇಂದ್ರಗಳು ಸಹಿತ ರಾಜ್ಯದ ಒಟ್ಟು 391 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಗಳು ನಡೆದವು. ಬುಧವಾರ ಬೆಳಗ್ಗೆ ಜೀವಶಾಸ್ತ್ರ ಮತ್ತು ಮಧ್ಯಾಹ್ನ ಗಣಿತ ಪರೀಕ್ಷೆಗಳು ನಡೆದರೆ, ಮೇ 5ರ ಗುರುವಾರ ಭೌತಶಾಸ್ತ್ರ(ಬೆಳಗ್ಗೆ) ಮತ್ತು ರಸಾಯನಶಾಸ್ತ್ರ(ಮಧ್ಯಾಹ್ನ) ಪರೀಕ್ಷೆಗಳು ನಡೆದವು.

ನೀಟ್(ನ್ಯಾಶನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್) ಗೊಂದಲದ ನಡುವೆಯೇ ಮಕ್ಕಳು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದು ಮುಗಿಸಿದ್ದಾರೆ. ವಿದ್ಯಾರ್ಥಿಗಳು ಹೇಳುವಂತೆ ಈ ಬಾರಿ ಸಿಇಟಿ ಪರೀಕ್ಷೆಗಳು ಸುಲಭವಾಗಿದ್ದವು. ಭೌತಶಾಸ್ತ್ರ ಪರೀಕ್ಷೆ ಹೊರತು ಪಡಿಸಿದರೆ ಉಳಿದೆಲ್ಲ ಪರೀಕ್ಷೆಗಳು ಸರಳವಾಗಿದ್ದವು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಿಯು ಬೋರ್ಡ್ ಅಗತ್ಯವಿಲ್ಲ

ಪಿಯು ಬೋರ್ಡ್ ಅಗತ್ಯವಿಲ್ಲ

ಹೆಸರಿಗೆ ಮಾತ್ರ ಇರುವ ಕರ್ನಾಟಕ ಪಿಯು ಬೋರ್ಡ್ ನಿಂದ ಯಾರಿಗೂ ಲಾಭ ಇಲ್ಲ. ವಿದ್ಯಾರ್ಥಿಗಳಿಗೆ ಗೊಂದಲ ಸೃಷ್ಟಿಸುವ ಬೋರ್ಡ್ ನ್ನು ಸಿಬಿಎಸ್ ಇ ಜತೆ ವಿಲೀನ ಮಾಡಿಬಿಡಿ-ವಿಶ್ವನಾಥ್ ಭಾವಿಕಟ್ಟಿ

ನೀಟ್ ಬೇಕು

ನೀಟ್ ಬೇಕು

ನೀಟ್ ಪರೀಕ್ಷೆ ಮಾಡಲಿ ತೊಂದರೆ ಏನಿಲ್ಲ. ಸಿಇಟಿ ಬರೆಯದವರಿಗೆ ಇನ್ನೊಂದು ಅವಕಾಶ ಸಿಕ್ಕಿದಂತಾಗುತ್ತದೆ. ಅಲ್ಲದೇ ದೇಶಾದ್ಯಂತ ಏಕರೂಪದ ಮಾನದಂಡ ಅಳವಡಿಕೆ ಮಾಡಿದಂತೆ ಆಗುತ್ತದೆ- ಅಕ್ಷಯಾ, ದುಬೈ

ವ್ಯವಸ್ಥೆ ಉತ್ತಮ

ವ್ಯವಸ್ಥೆ ಉತ್ತಮ

ಪರೀಕ್ಷೆ ಸರಳವಾಗಿತ್ತು. ಕುಡಿಯುವ ನೀರು ಮತ್ತು ಗಡಿಯಾರದ ವ್ಯವಸ್ಥೆಗಳು ಉತ್ತಮವಾಗಿದ್ದವು. ಯಾವುದೇ ಸಮಸ್ಯೆ ಎದುರಾಗಲಿಲ್ಲ.- ಚಿತ್ರಗುಪ್ತ, ನಾರಾಯಣ ಪಿಯು ಕಾಲೇಜ್ ಎಚ್ ಎಸ್ ಆರ್ ಲೇಔಟ್,

 ಸುಲಭವಾಗಿತ್ತು

ಸುಲಭವಾಗಿತ್ತು

ಪಿಯು ಪರೀಕ್ಷೆಗೆ ಹೋಲಿಕೆ ಮಾಡಿದರೆ ಸಿಇಟಿ ಸುಲಭವಾಗಿತ್ತು. ಗಣಿತಕ್ಕೆ ಸಂಬಂಧಿಸಿ ಸರ್ಕಾರ ಹೇಳಿದಂತೆ ಗ್ರೇಸ್ ಮಾರ್ಕ್ ನೀಡಿದರೆ ಉತ್ತಮ ಫಲಿತಾಂಶ ಸಾಧ್ಯವಿದೆ.-ಸತೀಶ್ ರೆಡ್ಡಿ

ಕಾಲೇಜಿನಲ್ಲೇ ಕೋಚಿಂಗ್

ಕಾಲೇಜಿನಲ್ಲೇ ಕೋಚಿಂಗ್

ಕಾಲೇಜಿನಲ್ಲೇ ಕೋಚಿಂಗ್ ಪಡೆದುಕೊಂಡಿದ್ದೇನೆ. ಮನೆಯಲ್ಲೇ ಹೆಚ್ಚಿನ ಅಧ್ಯಯನ ಮಾಡಿ ಪರೀಕ್ಷೆಯನ್ನು ಉತ್ತಮವಾಗಿ ನಿರ್ವಹಿಸಿದ್ದು ಅಷ್ಟೇ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ. ಆರ್ ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುವ ಆಸೆ ಇದೆ.
ಸಂಜೀವ್, ಸರ್ಜಾಪುರ,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+