ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರ ಸಿಇಟಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದ ಕೆಇಎ

|
Google Oneindia Kannada News

ಬೆಂಗಳೂರು, ಜನವರಿ 11 : 2019ನೇ ಸಾಲಿನ ಸಿಇಟಿ ಪರೀಕ್ಷೆ ದಿನಾಂಕ ಘೋಷಣೆಯಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಈ ಬಾರಿಯ ಸಿಇಟಿ ಪರೀಕ್ಷೆಗಳು ನಡೆಯಲಿವೆ.

ಶುಕ್ರವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2019ರ ಸಿಇಟಿ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಸಿದೆ. ಏಪ್ರಿಲ್ 23, 24 ಮತ್ತು 25ರಂದು ಪರೀಕ್ಷೆಗಳು ನಡೆಯಲಿದೆ.

ಶೀಘ್ರದಲ್ಲೇ ಸಿಇಟಿ ಆಗಲಿದೆ ಆನ್‌ಲೈನ್, ಪೆನ್‌-ಪೇಪರ್ ವ್ಯವಸ್ಥೆಗೆ ತಿಲಾಂಜಲಿಶೀಘ್ರದಲ್ಲೇ ಸಿಇಟಿ ಆಗಲಿದೆ ಆನ್‌ಲೈನ್, ಪೆನ್‌-ಪೇಪರ್ ವ್ಯವಸ್ಥೆಗೆ ತಿಲಾಂಜಲಿ

Karnataka CET exam 2019 dates announced

ಈ ವರ್ಷದಿಂದ ಆನ್‌ಲೈನ್ ಮೂಲಕ ಸಿಇಟಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದರು. ಆದರೆ, ಈ ಬಾರಿ ಆನ್‌ಲೈನ್ ಮೂಲಕ ಪರೀಕ್ಷೆಗಳನ್ನು ನಡೆಸಲು ಅಗತ್ಯ ಸೌಲಭ್ಯಗಳು ಇಲ್ಲದ ಹಿನ್ನಲೆಯಲ್ಲಿ ಈಗ ಪರೀಕ್ಷಾ ದಿನಾಂಕ ಘೋಷಣೆ ಮಾಡಲಾಗಿದೆ.

ಕರ್ನಾಟಕ ಸಿಇಟಿ 2018ರ ಫಲಿತಾಂಶ:ಶ್ರೀಧರ್ ದೊಡ್ಮನಿ ಪ್ರಥಮ ರ‍್ಯಾಂಕ್ಕರ್ನಾಟಕ ಸಿಇಟಿ 2018ರ ಫಲಿತಾಂಶ:ಶ್ರೀಧರ್ ದೊಡ್ಮನಿ ಪ್ರಥಮ ರ‍್ಯಾಂಕ್

ಗುರುವಾರ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸುವ ಕುರಿತು ಚರ್ಚೆಗಳು ನಡೆದವು. ಪರೀಕ್ಷೆಗೆ ಕೇವಲ 2 ತಿಂಗಳು ಇದೆ ಎಂದು ಸಭೆಯಲ್ಲಿ ಅಧಿಕಾರಿಗಳು ಹೇಳಿದರು.

ಈಗ ತರಾತುರಿಯಲ್ಲಿ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುವುದು ಕಷ್ಟ. ಪರೀಕ್ಷೆಗಾಗಿ ತಂತ್ರಾಂಶ ಸಿದ್ಧಪಡಿಸಲಾಗುತ್ತಿದೆ. 2020ರ ವೇಳೆಗೆ ಪರೀಕ್ಷೆಗಳನ್ನು ನಡೆಸಬಹುದು ಎಂದು ಅಧಿಕಾರಿಗಳು ಹೇಳಿದರು.

ಈ ಹಿನ್ನಲೆಯಲ್ಲಿ ಸಭೆಯ ಬಳಿಕ ಜಿ.ಟಿ.ದೇವೇಗೌಡ ಅವರು, 'ಈ ವರ್ಷ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಲು ಸಾಧ್ಯವಿಲ್ಲ' ಎಂದು ಘೋಷಣೆ ಮಾಡಿದರು.

English summary
Karnataka Examination Authority (KEA) has announced the dates of CET exam 2019. Exam will be held on April 24 to 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X