DK Shivakumar: ಕರ್ನಾಟಕ ಸಂಪುಟದ ಖಾತೆ ಹಂಚಿಕೆ ಅಂತಿಮ; ಹೊಸ ಸಚಿವರ ಕೈಗೆ ಯಾವೆಲ್ಲ ಇಲಾಖೆಗಳು?
ಬೆಂಗಳೂರು: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಮತ್ತು ನೂತನ ಸಚಿವರಾಗಿ ಅಧಿಕಾರ ವಹಿಕೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಖಾತೆ ಹಂಚಿಕೆಯನ್ನು ಫೈನಲ್ ಮಾಡಿದ್ದಾರೆ. ಬುಧವಾರ ಬೆಳಗ್ಗೆ ಇನ್ನೂ ಗೊಂದಲವಾಗಿದ್ದ ಖಾತೆ ಹಂಚಿಕೆಯು ಸಂಜೆ ಹೊತ್ತಿಗೆ ಎಲ್ಲವೂ ಅಂತಿಮಗೊಂಡಿದ್ದು, ಒಟ್ಟು 19 ನೂತನ ಸಚಿವರಿಗೆ ವಿವಿಧ ಇಲಾಖೆಗಳ ಜವಾಬ್ದಾರಿ ವಹಿಸಿದ್ದಾರೆ. ಈ ಪಟ್ಟಿಗೆ ರಾಜ್ಯಪಾಲರಿಂದ ಅಂಕಿತವು ಬಿದ್ದಿದೆ.
ಆಗಸ್ಟ್ 3ರಂದು ಎರಡನೇ ಹಂತದಲ್ಲಿ ಒಟ್ಟು 19 ಮಂದಿ ನೂತನ ಸಚಿವರು ಅಧಿಕಾರ ಸ್ವೀಕರಿಸಿದ್ದರು. ಆದರೆ ಅವರಿಗೆ ಯಾವೆಲ್ಲ ಖಾತೆ ಸಿಗಲಿವೆ ಎಂಬ ಕುತೂಹಲ ಇತ್ತು. ಅಲ್ಲದೇ ಈ ಎರಡನೇ ಪಟ್ಟಿಯಲ್ಲಿ ಕೆ.ಎಚ್. ಮುನಿಯಪ್ಪ ಅವರು ಖಾತೆ ಬದಲಾವಣೆ ಆಗಿದೆ ಮತ್ತು ಯುಟಿ ಖಾದರ್ ಅವರಿಗೆ ಹೆಚ್ಚುವರಿ ಖಾತೆಗಳ ಜವಾಬ್ದಾರಿ ನೀಡಲಾಗಿದೆ.

ಡಿಕೆ ಶಿವಕುಮಾರ್ ಅವರು ಅಂತಿಮಗೊಳಿಸಿ ಲೋಕಭವನಕ್ಕೆ ರವಾನಿಸಿದ್ದ ನೂತನ ಸಚಿವರ ಪಟ್ಟಿಯಲ್ಲಿ ಯಾರು ಯಾರಿಗೆ ಯಾವ ಖಾತೆಗಳು ಹಂಚಿಕೆಯಾಗಿವೆ ಎಂಬ ಪೂರ್ಣ ಮಾಹಿತಿ, ಪಟ್ಟಿ ಮುಂದಿದೆ.
ಎಲ್ಲ ಸಚಿವರಿಗೆ ಖಾತೆ ಹಂಚಿಕೆ ಫೈನಲ್ ಪಟ್ಟಿ ಇಲ್ಲಿದೆ
1. ರಿಜ್ವಾನ್ ಅರ್ಷದ್ - ಆಹಾರ ನಾಗರಿಕ ಪೂರೈಕೆ ಇಲಾಖೆ
2. ಡಾ. ಅಜಯ್ ಸಿಂಗ್ - ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ
3. ಹೆಚ್. ಸಿ. ಬಾಲಕೃಷ್ಣ - ಪೌರಾಡಳಿತ ಖಾತೆ
4. ಕೆ. ಎಸ್. ಬಸವಂತಪ್ಪ - ಮುಜರಾಯಿ, ಮೀನು ಮತ್ತು ಬಂದರು ಒಳಾಡಳಿತ
5. ಸಂತೋಷ್ ಲಾಡ್ - ಕಾರ್ಮಿಕ ಇಲಾಖೆ
6. ಮಧು ಬಂಗಾರಪ್ಪ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
7. ಎಸ್. ಎಸ್. ಮಲ್ಲಿಕಾರ್ಜುನ್ - ಗಣಿ ಮತ್ತು ಭೂ ವಿಜ್ಞಾನ
8. ಎನ್. ಚಲುವರಾಯಸ್ವಾಮಿ - ಜಲಸಂಪನ್ಮೂಲ ಇಲಾಖೆ
9. ಬಿ. ಝಡ್. ಜಮೀರ್ ಅಹಮದ್ ಖಾನ್ - ವಸತಿ ಇಲಾಖೆ
10. ಸಿ. ಪುಟ್ಟರಂಗಶೆಟ್ಟಿ - ಪಶುಸಂಗೋಪನೆ ಮತ್ತು ರೇಷ್ಮೆ
11. ಬಸವರಾಜ ರಾಯರೆಡ್ಡಿ - ಉನ್ನತ ಶಿಕ್ಷಣ ಇಲಾಖೆ
12. ಲಕ್ಷ್ಮಣ ಸವದಿ - ಸಹಕಾರ ಇಲಾಖೆ
13. ಮುನಿಯಪ್ಪ - ಸಮಾಜ ಕಲ್ಯಾಣ
14. ಯುಟಿ ಖಾದರ್ - ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
15. ಕೆ. ಎಂ. ಶಿವಲಿಂಗೇಗೌಡ - ಅಬಕಾರಿ
16. ಪಿ. ಎಂ. ನರೇಂದ್ರಸ್ವಾಮಿ - ಕೃಷಿ ಇಲಾಖೆ
17. ವಿಜಯಾನಂದ ಕಾಶಪ್ಪನವರ್ - ಸಣ್ಣ ಕೈಗಾರಿಕೆ
18. ರುದ್ರಪ್ಪ ಲಮಾಣಿ - ಸಕ್ಕರೆ ಮತ್ತು ಜವಳಿ ಇಲಾಖೆ
19. ಬಿ. ನಾಗೇಂದ್ರ - ಯೋಜನೆ ಮತ್ತು ಸಾಂಖ್ಯಿಕ ಇಲಾಖೆ
20. ಶಿವರಾಜ್ ತಂಗಡಗಿ - ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
21. ಟಿ. ರಘುಮೂರ್ತಿ - ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ
22. ರಾಮಲಿಂಗಾರೆಡ್ಡಿ - ಅರಣ್ಯ ಮತ್ತು ಪರಿಸರ ಇಲಾಖೆ
ಇಂದಿನ ಖಾತೆ ಹಂಚಿಕೆ ಬಳಿಕ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಎಲ್ಲ ಇಲಾಖೆಗಳ ಜವಾಬ್ದಾರಿಯನ್ನು ಆಯಾ ಸಚಿವರಿಗೆ ನೀಡಿದಂತಾಗಿದೆ. ನಾಳೆ ಗುರುವಾರ ಆಗಸ್ಟ್ 13ರಿಂದ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಈ ಎಲ್ಲ ನೂತನ ಸಚಿವರು ಹಾಗೂ ಸಿಎಂ , ಡಿಸಿಎಂ ರಾಜ್ಯದ ಜಲ್ವಂತ ಸಮಸ್ಯೆಗಳನ್ನು ಚರ್ಚಿಸಲಿದ್ದಾರೆ. ಆಡಳಿತ ಪಕ್ಷದ ಮೇಲೆ ಮುಗಿ ಬೀಳಲು ಬಿಜೆಪಿ ಸಜ್ಜಾಗಿದೆ.


Click it and Unblock the Notifications
