Karnataka Budget 2023: ಈ ಬಾರಿ ಬಜೆಟ್‌ ಗಾತ್ರವೆಷ್ಟು, ಯಾವ ಇಲಾಖೆಗೆ ಎಷ್ಟು ಹಣ ತಿಳಿಯಿರಿ

ಬೆಂಗಳೂರು, ಜುಲೈ 7: ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 14ನೇ ಬಜೆಟ್‌ ಅನ್ನು ಮಂಡಿಸಿದ್ದಾರೆ. ಈ ಬಾರಿ ಗ್ಯಾರಂಟಿಗಳಿಗೆ ಒತ್ತು ನೀಡುವ ಅವರು ಸರ್ವಸ್ಪರ್ಶಿ ಬಜೆಟ್‌ ಅನ್ನು ಮಂಡಿಸಿದ್ದಾರೆ.

ಈ ಬಾರಿ ಬಜೆಟ್ ಗಾತ್ರ 3,27,747 ಲಕ್ಷ ಕೋಟು ರೂ ಗಾತ್ರದ್ದಾಗಿದೆ. ಇದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿಯೇ 7ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. 3.27 ಲಕ್ಷ ಕೋಟಿ ರೂ ಬಜೆಟ್​ನಲ್ಲಿ ಸಾಲ ಮರುಪಾವತಿಗೆ 22,441 ಕೋಟಿ ರೂ ವ್ಯಯವಾಗಲಿದೆ. ಇನ್ನು ಬಂಡವಾಳ ಹೂಡಿಕೆಗಳಿಗೆ 54,374 ಕೋಟಿ ರೂ ವೆಚ್ಚ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Karnataka Budget 2023: Whats the Budget Size and Allocation for Different Departments?

ಐದು ಗ್ಯಾರಂಟಿ ಯೋಜನೆಗಳಿಗೆ 52,000 ಕೋಟಿ ರೂ ವ್ಯಯವಾಗುತ್ತದೆ ಎಂದು ಹೇಳಿದ ಸಿದ್ದರಾಮಯ್ಯ, ಕೇಂದ್ರದಿಂದ ತೆರಿಗೆ ಪಾಲಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ದೂರಿದ್ದಾರೆ. ಕರ್ನಾಟಕ ಹೆಚ್ಚು ತೆರಿಗೆ ಸಂಗ್ರಹಿಸಿದರೂ ಶೇ. 3.65ರಷ್ಟು ಮಾತ್ರ ತೆರಿಗೆ ಪಾಲು ಸಿಗುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ದ್ರೋಹ ಬಗೆಯಲಾಗಿದೆ ಎಂದು ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.

ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿದ ಅನುದಾನ

1. ಶಿಕ್ಷಣ: 37,587 ಕೋಟಿ ರೂ.

2. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 24,166 ಕೋಟಿ ರೂ.

3. ನೀರಾವರಿ: 19,044 ಕೋಟಿ

4. ಇಂಧನ: 22,773 ಕೋಟಿ

5. ಗ್ರಾಮೀಣಾಭಿವೃದ್ಧಿ ಇಲಾಖೆ: 18,038 ಕೋಟಿ

6. ಒಳಾಡಳಿತ ಮತ್ತು ಸಾರಿಗೆ: 16,638 ಕೋಟಿ

7. ಕಂದಾಯ ಇಲಾಖೆ: 16,167 ಕೋಟಿ

8. ಆರೋಗ್ಯ ಇಲಾಖೆ: 14,950 ಕೋಟಿ

9. ಸಮಾಜ ಕಲ್ಯಾಣ ಇಲಾಖೆ: 11,173 ಕೋಟಿ

10. ಆಹಾರ ಮತ್ತು ನಾಗರಿಕ ಪೂರೈಕೆ: 10,460 ಕೋಟಿ

11. ಲೋಕೋಪಯೋಗಿ ಇಲಾಖೆ: 10,143 ಕೋಟಿ

12. ಕೃಷಿ: 5,860 ಕೋಟಿ

13. ಪಶುಸಂಗೋಪನೆ ಮತ್ತು ಮೀನುಗಾರಿಕೆ: 3,024 ಕೋಟಿ

ಇತರೆ: 1,09,639 ಕೋಟಿ

2023-24ನೇ ಸಾಲಿನ ರಾಜ್ಯ ಬಜೆಟ್​ ಗಾತ್ರ 3,27,747 ಲಕ್ಷ ಕೋಟಿ ರೂಪಾಯಿ ಆಗಿದೆ. ಸರ್ವ ಜನಾಂಗದ ಶಾಂತಿಯ ತೋಟ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಲ್ಲಿ ಸಿದ್ದರಾಮಯ್ಯ ಅವರು ಇಂದು 14ನೇ ಬಾರಿ ರಾಜ್ಯ ಬಜೆಟ್‌ ಮಂಡಿಸಿದ್ದಾರೆ.

Karnataka Budget 2023: Whats the Budget Size and Allocation for Different Departments?

ಮೂರು ಪ್ರಮುಖ ಇಲಾಖೆಯಿಂದ ರಾಜಸ್ವ ಗುರಿ

1. ವಾಣಿಜ್ಯ ತೆರಿಗೆ ಇಲಾಖೆ - 1,01,000 ಲಕ್ಷ ಕೋಟಿ

2. ಅಬಕಾರಿ ರಾಜಸ್ವ - 36000 ಕೋಟಿ

3. ನೋಂದಣಿ ಮತ್ತು ಮುದ್ರಾಂಕ - 25,000 ಕೋಟಿ

4. ಸರ್ಕಾರವು ಒಟ್ಟು - 1.,62,000 ಕೋಟಿ ರಾಜಸ್ವ ಗುರಿ ಹೊಂದಿದೆ.

ವಾಹನ ನೋದಂಣಿಯಿಂದ 11,500 ಕೋಟಿ ಆದಾಯ ಬರುವ ನಿರೀಕ್ಷೆ ಇಟ್ಟುಕೊಂಡಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 9 ಸಾವಿರ ಕೋಟಿ ಆದಾಯ ನಿರೀಕ್ಷೆ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+