ಯಡಿಯೂರಪ್ಪ ಸಂಪುಟ ಸೇರಲು ಹಾತೊರೆಯುತ್ತಿರುವ ಶಾಸಕರ ಪಟ್ಟಿ

ಬೆಂಗಳೂರು, ಮೇ 17: 'ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಾನೇ' ಎಂದು ಯಡಿಯೂರಪ್ಪ ಅವರು ಚುನಾವಣೆ ಫಲಿತಾಂಶಕ್ಕೂ ಮುನ್ನ ಘೋಷಣೆ ಮಾಡುವಾಗ ಎಲ್ಲರೂ ಆಡಿಕೊಂಡು ನಗಾಡಿದ್ದರು. ಇದೇನು ಆತ್ಮವಿಶ್ವಾಸವೋ, ಭ್ರಮೆಯೋ ಎಂದವರೇ ಹೆಚ್ಚು. ಆದರೆ, ಬಿಎಸ್ ಯಡಿಯೂರಪ್ಪ ಅವರು ಅಂದುಕೊಂಡಂತೆ ಎಲ್ಲವೂ ನಡೆದಿದೆ. ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ರಾಮಕೃಷ್ಣ ಹೆಗಡೆ ಅವರ ನಂತರ ಮೂರನೇ ಬಾರಿಗೆ ಸಿಎಂ ಆಗಿ ಅಧಿಕಾರಿ ಸ್ವೀಕರಿಸಿ ದಾಖಲೆ ಬರೆದಿರುವ ಯಡಿಯೂರಪ್ಪ ಅವರು ಈಗ ಮುಂದಿನ 15 ದಿನಗಳೊಳಗೆ ತಮ್ಮ ಬಳಿ ಇರುವ 104 ಶಾಸಕರ ಸಂಖ್ಯೆಯನ್ನು 112ಕ್ಕೇರಿಸಬೇಕು. ಇದನ್ನು ಹೇಗೆ ಸಾಧಿಸುತ್ತಾರೋ ಕಾದು ನೋಡಬೇಕಿದೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ತಿಳಿಸುತ್ತೇನೆ ಎಂದು ಸಿಎಂ ಆಗಿ ಮೊದಲ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.

ಸದನದಲ್ಲಿ ನೂತನ ಸ್ಪೀಕರ್ ಆಯ್ಕೆ, ನೂತನ ಶಾಸಕರ ಪ್ರಮಾಣ ವಚನ ಸಂಭ್ರಮ ಮುಗಿದ ಬಳಿಕ ವಿಶ್ವಾಸಮತ ಗಳಿಸುವ ಅಗ್ನಿ ಪರೀಕ್ಷೆಗೆ ಒಳಪಡಲಿದ್ದಾರೆ. ಈ ಪರೀಕ್ಷೆಯಲ್ಲಿ ಗೆಲುವ ಸಾಧಿಸಿದರೆ ಮುಂದಿನ ದೊಡ್ಡ ಕೆಲಸವೆಂದರೆ, ಸಂಪುಟ ವಿಸ್ತರಣೆ.

 Karnataka BS Yeddyurappa cabinet expansion Probable MLAs lobby list

ಸದ್ಯಕ್ಕೆ ಲಭ್ಯವಿರುವ ಮಾಹಿತಿಯಂತೆ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿಸುವ ಸಾಧ್ಯತೆ ಹೆಚ್ಚಿದೆ. ಮಿಕ್ಕಂತೆ ಯಡಿಯೂರಪ್ಪ ಅವರ ಆಪ್ತರಿಗೆ ಸಂಪುಟದಲ್ಲಿ ಸ್ಥಾನಗಳು ಸಿಗಲಿವೆ.

ಈಗ ಸಂಪುಟ ಸೇರಲು ಹಾತೊರೆಯುತ್ತಿರುವ ಶಾಸಕರ ಪಟ್ಟಿ ಹೀಗಿದೆ:
1. ಬಿಎಸ್ ಯಡಿಯೂರಪ್ಪ
2. ಬಿ ಶ್ರೀರಾಮುಲು
3. ಕೆಎಸ್ ಈಶ್ವರಪ್ಪ
4. ಆರ್ ಅಶೋಕ
5. ಸುರೇಶ್ ಕುಮಾರ್
6. ಗೋವಿಂದ ಕಾರಜೋಳ
7. ಬಸವರಾಜ ಬೊಮ್ಮಾಯಿ
8 ಸಿಎಂ ಉದಾಸಿ
9 ಬಾಲಚಂದ್ರ ಜಾರಕಿಹೊಳಿ
10 ಸಿದ್ದು ಸವದಿ
11 ವೀರಣ್ಣ ಚರಂತಿ ಮಠ
12 ಬಸನಗೌಡ ಪಾಟೀಲ್ ಯತ್ನಾಳ್
13 ಜಗದೀಶ್ ಶೆಟ್ಟರ್
14 ಗೂಳಿಹಟ್ಟಿ ಶೇಖರ್
15 ಎಸ್ ವಿ ರಾಮಚಂದ್ರ
16 ಸಿಟಿ ರವಿ
17 ಡಾ ಅಶ್ವಥನಾರಾಯಣ
18 ವಿ ಸೋಮಣ್ಣ
19 ಅರವಿಂದ ಲಿಂಬಾವಳಿ
20 ಎಸ್ಎ ರಾಮದಾಸ್
21 ಶಶಿಕಲಾ ಜೊಲ್ಲೆ
22 ಮುರುಗೇಶ್ ನಿರಾಣಿ
23 ರಾಜುಗೌಡ
24 ವಿಶ್ವೇಶ್ವರ ಹೆಗ್ಡೆ ಕಾಗೇರಿ
25 ರೇಣುಕಾಚಾರ್ಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+