ಬಿಜೆಪಿಯ ಉದ್ಘಾಟನಾ ರ‍್ಯಾಲಿ 'ಫ್ಲಾಪ್ ಶೋ' ಆಗಿದ್ದು ಈ ಕಾರಣಕ್ಕಾ?

Posted By:
Subscribe to Oneindia Kannada

ಕಳೆದೆರಡು ತಿಂಗಳಿನಿಂದ ಪೂರ್ವತಯಾರಿ ಮಾಡಿಕೊಂಡಿ ಬರುತ್ತಿದ್ದ ಬಿಜೆಪಿಯ ಬಹುನಿರೀಕ್ಷಿತ 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ' ರಾಜ್ಯ ಬಿಜೆಪಿ ಘಟಕಕ್ಕೆ ಹೊಸ ಚೈತನ್ಯ ನೀಡುವ ಬದಲು, ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿದೆ.

ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ

ಸಮಾವೇಶದ ಖಾಲಿಖಾಲಿ ನೀಲಿ ಕುರ್ಚಿಗಳು ಬಿಜೆಪಿಯನ್ನು ಅಣಕವಾಡಲು ವಿರೋಧಿಗಳಿಗೆ ಸರಿಯಾದ ಅಸ್ತ್ರ ಸಿಕ್ಕಂತಾಗಲು ಕಾರಣ, ಬಿಜೆಪಿಯವರ ಆಂತರಿಕ ಕಲಹವೇ ಹೊರತು, ಸಮಾವೇಶ ಯಶಸ್ವಿಯಾಗದೇ ಇರಲು ಇತರ ಎರಡು ಪ್ರಮುಖ ಪಕ್ಷಗಳು ಪ್ರಯತ್ನಿಸಲಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.

ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ, ಮುಂದೇನು?

ಬಿಸಿಲು, ಸರಿಯಾದ ಸಮಯಕ್ಕೆ ಆರಂಭವಾಗದ ಸಮಾವೇಶ, ಟ್ರಾಫಿಕ್ ಜಾಮ್ ಎಲ್ಲವೂ ಸಮಾವೇಶ ಯಶಸ್ವಿಯಾಗದಿದ್ದಕ್ಕೆ ಕೊಡಬಹುದಾದ ಒಂದು 'ನೆಪ' ಮಾತ್ರ, ಅಸಲಿಗೆ ರಾಜ್ಯ ಬಿಜೆಪಿ ಘಟಕದ ಮುಂದುವರಿದ ಒಗ್ಗಟ್ಟಿನ ಕೊರತೆಯೇ ಸಮಾವೇಶ 'ಫ್ಲಾಪ್ ಶೋ' ಆಗಲು ಕಾರಣ ಎನ್ನಲಾಗುತ್ತಿದೆ.

ಬಿಜೆಪಿಯ ಕರ್ನಾಟಕ ಪರಿವರ್ತನಾ ಯಾತ್ರೆ: ಇಲ್ಲಿದೆ ಮಾರ್ಗಸೂಚಿ ವಿವರ

ಜನ ಇಲ್ಲದೇ ಇರುವುದಕ್ಕೆ ಅಸಮಾಧಾನದಿಂದಲೇ ವೇದಿಕೆ ಏರಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜನರತ್ತ ಕೈಬೀಸಿ, ಯಾಕೆ ಸಮಾವೇಶವನ್ನು ಸರಿಯಾಗಿ ಆಯೋಜಿಸಲಿಲ್ಲ ಎಂದು ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರ ಬಳಿ ಬೇಸರ ವ್ಯಕ್ತ ಪಡಿಸಿದರು ಎನ್ನುವ ಮಾಹಿತಿಯಿದೆ.

2ನೇ ದಿನಕ್ಕೆ ಕಾಲಿಟ್ಟ ಪರಿವರ್ತನಾ ಯಾತ್ರೆ: ತುರುವೆಕೆರೆಯಲ್ಲಿ ಬಿಜೆಪಿ ನಾಯಕರು

ಮಹಿಳೆಯೊಬ್ಬರಿಗೆ ಪರಿವರ್ತನಾ ಯಾತ್ರೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲು ವರಿಷ್ಠರು ನಿರ್ಧಾರಿಸಿದ ನಂತರ, ಇದು ರಾಜ್ಯ ಬಿಜೆಪಿ ಘಟಕದಲ್ಲಿ ಅಸಮಾಧಾನದ ಹೊಗೆ ಏಳಲು ಕಾರಣವಾಯಿತು ಎನ್ನುವ ಮಾತಿದೆ. ಇದನ್ನು ಶಮನಗೊಳಿಸಲು ಬೆಂಗಳೂರಿನಲ್ಲಿನ ಉದ್ಘಾಟನಾ ರ‍್ಯಾಲಿಯ ಜವಾಬ್ದಾರಿಯನ್ನು ಆರ್ ಅಶೋಕ್ ಅವರಿಗೆ ವಹಿಸಲಾಗಿತ್ತು. ಮುಂದೆ ಓದಿ..

ಅತ್ಯಂತ ಶಿಸ್ತುಬದ್ದವಾಗಿ ಆಯೋಜಿಸುತ್ತಿದ್ದ ಆರ್ ಅಶೋಕ್

ಅತ್ಯಂತ ಶಿಸ್ತುಬದ್ದವಾಗಿ ಆಯೋಜಿಸುತ್ತಿದ್ದ ಆರ್ ಅಶೋಕ್

ಬೆಂಗಳೂರಿನಲ್ಲಿನ ಇದುವರೆಗಿನ ಪಕ್ಷದ ಹೆಚ್ಚುಕಮ್ಮಿ ಎಲ್ಲಾ ಸಮಾವೇಶಗಳನ್ನು ಅತ್ಯಂತ ಶಿಸ್ತುಬದ್ದವಾಗಿ ಆಯೋಜಿಸುತ್ತಿದ್ದ ಆರ್ ಅಶೋಕ್ , ತನ್ನ ಎಂದಿನ ಚತುರತೆಯಿಂದ 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ'ಯನ್ನು ಆಯೋಜಿಸಲು ವಿಫಲರಾಗಿದ್ದಕ್ಕೆ, ಅವರಿಗಿರುವ ಕೆಲವೊಂದು ಅಸಮಾಧಾನಗಳು ಕಾರಣ ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ವೇದಿಕೆಯನ್ನು ಹೆಚ್ಚುಕಮ್ಮಿ ಆವರಿಸಿಕೊಂಡಿದ್ದ ಶೋಭಾ ಕರಂದ್ಲಾಜೆ

ವೇದಿಕೆಯನ್ನು ಹೆಚ್ಚುಕಮ್ಮಿ ಆವರಿಸಿಕೊಂಡಿದ್ದ ಶೋಭಾ ಕರಂದ್ಲಾಜೆ

ಇನ್ನು ಉದ್ಘಾಟನಾ ಸಮಾವೇಶದ ವೇದಿಕೆಯನ್ನು ಹೆಚ್ಚುಕಮ್ಮಿ ಶೋಭಾ ಕರಂದ್ಲಾಜೆ ಆವರಿಸಿಕೊಂಡಿದ್ದ ಅಂಶ, ಅಶೋಕ್, ಜಗದೀಶ್ ಶೆಟ್ಟರ್ ಮತ್ತು ಬಿ ಎಲ್ ಸಂತೋಷ್ ಮುಂತಾದ ಮುಖಂಡರ ಅಸಮಾಧಾನಕ್ಕೆ ಕಾರಣವಾಯಿತು. ಮೂರು ಲಕ್ಷ ಜನರು ಭಾಗವಹಿಸಬಹುದು ಎಂದು ನಿರೀಕ್ಷಿಸಲಾಗಿದ್ದ ಈ ಸಮಾವೇಶದಲ್ಲಿ ಸುಮಾರು ನಲವತ್ತು ಸಾವಿರದಷ್ಟು ಜನ ಮಾತ್ರ ಭಾಗವಹಿಸಿದ್ದರು.

ರಾಜ್ಯ ಬಿಜೆಪಿಯ ಉಸ್ತುವಾರಿ ಪಿಯೂಶ್ ಗೋಯಲ್

ರಾಜ್ಯ ಬಿಜೆಪಿಯ ಉಸ್ತುವಾರಿ ಪಿಯೂಶ್ ಗೋಯಲ್

ಸಮಾವೇಶ ಯಶಸ್ವಿಯಾಗದೇ ಇರುವುದಕ್ಕೆ ಇರಬಹುದಾದ ಅಂಶಗಳ ಸೂಕ್ಷ್ಮತೆಯನ್ನು ಅರಿತ ಅಮಿತ್ ಶಾ, ಪರಿವರ್ತನಾ ಯಾತ್ರೆಯ ಮುಂದಿನ ಎಲ್ಲಾ ಸಭೆಗಳ ಒಟ್ಟಾರೆ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವಂತೆ, ರಾಜ್ಯ ಬಿಜೆಪಿಯ ಉಸ್ತುವಾರಿ ಪಿಯೂಶ್ ಗೋಯಲ್ ಅವರಿಗೆ ಸೂಚಿಸಿದ್ದಾರೆ ಎನ್ನುವ ಮಾಹಿತಿಯಿದೆ.

ಪ್ರತೀ ಬೈಕ್ ಸವಾರರಿಗೂ ಪೆಟ್ರೋಲ್ ಜೊತೆ 700 ರೂಪಾಯಿ

ಪ್ರತೀ ಬೈಕ್ ಸವಾರರಿಗೂ ಪೆಟ್ರೋಲ್ ಜೊತೆ 700 ರೂಪಾಯಿ

ಬೆಂಗಳೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳ ಶಾಸಕರಿಗೆ, ಬೈಕ್ ಮೂಲಕ ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆತರುವ ಜವಾಬ್ದಾರಿ ವಹಿಸಲಾಗಿತ್ತು. ಪ್ರತೀ ಬೈಕ್ ಸವಾರರಿಗೂ ಪೆಟ್ರೋಲ್ ಜೊತೆ 700 ರೂಪಾಯಿ ಕೊಡುವ ಬಗ್ಗೆ ಸ್ಥಳೀಯ ಮುಖಂಡರ ಜೊತೆ ಮಾತುಕತೆಯಾಗಿತ್ತು ಎನ್ನುವ ಮಾತಿದೆ. ಆದರೆ, ಹೆಚ್ಚಿನ ಬೈಕ್ ಸವಾರರು ಸಮಾವೇಶಕ್ಕೆ ಹೋಗದೇ ಅರ್ಥದಲ್ಲೇ ವಾಪಸ್ ಹೊರಟರು ಎನ್ನಲಾಗುತ್ತಿದೆ.

40 ಸಾವಿರ ಜನ ಮಾತ್ರ ಭಾಗವಹಿಸಿದ್ದರು

40 ಸಾವಿರ ಜನ ಮಾತ್ರ ಭಾಗವಹಿಸಿದ್ದರು

1 ಲಕ್ಷ ಬೈಕ್ ಹಾಗೂ 3 ಲಕ್ಷ ಕಾರ್ಯಕರ್ತರನ್ನು ಸಮಾವೇಶಕ್ಕೆ ಸಂಘಟಕರು ನಿರೀಕ್ಷಿಸಿದ್ದರು. ಆದರೆ ಸುಮಾರು 17 ಸಾವಿರ ಬೈಕ್ ಹಾಗೂ 40 ಸಾವಿರ ಜನ ಮಾತ್ರ ಭಾಗವಹಿಸಿದ್ದರು. ಅರವಿಂದ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ ಕ್ಷೇತ್ರದಿಂದ ಹೊರತು ಪಡಿಸಿ, ಮಿಕ್ಕ ಶಾಸಕರು ನಿರೀಕ್ಷಿಸಿದಷ್ಟು ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆತರುವಲ್ಲಿ ಯಶಸ್ವಿಯಾಗಲಿಲ್ಲ.

ಕುಣಿಗಲ್ ಮತ್ತು ತರುವೇಕೆರೆಯಲ್ಲಿ ಉತ್ತಮ ಪ್ರತಿಕ್ರಿಯೆ

ಕುಣಿಗಲ್ ಮತ್ತು ತರುವೇಕೆರೆಯಲ್ಲಿ ಉತ್ತಮ ಪ್ರತಿಕ್ರಿಯೆ

ಆಂತರಿಕ ಭಿನ್ನಮತದಿಂದ ಉದ್ಘಾಟನಾ ಸಮಾವೇಶ ಯಶಸ್ವಿಯಾಗಲಿಲ್ಲ ಎನ್ನುವ ಮಾತಿದ್ದರೂ, ಬೆಂಗಳೂರಿನಿಂದ ಸಾಗಿರುವ ಪರಿವರ್ತನಾ ಯಾತ್ರೆಗೆ ಕುಣಿಗಲ್ ಮತ್ತು ತರುವೇಕೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು, ಅಸಮಾಧಾನದ ನಡುವೆಯೂ ಬಿಜೆಪಿಯ ಮುಖಂಡರು ಸಮಾಧಾನ ಪಡುವಂತಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Is Karnataka BJP Parivartana Rally in Bengaluru on Nov 2, becomes flop show because of differences in state leaders?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ