ಈ ರಾಶಿಯವರ ಜೀವನದಲ್ಲಿ ಗೋಚರಿಸುವುದು ಹೊಸ ಬೆಳಕು: ಹೊಸ ಆರಂಭಕ್ಕೆ ಸಾಕ್ಷಿಯಾಗುವ ದಿನ
Horoscope April 29: ಬುಧವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಬುಧವಾರ ರಾಹುಕಾಲವು ಸಾಮಾನ್ಯವಾಗಿ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರುತ್ತದೆ. ಏಪ್ರಿಲ್ 29 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ:
ಆರೋಗ್ಯದ ಬಗ್ಗೆ ಎಚ್ಚರವಿರಲಿ. ಮಾನಸಿಕ ಒತ್ತಡ ತಪ್ಪಿಸಿ. ಧ್ಯಾನ, ವಿಶ್ರಾಂತಿಗೆ ಆದ್ಯತೆ ನೀಡಿ. ಕಠಿಣ ಪರಿಶ್ರಮದ ಫಲ ಸಿಗವುದು. ಸಹದ್ಯೋಗಿಗಳಿಂದ ಕೆಲಸಕ್ಕೆ ಮೆಚ್ಚುಗೆ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಕಾರ್ಯಕ್ಷೇತ್ರದಲ್ಲಿ ಹೊಸ ಯೋಜನೆ ಸಾಧ್ಯತೆ.

ವೃಷಭ ರಾಶಿ:
ಹೊಸ ಯೋಜನೆ, ಆಲೋಚನೆಗಳಿಂದ ಯಶಸ್ಸು. ವ್ಯಾಪಾರದಲ್ಲಿ ಹೊಸ ಅವಕಾಶ. ಹಣ ಕೈಯಲ್ಲಿ ಉಳಿಯುತ್ತದೆ.ಆತ್ಮವಿಶ್ವಾಸ ಹೆಚ್ಚಲಿದೆ. ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ.
ಮಿಥುನ ರಾಶಿ:
ಸ್ನೇಹಿತರನ್ನು ಭೇಟಿ ಮಾಡಿ. ಕುಟುಂಬದ ಸದಸ್ಯರೊಂದಿಗೆ ಮಾತಾಡಿ. ಸಮಾಜಮುಖಿಯಾಗುವುದು ಅನಿವಾರ್ಯ. ಹೊಸ ವಿಷಯ ಕಲಿಕೆಗೆ ಅವಕಾಶ. ಆರೋಗ್ಯದತ್ತ ಗಮನ ಹರಿಸಿ. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ. ವೆಚ್ಚದ ಮೇಲೆ ಹಿಡಿತ ಬೇಕು.
ಕರ್ಕಾಟಕ ರಾಶಿ:
ಜೀವನದಲ್ಲೊಂದು ಹೊಸ ಬೆಳಕು ಗೋಚರಿಸಲಿದೆ. ಹೊಸ ಆರಂಭಕ್ಕೆ ಈ ದಿನ ಸಾಕ್ಷಿಯಾಗಲಿದೆ. ಕಠಿಣ ಪರಿಶ್ರಮವು ಫಲ ನೀಡುತ್ತದೆ. ಆರೋಗ್ಯದತ್ತ ಗಮನ ಹರಿಸಿ. ಈ ದಿನ ನಿಮಗೆ ತೃಪ್ತಿಕರ ಮತ್ತು ಶುಭ ದಿನವಾಗಿರುತ್ತದೆ.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಇಂದು ಹೊಸ ಅವಕಾಶಗಳು ಸಿಗಲಿವೆ. ನಿಮ್ಮ ಸಕಾರಾತ್ಮಕ ಶಕ್ತಿ ಮತ್ತು ಆತ್ಮವಿಶ್ವಾಸವು ಇತರರನ್ನು ಆಕರ್ಷಿಸುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಸಿಗುವ ಸಮಯ.
ಕನ್ಯಾ ರಾಶಿ:
ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸಮತೋಲನಗೊಳಿಸಲು ಇದು ಸೂಕ್ತ ಸಮಯ.ಹೊಸ ಆಲೋಚನೆಗಳೊಂದಿಗೆ ಹೊಸ ಕೆಲಸ ಆರಂಭಿಸಬಹುದು. ಧ್ಯಾನ ಮತ್ತು ಯೋಗ ಮಾಡುವ ಮೂಲಕ ಆಂತರಿಕ ಶಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.
ತುಲಾ ರಾಶಿ:
ಈ ದಿನ ನಿಮ್ಮ ಪಾಲಿಗೆ ಸಕಾರಾತ್ಮಕ ದಿನವಾಗಲಿದೆ. ವಿಶೇಷವಾಗಿ ವೃತ್ತಿಪರ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಒದಗಿ ಬರಬಹುದು. ಸಹೋದ್ಯೋಗಿಗಳಿಂದ ಪ್ರಶಂಸೆ ಸಿಗುವುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ.
ವೃಶ್ಚಿಕ ರಾಶಿ:
ವೈಯಕ್ತಿಕ ಸಂಬಂಧಗಳಲ್ಲಿಯೂ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಹೆಚ್ಚಾಗುವುದು. ಆರ್ಥಿಕವಾಗಿ, ನಿಮ್ಮ ಸ್ಥಿತಿ ಬಲವಾಗಿರಬಹುದು, ಆದರೆ ಯಾವುದೇ ಪ್ರಮುಖ ಹೂಡಿಕೆಗಳನ್ನು ಮಾಡುವ ಮೊದಲು ಜಾಗರೂಕರಾಗಿರಿ.
ಧನು ರಾಶಿ:
ನಿಮ್ಮ ಗುರಿಗಳತ್ತ ಗಮನ ಹರಿಸುವ ಸಮಯ. ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದರಿಂದ ಆತ್ಮವಿಶ್ವಾಸ ಹೆಚ್ಚಾಗುವುದು. ವೃತ್ತಿಜೀವನಕ್ಕೆ ಸಕಾರಾತ್ಮಕ ತಿರುವು ತರುವಂತಹ ಕೆಲವು ಹೊಸ ಅವಕಾಶಗಳು ಸಿಗಬಹುದು. ಹಳೆಯ ಸಮಸ್ಯೆಗೆ ಪರಿಹಾರ ಸಿಗುವುದು.
ಮಕರ ರಾಶಿ:
ಮನೆ ಮತ್ತು ಕುಟುಂಬ ವಿಷಯಗಳ ಮೇಲೆ ಗಮನಹರಿಸುವುದು ಮುಖ್ಯ.ಕೆಲಸದಲ್ಲಿ ಹೊಸ ಅವಕಾಶಗಳಿಗೆ ಸಿದ್ಧರಾಗಿರಬೇಕು. ಕೆಲವು ಪ್ರಮುಖ ಜವಾಬ್ದಾರಿಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕುಂಭ ರಾಶಿ:
ಆತ್ಮವಿಶ್ವಾಸ ಹೆಚ್ಚಾಗುವುದು. ಹೊಸ ಅವಕಾಶಗಳು ವೃತ್ತಿ ಬದುಕನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಬಹುದು. ಸಂಬಂಧಗಳು ಸಾಮರಸ್ಯದಿಂದ ಕೂಡಿರುತ್ತವೆ. ಆರೋಗ್ಯವನ್ನು, ಅದರಲ್ಲಿಯೂ ವಿಶೇಷವಾಗಿ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಿ.
ಮೀನ ರಾಶಿ:
ದಿನವಿಡೀ ಕೆಲವು ಅನಿರೀಕ್ಷಿತ ಬದಲಾವಣೆಗಳಿಗೆ ಸಿದ್ಧರಾಗಿರಿ. ಈ ಬದಲಾವಣೆಗಳೇ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಬಹುದು. ಸಕಾರಾತ್ಮಕ ಬದಲಾವಣೆಗಳ ಮೂಲಕ ಹೊಸ ಕೆಲಸಗಳ ಆರಂಭವೂ ಆಗಬಹುದು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications