NWKRTC: ಧಾರವಾಡ-ಬೀದರ್ ನಾನ್ ಎಸಿ ಬಸ್ ಸೇವೆ, ಹಾವೇರಿ-ಪಂಡರಾಪುರಕ್ಕೆ ವೇಗದೂತ ಬಸ್ ಸಂಚಾರ, ವೇಳಾಪಟ್ಟಿ
ಹುಬ್ಬಳ್ಳಿ: ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ವತಿಯಿಂದ ಪಂಢರಾಪುರ ಭಕ್ತರು ಹಾಗೂ ಇತರ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ವಿಶೇಷ ಬಸ್ ಸೇವೆಗಳನ್ನು ಆರಂಭಿಸಿದೆ. ಇದರಲ್ಲಿ ನಾನ್ ಎಸಿ ಸ್ಲೀಪರ್ ಹಾಗೂ ವೇಗದೂತ ಬಸ್‌ಗಳು ಸೇಇವೆ. ಧಾರ್ಮಿಕ ಕ್ಷೇತ್ರಗಳಿಗೆ ಸುಲಭ ಪ್ರಯಾಣ ಒದಗಿಸುವ ಉದ್ದೇಶದಿಂದ ಹಾವೇರಿ ಹಾಗೂ ಧಾರವಾಡ ವಿಭಾಗಗಳಿಂದ ಈ ಸೇವೆಗಳು ಪ್ರಾರಂಭಗೊಂಡಿವೆ.
ಹಾವೇರಿ ವಿಭಾಗದಿಂದ ಹಿರೇಕೆರೂರಿನಿಂದ ಹಾವೇರಿ, ಹುಬ್ಬಳ್ಳಿಯಿಂದ ಮಹಾರಾಷ್ಟ್ರ ರಾಜ್ಯದ ಧಾರ್ಮಿಕ ಕ್ಷೇತ್ರ ಪಂಢರಾಪುರಕ್ಕೆ ವಿಶೇಷ ವೇಗದೂತ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಬಸ್ ಹಿರೇಕೆರೂರಿನಿಂದ ಬೆಳಗ್ಗೆ 08 ಗಂಟೆಗೆ ಪ್ರಯಾಣ ಆರಂಭಿಸುತ್ತದೆ. ಹಾವೇರಿಯಿಂದ ಬೆಳಗ್ಗೆ 09:30ಕ್ಕೆ, ಹುಬ್ಬಳ್ಳಿ ನಿಲ್ದಾಣದಿಂದ 11:15ಕ್ಕೆ ಹೊರಟು ಅಲ್ಲಿಂದ ಪಂಡರಾಪುರವನ್ನು ಮಧ್ಯಾಹ್ನ ತಲುಪುತ್ತದೆ.

ಮರಳಿ ಪಂಡರಾಪುರದಿಂದ ಮಾರನೇ ದಿನ ಬೆಳಗ್ಗೆ 06 ಗಂಟೆಗೆ ಹೊರಡುತ್ತದೆ. ಹುಬ್ಬಳ್ಳಿಗೆ 2.15ಕ್ಕೆ (14:15 ಗಂಟೆ), ಹಾವೇರಿಗೆ 03.45ಕ್ಕೆ (15:45ಗಂಟೆ) ಆಗಮಿಸುತ್ತದೆ. ಅಲ್ಲಿಂದ ಹಿರೇಕೆರೂರಿಗೆ ಸಂಜೆ 5.30ಕ್ಕೆ (17:30ಗಂಟೆಗೆ) ತಲುಪುತ್ತದೆ. ಒಟ್ಟಾರೆ ಈ ಮಾರ್ಗದಲ್ಲಿ ಒಬ್ಬ ಪ್ರಯಾಣಿಕರಿಗೆ ಟಿಕೆಟ್ ದರವನ್ನು (ಹಿರೇಕೆರೂರು-ಪಂಡರಾಪುರ) 682 ರೂಪಾಯಿ ನಿಗದಿಪಡಿಸಲಾಗಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಧಾರವಾಡ-ಬೀದರ್ ನಾನ್ ಎಸಿ ಸ್ಲೀಪರ್ ಬಸ್
ಉತ್ತರ ಕರ್ನಾಟಕದಿಂದ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ತೆರಳುವವರಿಗೆ ಇಲ್ಲೊಂದು ಸಿಹಿ ಸುದ್ದಿ ಸಿಕ್ಕಂತಾಗಿದೆ. ಧಾರವಾಡ ವಿಭಾಗದಿಂದ ಬೀದರ್‌ಗೆ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಈ ಮೂಲಕ ಬಹುದಿನಗಳ ಸ್ಥಳೀಯರ ಬೇಡಿಕೆ ಈಡೇರಿದಂತಾಗಿದೆ.
ಧಾರವಾಡದಿಂದ ಪ್ರತಿ ದಿನ ರಾತ್ರಿ 08 ಗಂಟೆಗೆ (20:00ಕ್ಕೆ) ಈ ನಾನ್ ಎಸಿ ಸ್ಲೀಪರ್ ಬಸ್ ಹೊರಡುತ್ತದೆ. ಮಾರನೇ ದಿನ ಬೆಳಗ್ಗೆ 08:15ಗಂಟೆಗೆ ಬೀದರ್ ನಿಲ್ದಾಣ ತಲುಪುತ್ತದೆ. ಮರಳಿ ಅದೇ ದಿನಕ್ಕಿನಲ್ಲಿ ಪ್ರಯಾಣದಲ್ಲಿ ಬೆಳಗ್ಗೆ 07:15ಕ್ಕೆ ಅಲ್ಲಿಂದ ಹೊರಟು ರಾತ್ರಿ 09 ಗಂಟೆಗೆ (21:00ಕ್ಕೆ) ಧಾರವಾಡ ನಿಲ್ದಾಣಕ್ಕೆ ಆಗಮಿಸಲಿದೆ.
ಸಂಚಾರ ಮಾರ್ಗ, ಟಿಕೆಟ್ ದರ
ಈ ಬಸ್ ಧಾರವಾಡದಿಂದ ನವಲಗುಂದ, ನರಗುಂದ, ಗದ್ದನಕೆರಿ ಕ್ರಾಸ್, ವಿಜಯಪುರ, ಸಿಂದಗಿ, ಕಲಬುರಗಿ ಹಾಗೂ ಹುಮ್ನಾಬಾದ್ ಮಾರ್ಗವಾಗಿ ಸಂಚರಿಸುತ್ತದೆ. ಈ ಮಾರ್ಗದ ಪ್ರಯಾಣ ಒಬ್ಬರಿಗೆ ಟಿಕೆಟ್ ದರವನ್ನು 926 ರೂಪಾಯಿ ಎಂದು ನಿಗದಿಪಡಿಸಲಾಗಿದೆ ಎಂದು ಧಾರವಾಡದ ಘಟಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರು ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಲು KSRTC Online Booking Portal ವೆಬ್‌ಸೈಟ್ ಬಳಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 99609 19926, 72599 54237, ಮತ್ತು 77609 69286 ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.














Click it and Unblock the Notifications