ಪಂಜಾಬ್ ಕಿಂಗ್ಸ್‌ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ರಾಜಸ್ಥಾನ್ ರಾಯಲ್ಸ್‌: ಶತಕದ ಸಿಕ್ಸರ್ ಮಿಸ್ ಮಾಡಿಕೊಂಡ ವೈಭವ್

PBKS VS RR IPL 2026: ಮುಲ್ಲನ್‌ಪುರ್‌ನ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್‌ 28) ನಡೆದ ಐಪಿಎಲ್‌ ಪಂದ್ಯದಲ್ಲಿ ಡೊನೊವನ್ ಫೆರೇರಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಪಂಜಾಬ್‌ ಕಿಂಗ್ಸ್‌ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪಂಜಾಬ್ ಸತತ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.

ಟಾಸ್‌ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಶ್ರೇಯಸ್‌ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್‌ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 222 ರನ್ ಪೇರಿಸಿತು. ಬಳಿಕ ಪಂಜಾಬ್ ನೀಡಿದ 223 ರನ್‌ಗಳ ಗುರಿಯನ್ನು ಆರ್‌ಆರ್‌ 19.2 ಓವರ್‌ಗಳಿಗೆ ಮುಗಿಸಿ ಗೆಲುವಿನ ನಗೆ ಬೀರಿತು.

PBKS vs RR IPL 2026 Donovan Ferreira s 52 Powers Rajasthan Royals to 6-Wicket Win in Mullanpur

ಡೊನೊವನ್ ಫೆರೇರಾ ಅಬ್ಬರದ ಬ್ಯಾಟಿಂಗ್‌

ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನಕ್ಕೆ ಡೊನೊವನ್ ಫೆರೇರಾ ಆಸರೆಯಾದರು. ಅವರ ಬಿರುಸಿನ ಅರ್ಧಶತಕ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಮತ್ತೊಂದೆಡೆ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಟಿ20 ಮಾದರಿಯಲ್ಲಿ ತಮ್ಮ 100ನೇ ಸಿಕ್ಸರ್ ಪೂರೈಸುವ ಸನಿಹದಲ್ಲಿ ಔಟ್ ಆಗುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು.

ಪಂಜಾಬ್‌ ವಿರುದ್ಧ ಆರ್‌ಆರ್ ಭರ್ಜರಿ ಗೆಲುವು

ರಾಜಸ್ಥಾನ್ ರಾಯಲ್ಸ್‌ ಪರ ಬ್ಯಾಟ್‌ ಬೀಸಿದ ವೈಭವ್ ಸೂರ್ಯವಂಶಿ 43(16), ಯಶಸ್ವಿ ಜೈಸ್ವಾಲ್‌ 51(27), ಧ್ರುವ್ ಜುರೆಲ್ 16(20), ನಾಯಕ ರಿಯಾನ್ ಪರಾಗ್‌ 29(16) ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಬಳಿಕ ತಂಡ ಸಂಕಷ್ಟಕ್ಕೆ ಸಿಲುಕಿದಾಗ ಡೊನೊವನ್ ಫೆರೇರಾ ಆಕ್ರಮಣಕಾರಿ ಆಟ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರು 26 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ಗಳ ಸಹಿತ ಅಜೇಯ 52 ರನ್‌ ಕಲೆಹಾಕಿದರೆ, ಶುಭಮ್ ದುಬೆ ಅವರು ಅಜೇಯ 31 ರನ್‌ ಸಿಡಿಸಿ ತಂಡದ ಗೆಲುವಿಗೆ ಇವರೂ ಕೂಡ ಪ್ರಮುಖ ಪಾತ್ರವಹಿಸಿದರು.

ಮಾರ್ಕಸ್ ಸ್ಟೋಯ್ನಿಸ್ ಹೋರಾಟ ವ್ಯರ್ಥ

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಮಾರ್ಕಸ್ ಸ್ಟೋಯ್ನಿಸ್ ಅವರ ಸಿಡಿಲಬ್ಬರದ ಬ್ಯಾಟಿಂಗ್ (22 ಎಸೆತಗಳಲ್ಲಿ 62 ರನ್) ನೆರವಿನಿಂದ 222/4 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಸ್ಟೋಯ್ನಿಸ್ ಇನಿಂಗ್ಸ್‌ನ ಕೊನೆಯ 5 ಎಸೆತಗಳಲ್ಲಿ 24 ರನ್ ಚಚ್ಚಿದ್ದರು. ಆರಂಭಿಕರಾಗಿ ಕಣಕ್ಕಿಳಿದ ಪ್ರಭ್‌ಸಿಮ್ರಾನ್ ಸಿಂಗ್ 59 ರನ್ ಗಳಿಸಿ ತಂಡಕ್ಕೆ ನೆರವಾದರು. ಇವರು ಪ್ರಿಯಾಂಶ್ ಆರ್ಯ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ ಉತ್ತಮ ಜೊತೆಯಾಟವಾಡಿದರು.

ಅದರಲ್ಲೂ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ನ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಮೇಲೆ ಎಲ್ಲರ ಕಣ್ಣಿತ್ತು. ಅವರು ಉತ್ತಮವಾಗಿ ಆಡಿದರೂ ಟಿ20 ಕ್ರಿಕೆಟ್‌ನಲ್ಲಿ ತಮ್ಮ 100ನೇ ಸಿಕ್ಸರ್ ಪೂರೈಸುವ ಐತಿಹಾಸಿಕ ಮೈಲಿಗಲ್ಲಿನಿಂದ ಕೂದಲೆಳೆ ಅಂತರದಲ್ಲಿ ವಂಚಿತರಾದರು. ಅರ್ಷದೀಪ್ ಸಿಂಗ್ ಅವರ ಬೌಲಿಂಗ್‌ನಲ್ಲಿ ಅವರು ವಿಕೆಟ್ ಒಪ್ಪಿಸಿದರು. ಒಟ್ಟಿನಲ್ಲಿ ಕೊನೆಗೆ ರಾಜಸ್ಥಾನ್ ರಾಯಲ್ ಗೆಲುವು ಸಾಧಿಸಿ ಪರಾಕ್ರಮ ಮೆರೆದದಿದೆ. ಈ ಮೂಲಕ ರಾಜಸ್ಥಾನ್‌ ರಾಯಲ್ಸ್‌ ಪಂಜಾಬ್‌ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+