ಇಂಧನ ಬಿಕ್ಕಟ್ಟು: ಒಪೆಕ್ ಒಕ್ಕೂಟದಿಂದ ಯುಎಇ ನಿರ್ಗಮನ ಘೋಷಣೆ, ಇದು ಒಪೆಕ ಅಂತ್ಯವೆಂದ ವಿಶ್ಲೇಷಣೆ

UAE Exit Updates: ಇರಾನ್ ಮೇಲಿನ ಇಸ್ರೇಲ್-ಯುಎಸ್ ಜಂಟಿ ದಾಳಿ ಬೆನ್ನಲ್ಲೆ ಜಾಗತಿಕವಾಗಿ ಇಂಧನ ಪೂರೈಕೆ ಮೇಲೆ ಭಾರೀ ಹೊಡೆತ ಬಿದ್ದಿದೆ. ತಾತ್ಕಾಲಿಕ ಕದನ ವಿರಾಮ ಸಹ ಘೋಷಣೆ ಆಗಿದ್ದು, ಯುದ್ಧ ಮುಂದುವರಿದಿದೆ. ಇದರ ಬೆನ್ನಲ್ಲೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಒಪೆಕ್ ಮತ್ತು ಒಪೆಕ್+ ಒಕ್ಕೂಟಗಳ ಸದಸ್ಯತ್ವ ತೊರೆಯಲು ನಿರ್ಧರಿಸಿದೆ.

ಸುಮಾರು 60 ವರ್ಷಗಳ ಸದಸ್ಯತ್ವ ಕೊನೆಗಾಣಿಸಲು ಮುಂದಾಗಿದೆ. ಇದು ಒಕ್ಕೂಟದ ಅಂತ್ಯವೆಂದು ವಿಶ್ಲೇಷಿಸಲಾಗುತ್ತದೆ. ಯುಎಇ ಸದಸ್ಯತ್ವದ ಬಿಟ್ಟು ಹೊರ ಬರಲಿದ್ದು, ಇದು ಒಕ್ಕೂಟಕ್ಕೆ ಭಾರೀ ಹಿನ್ನಡೆ ಎಂದು ಹೇಳಳಾಗುತ್ತಿದೆ. ಹೆಚ್ಚುತ್ತಿರುವ ಜಾಗತಿಕ ಇಂಧನ ಬೇಡಿಕೆ ಪೂರೈಸುವ ಮಹತ್ವ ಉದ್ದೇಶ ಯುಎಇ ಹೊಂದಿದೆ.

UAE to exit OPEC

ಇದೆಲ್ಲ ಬೆಳವಣಿಗೆ ನೋಡಿದರೆ ಕೆಲವರು ಇದು "ಒಪೆಕ್‌ನ ಅಂತ್ಯದ ಆರಂಭ" ಎಂದಿದ್ದಾರೆ. ಒಕ್ಕೂಟದ ನಿಯಮಗಳಿಂದ ಮುಕ್ತಿ ಪಡೆದು, ಯುಎಇಗೆ ಹೆಚ್ಚಿನ ಕಾರ್ಯಾಚರಣೆಗೆ ಸ್ವಾತಂತ್ರ್ಯ ಸಿಗಲಿದೆ. ಒಪೆಕ್ "ಪ್ರಪಂಚವನ್ನು ಕೊಳ್ಳೆ ಹೊಡೆಯಲಾಗುತ್ತಿದೆ" ಎಂದು ಟೀಕಿಸಿದ್ದ ಅಮೆರಿಕದ ಡೊನಾಲ್ಡ್ ಟ್ರಂಪ್‌ಗೆ ವಿಜಯ ಸಿಕ್ಕಂತಾಗಿದೆ. ಕಳೆದ ಜನವರಿಯಲ್ಲಿ ಸೌದಿ ಅರೇಬಿಯಾ ಮತ್ತು ಇತರ ಒಪೆಕ್ ದೇಶಗಳಿಗೆ ತೈಲ ಬೆಲೆ ಕಡಿಮೆ ಮಾಡುವಂತೆ ಆಗ್ರಹಿಸಿದ್ದರು. ಒಟ್ಟಾರೆ ಇಂಧನ ಬಿಕ್ಕಟ್ಟಿನ ಬೆನ್ನಲ್ಲೆ ನಡೆದ ಮತ್ತೊಂದು ಬೆಳವಣಿಗೆಯಲ್ಲಿ ಇದು ಸಹ ಒಂದಾಗಿದೆ.

56,432 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಚಾಲನೆ; ಒಳಮೀಸಲಾತಿ ಜಾರಿಗೊಳಿಸಿ ಕರ್ನಾಟಕ ಸರ್ಕಾರ ಮಹತ್ವದ ಆದೇಶ
56,432 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಚಾಲನೆ; ಒಳಮೀಸಲಾತಿ ಜಾರಿಗೊಳಿಸಿ ಕರ್ನಾಟಕ ಸರ್ಕಾರ ಮಹತ್ವದ ಆದೇಶ

ಶೇ 15 ಸದಸ್ಯರ ನಷ್ಟ

ಯುಎಇ ನಿರ್ಗಮನದಿಂದ ಯುಎಇ-ಅಮೆರಿಕ ಸಂಬಂಧವು ಮತ್ತಷ್ಟು ಗಟ್ಟಿಯಾಗಬಹುದು. ಯುಎಇ ಹೊರ ನಡೆದರೆ ಒಪೆಕ್ ತನ್ನ ಸಾಮರ್ಥ್ಯದ ಶೇ 15 ರಷ್ಟನ್ನು ಕಳೆದುಕೊಂಡಂತಾಗಿದೆ. ಅತ್ಯಂತ ಕಟ್ಟುನಿಟ್ಟಾದ ಸದಸ್ಯರಲ್ಲಿ ಒಬ್ಬರನ್ನು ಕಳೆದುಕೊಳ್ಳುತ್ತದೆ. ಇದು ಒಕ್ಕೂಟ ಕೊನೆಗೊಳ್ಳುತ್ತಿರುವುದರ ಲಕ್ಷಣವೆಂದು ಎಂಎಸ್‌ಟಿ ಫೈನಾನ್ಶಿಯಲ್‌ನ ಇಂಧನ ಸಂಶೋಧನಾ ಮುಖ್ಯಸ್ಥ ಸೌಲ್ ಕವೋನಿಕ್ ಅವರು ತಿಳಿಸಿದ್ದಾರೆ.

1967ರಲ್ಲಿ ಸೇರಿದ್ದ ಯುಎಇ

ಒಪೆಕ್ (ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ) 1960ರಲ್ಲಿ ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ ಮತ್ತು ವೆನಿಜುವೆಲಾದಿಂದ ಸ್ಥಾಪನೆ ಆಯಿತು. ಸದಸ್ಯ ರಾಷ್ಟ್ರಗಳ ಹಿತಾಸಕ್ತಿ ಕಾಪಾಡಿ, ತೈಲ ಉತ್ಪಾದನೆ ಸಮನ್ವಯಗೊಳಿಸಿ ಸ್ಥಿರ ಆದಾಯ ಖಚಿತಪಡಿಸುವುದು ಇದರ ಉದ್ದೇಶ. ಒಕ್ಕೂಟದ ಸದಸ್ಯರ ಸಂಖ್ಯೆ ವರ್ಷಗಳಲ್ಲಿ ಏರಿಳಿತ ಕಂಡಿದ್ದು, ಇದೀಗ 'ಅಲ್ಜೀರಿಯಾ, ಈಕ್ವಟೋರಿಯಲ್ ಗಿನಿಯಾ, ಗ್ಯಾಬೊನ್, ಲಿಬಿಯಾ, ನೈಜೀರಿಯಾ ಮತ್ತು ಕಾಂಗೋ' ಗಣರಾಜ್ಯಗಳು ಸೇರಿವೆ. 1967ರಲ್ಲಿ ಯುಎಇ ಸೇರ್ಪಡೆಗೊಂಡಿತ್ತು, ಈಗ ಅದರ ಹೊರಗಡೆಯ ನಂತರ ಒಪೆಕ್‌ನಲ್ಲಿ 11 ಸದಸ್ಯ ರಾಷ್ಟ್ರಗಳು ಉಳಿಯಲಿವೆ. ಒಪೆಕ್+ ಒಕ್ಕೂಟದಲ್ಲಿ ಹೆಚ್ಚುವರಿ 10 ಒಪೆಕೇತರ ಸದಸ್ಯ ದೇಶಗಳನ್ನೂ ಒಳಗೊಂಡಿದೆ.

ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದ ದಾಖಲೆಯ ಮಟ್ಟದ ತೈಲ ಪೂರೈಕೆ ನಷ್ಟವಾಗಿದೆ ಎಂದು ವಿಶ್ವ ಬ್ಯಾಂಕ್ ಎಚ್ಚರಿಸಿದ ಬೆನ್ನಲ್ಲೇ ಯುಎಇ ಈ ನಿರ್ಧಾರ ಘೋಷಿಸಿದೆ. ಈ ವರ್ಷ ಇಂಧನ ಬೆಲೆಗಳು ಸರಾಸರಿ ಶೇ 25ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ನಿರ್ಣಾಯಕ ಹಾರ್ಮುಜ್ ಜಲಸಂಧಿಯ ಮೂಲಕದ ಹಡಗು ಸಾಗಾಟ ಯುದ್ಧಪೂರ್ವ ಮಟ್ಟಕ್ಕೆ ಮರಳಲು ಆರು ತಿಂಗಳು ಬೇಕಾಗಬಹುದು.

9 ಮಿಲಿಯನ್ ಬ್ಯಾರೆಲ್ ತೈಲ ಉತ್ಪಾದನೆ

ಇರಾನ್‌ನ ವರ್ತನೆಗಳು ಯುಎಇಯ ನಿರ್ಧಾರವನ್ನು ಬಲಪಡಿಸಿರುವ ಸಾಧ್ಯತೆ ಇದೆ. 2024ರಲ್ಲಿ ಯುಎಇ ಪ್ರತಿದಿನ 2.9 ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲ ಉತ್ಪಾದಿಸಿತ್ತು. ಒಪೆಕ್‌ನ ಅನಧಿಕೃತ ನಾಯಕ ಎಂದೇ ಪರಿಗಣಿಸಲ್ಪಟ್ಟ ಸೌದಿ ಅರೇಬಿಯಾ ಪ್ರತಿದಿನ 9 ಮಿಲಿಯನ್ ಬ್ಯಾರೆಲ್‌ಗಳನ್ನು ಉತ್ಪಾದಿಸುತ್ತಿದೆ. ಜಾಗತಿಕವಾಗಿ ಇಂಧನ ಪೂರೈಕೆ ಕೊರತೆ ಆಗದಂತೆ ನೋಡಿಕೊಳ್ಳುವ ಸದುದ್ದೇಶದಿಂದ ಹೊರ ಬರುವುದಾಗಿ ಯುಎಇ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+