Congress Candidate 3rd List: ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ; ಬಾಕಿ ಉಳಿಸಿಕೊಂಡ ಆ 15 ಕ್ಷೇತ್ರಗಳು ಯಾವುವು?
ಬೆಂಗಳೂರು,ಏಪ್ರಿಲ್15: ರಾಜ್ಯ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. 2023 ರ ವಿಧಾನಸಭಾ ಚುನಾವಣೆಯ ನಂತರ ಮತ್ತೆ ಅಧಿಕಾರಕ್ಕೆ ಬರಲು ಪಣ ತೊಟ್ಟಿರುವ ಕಾಂಗ್ರೆಸ್ ಹೈಕಮಾಂಡ್ ನಾಯಕರು ಶನಿವಾರ 43 ಅಭ್ಯರ್ಥಿಗಳನ್ನ ಘೋಷಿಸಿದೆ.
ಮೊದಲ ಪಟ್ಟಿ 166 ಅಭ್ಯರ್ಥಿಗಳನ್ನ ಯಾವುದೇ ಗೊಂದಲವಿಲ್ಲದೆ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಹೈಕಮಾಂಡ್ ಗೆ 15 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯೇ ದೊಡ್ಡ ತಲೆನೋವಾಗಿದೆ. ಇತ್ತ ಹಾಲಿ ಶಾಸಕರಿರುವ ನಾಲ್ಕು ಕ್ಷೇತ್ರಗಳಿಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಟಿಕೆಟ್ ಘೋಷಣೆಯಾಗದ 15 ಕ್ಷೇತ್ರಗಳ ಪೈಕಿ ಹರಿಹರ, ಪುಲಕೇಶಿ ನಗರ, ಶಿಡ್ಲಘಟ್ಟ ಹಾಗೂ ಲಿಂಗಸುಗೂರಿನ ಹಾಲಿ ಶಾಸಕರ ಕ್ಷೇತ್ರಗಳ ಹೆಸರು ಘೋಷಣೆ ಆಗಿಲ್ಲ. ಈ ಕ್ಷೇತ್ರಗಳಲ್ಲಿ ಭಾರೀ ಪೈಪೋಟಿ ಇರುವುದರಿಂದ ಇಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದು, ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ.
ಘೋಷಣೆ ಆಗದೆ ಬಾಕಿ ಉಳಿದ ಕ್ಷೇತ್ರಗಳು
1. ಪುಲಕೇಶಿ ನಗರ
2. ಸಿವಿ ರಾಮನ್ ನಗರ
3. ಮುಳಬಾಗಿಲು
4. ರಾಯಚೂರು ನಗರ
5. ಶಿಗ್ಗಾಂವಿ
6. ಶ್ರವಣಬೆಳಗೊಳ
7. ಅರಕಲಗೂಡು
8. ಲಿಂಗಸುಗೂರು
9. ಹುಬ್ಬಳ್ಳಿ - ಧಾರವಾಡ ಸೆಂಟ್ರಲ್
10. ಹುಬ್ಬಳ್ಳಿ - ಧಾರವಾಡ ಪಶ್ಚಿಮ
11. ಮಂಗಳೂರು ಉತ್ತರ
12. ಶಿಡ್ಲಘಟ್ಟ
13. ಚಿಕ್ಕಮಗಳೂರು
14. ಕೆ.ಆರ್ ಪುರಂ
15. ಹರಿಹರ












Click it and Unblock the Notifications