ಕರ್ನಾಟಕ ಚುನಾವಣೆ; ಯಾರು ಅಂಚೆ ಮತದಾನ ಮಾಡಬಹುದು

ಬೆಂಗಳೂರು, ಏಪ್ರಿಲ್‌ 05; ಕೇಂದ್ರ ಚುನಾವಣಾ ಆಯೋಗ 2023ರ ಕರ್ನಾಟಕದ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದೆ. ಮೇ 10ರ ಬುಧವಾರ 224 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾದ ತಕ್ಷಣ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ.

ವಿಧಾನಸಭಾ ಚುನಾವಣೆ ಮತದಾನ ದಿನದಂದು ಅಗತ್ಯ ಸೇವೆಯಲ್ಲಿರುವವರಿಗೆ ಅಂಚೆ ಮತಪತ್ರಗಳ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದನ್ವಯ, ಅಗತ್ಯ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂದರೆ ವಿದ್ಯುತ್ ಇಲಾಖೆ, ಬಿ. ಎಸ್. ಎನ್. ಎಲ್., ರೈಲ್ವೆ, ಆರೋಗ್ಯ ಇಲಾಖೆ, ವಿಮಾನಯಾನ, ಸಾರಿಗೆ ಸೇವೆ, ಅಗ್ನಿಶಾಮಕದಳ, ಚುನಾವಣಾ ದಿನದ ಕವರೇಜ್ ಮಾಡುವ ಅಧಿಕೃತ ಮಾಧ್ಯಮ ಪ್ರತಿನಿಧಿಗಳು, ಟ್ರಾಫಿಕ್ ಪೊಲೀಸ್ ಹಾಗೂ ಅಂಬ್ಯುಲೆನ್ಸ್ ಸೇವೆಯಲ್ಲಿರುವವರಿಗೆ ಅಂಚೆ ಮತಪತ್ರಗಳ ಮೂಲಕ ಮತಚಲಾಯಿಸಲು ಅವಕಾಶವಿರುತ್ತದೆ.

Karnataka Assembly Elections 2023 Know About Postal Vote

ಅಗತ್ಯ ಸೇವೆಯಲ್ಲಿರುವವರು ಮತದಾನದಿನದ 7 ದಿನ ಮುಂಚಿತವಾಗಿ ನಮೂನೆ 12ಡಿ ಅಡಿ ಅರ್ಜಿ ಭರ್ತಿ ಮಾಡಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ನಮೂನೆ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಇಲಾಖೆ, ಸಂಸ್ಥೆಗಳ ಮುಖ್ಯಸ್ಥರು ಅನುಮೋದನೆ ನೀಡಬೇಕು. ನಾಮಪತ್ರ ಪ್ರಕ್ರಿಯೆ ಮುಗಿದ ನಂತರ ಗೌಪ್ಯವಾಗಿ ಅಂಚೆ ಮತಪತ್ರಗಳ ಮೂಲಕ ಮತ ಚಲಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆ ಮಾಡಲು ಏಪ್ರಿಲ್ 20 ಕೊನೆಯ ದಿನ. ಏಪ್ರಿಲ್ 24 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

ಮೇ 10ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಮತದಾನ ದಿನದಂದು ಅಗತ್ಯ ಸೇವೆಯಲ್ಲಿರುವವರಿಗೆ ಅಂಚೆ ಮತಗಳನ್ನು ಹಾಕಲು ಸಂಬಂಧಪಟ್ಟ ಇಲಾಖೆ, ಸಂಸ್ಥೆಗಳು, ಮತದಾನದಿನದಂದು ಅಗತ್ಯ ಸೇವೆಯಲ್ಲಿ ಕಾರ್ಯನಿರ್ವಹಿಸುವ ನೌಕರರು, ಸಿಬ್ಬಂದಿಗೆ ನಮೂನೆ ಅರ್ಜಿ ಸಲ್ಲಿಸುವ ಕುರಿತಂತೆ ಮಾಹಿತಿ ನೀಡುವುದರ ಜೊತೆಗೆ ಮತದಾನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸೂಚನೆ ನೀಡಲಾಗಿದೆ.

voting

ಮನೆಯಿಂದಲೇ ಮತದಾನ ವ್ಯವಸ್ಥೆ; ಕರ್ನಾಟಕದ ವಿಧಾನಸಭೆ ಚುನಾವಣೆಗೆ ಚುನಾವಣಾ ದಿನಾಂಕ ಘೋಷಣೆ ಮಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿದೆ ಎಂದರು. ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆಯಿಂದಲೇ ಮತದಾನ ಮಾಡುವವರ ವಿವರಗಳನ್ನು ಸಂಗ್ರಹ ಮಾಡಿ ಮತದಾನ ಮಾಡುವ ಕುರಿತು ಅರಿವು ಮೂಡಿಸಲಾಗುತ್ತಿದೆ.

ಚುನಾವಣಾ ಆಯೋಗದ ಸೂಚನೆಯಂತೆ ಮನೆಯಿಂದ ಮತದಾನ ಮಾಡುವ ಎಲ್ಲಾ ಮತದಾರರಿಗೆ ಬಿಎಲ್‍ಓಗಳ ಮೂಲಕ 12 ಡಿ ಅರ್ಜಿ ನಮೂನೆಯನ್ನು ತಲುಪಿಸಿ ಅವರು ಮನೆಯಿಂದಲೇ ಮತದಾನ ಮಾಡುವ ಅಥವಾ ಮತಗಟ್ಟೆಗೆ ಬಂದು ಮತ ಹಾಕುವ ಕುರಿತು ಒಪ್ಪಿಗೆ ಪತ್ರವನ್ನು ಪಡೆಯಲಾಗುತ್ತದೆ. ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ.

ಮನೆಯಿಂದಲೇ ಮತದಾನ ಮಾಡುವ ಕುರಿತು ಒಪ್ಪಿಗೆ ನೀಡಿದ ಮತದಾರರಿಗೆ ಚುನಾವಣಾ ಆಯೋಗ ನೀಡಿರುವ ನಿಯಮಾವಳಿಯಂತೆ ಸೂಕ್ತ ಭದ್ರತೆಯೊಂದಿಗೆ, ನಿಗದಿಪಡಿಸಿದ ಅಧಿಕಾರಿಗಳ, ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಗೌಪ್ಯವಾಗಿ ಮತದಾನ ಪಡೆಯಲಾಗುತ್ತದೆ ಮತ್ತು ಈ ಎಲ್ಲ ಪ್ರಕ್ರಿಯೆಯನ್ನು ವಿಡಿಯೋಗ್ರಫಿ ಮಾಡಿಸಲಾಗುತ್ತದೆ.

ಚುನಾವಣಾ ಆಯೋಗ ಪ್ರತಿಯೊಬ್ಬ ಮತದಾರ ತಮ್ಮ ಹಕ್ಕನ್ನು ನ್ಯಾಯೋಚಿತವಾಗಿ ಚಲಾಯಿಸಲು ಅನುವಾಗುವಂತೆ ಈ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಿತ್ತು. ಬಿಹಾರ ರಾಜ್ಯದಲ್ಲಿ ಇದನ್ನು ಮೊದಲು ಜಾರಿಗೊಳಿಸಲಾಗಿತ್ತಿ. ಕರ್ನಾಟಕದ ಚುನಾವಣೆಯಲ್ಲಿ ಮೊದಲ ಬಾರಿಗೆ ಈ ವ್ಯವಸ್ಥೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+