ಬಿಜೆಪಿಯಿಂದ ಗಣಿತ ಕಲಿಯಿರಿ: ಸಿದ್ದರಾಮಯ್ಯ ಸರಳ ಸೂತ್ರ

Recommended Video

      ಬಿಜೆಪಿ ಬಗ್ಗೆ ಸಿದ್ದರಾಮಯ್ಯನವರ ಹೊಸ ಗಣಿತದ ಫಾರ್ಮುಲಾ | Oneindia Kananda

      ಬೆಂಗಳೂರು, ಮೇ 8: ಬಿಜೆಪಿ ನಾಯಕರ ವಿರುದ್ಧ ಸರಣಿ ಟ್ವೀಟ್‌ಗಳನ್ನು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತೆ ಕರ್ನಾಟಕ ಬಿಜೆಪಿ ನಾಯಕರ ವಿರುದ್ಧ ಟ್ವೀಟಾಸ್ತ್ರ ಪ್ರಯೋಗಿಸಿದ್ದಾರೆ.

      ಸಿದ್ದರಾಮಯ್ಯ ಅವರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ 2+1 ಲೆಕ್ಕಾಚಾರದ ಹೇಳಿಕೆಯನ್ನೇ ಮೂಲವಾಗಿಟ್ಟುಕೊಂಡಿರುವ ಸಿದ್ದರಾಮಯ್ಯ, ಬಿಜೆಪಿಯಿಂದ ಗಣಿತ ಕಲಿಯಿರಿ ಎಂದು ಲೇವಡಿ ಮಾಡುವ ಟ್ವೀಟ್ ಮಾಡಿದ್ದಾರೆ. ಜತೆಗೆ ತಮ್ಮ ಹೇಳಿಕೆಯ ಭಾಷಣದ ವಿಡಿಯೊವನ್ನು ಸಹ ಟ್ವೀಟ್‌ ಜೊತೆ ಪೋಸ್ಟ್ ಮಾಡಿದ್ದಾರೆ.

      karnataka assembly elections 2018 siddaramaiah tweet on bjp maths

      ಅವರ ಟ್ವೀಟ್‌ನಲ್ಲಿರುವ ಗಣಿತದ ಲೆಕ್ಕ ಹೀಗಿದೆ
      ಜೈಲು ಹಕ್ಕಿ ಯೆಡ್ಡಿ= 1
      ಕುಖ್ಯಾತ ರೆಡ್ಡಿ ಸಹೋದರರು= 2+1
      ಶ್ರೀರಾಮುಲು= 3+1
      ಕಟ್ಟಾ ಸುಬ್ರಮಣ್ಯ ನಾಯ್ಡು= 4+1
      ಕೃಷ್ಣಯ್ಯ ಶೆಟ್ಟಿ= 5+1
      ಹರತಾಳು ಹಾಲಪ್ಪ= 6+1
      ರೇಣುಕಾಚಾರ್ಯ = 7+1

      ಇಂತಹ ಲೂಟಿಕೋರರ ಗ್ಯಾಂಗ್‌ಗೆ ನಮ್ಮ ಕರ್ನಾಟಕವನ್ನು ಒಪ್ಪಿಬೇಕೇ? ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

      ಜಾಣ್ಮೆಯಿಂದ ಆಯ್ಕೆಮಾಡಿ ಎಂದು ಮತದಾರರಿಗೆ ಸಲಹೆ ನೀಡಿರುವ ಸಿದ್ದರಾಮಯ್ಯ ಯೆಡ್ಡಿ ಬೇಡ ಎಂಬ ಹ್ಯಾಷ್‌ಟ್ಯಾಗ್‌ ಪ್ರಯೋಗ ಮಾಡಿದ್ದಾರೆ.

      ಸಿದ್ದರಾಮಯ್ಯ ಅವರ ಟ್ವೀಟ್ ಬೆಂಬಲಿಸಿ ಮತ್ತು ವಿರೋಧಿಸಿ ಪರ-ವಿರೋಧದ ಅಭಿಪ್ರಾಯಗಳನ್ನು ಮಂಡಿಸಲಾಗಿದೆ.

      ಸಿದ್ದರಾಮಯ್ಯ ಲೇವಡಿಗೆ ಪ್ರತಿಯಾಗಿ ಬಿಜೆಪಿ ಬೆಂಬಲಿಗರು ಸಹ ಕಾಂಗ್ರೆಸ್ ಗಣಿತದ ಲೆಕ್ಕಾಚಾರವನ್ನು ನೀಡಿದ್ದಾರೆ. ಕೆ.ಜೆ. ಜಾರ್ಜ್, ಸತೀಶ್ ಸೈಲ್, ಆನಂದ್ ಸಿಂಗ್, ಸಂತೋಷ್ ಲಾಡ್, ನಾಗೇಂದ್ರ, ಡಿಕೆ ಶಿವಕುಮಾರ್, ಆಂಜನೇಯ, ಅಶೋಕ್ ಖೇಣಿ ಮುಂತಾದವರ ಹೆಸರನ್ನೂ ಸೇರಿಸಿ ಎಂದು ಗೇಲಿ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+