ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಜನತೆಯ ತಲೆಗೆ ಇನ್ನಷ್ಟು ಹುಳಬಿಟ್ಟ ಎಕ್ಸಿಟ್ ಪೋಲ್

|
Google Oneindia Kannada News

ಮತಎಣಿಕೆಯ ಮುನ್ನ 'ಮತಗಟ್ಟೆ ಸಮೀಕ್ಷೆಯನ್ನು' ನೋಡಿ ಸ್ವಲ್ಪ ಸಮಾಧಾನ ಪಟ್ಟಿಕೊಳ್ಳೋಣ ಎನ್ನುವವರಿಗೆ ಶನಿವಾರ (ಮೇ 12) ಮತದಾನ ಮುಗಿದ ಬೆನ್ನಲ್ಲೇ ಪ್ರಕಟಗೊಂಡ ಎಕ್ಸಿಟ್ ಪೋಲ್ ಫಲಿತಾಂಶ ಇನ್ನಷ್ಟು ಟೆನ್ಸನ್ ಹುಟ್ಟುಹಾಕಿದೆ.

ಒಂಬತ್ತು ವಾಹಿನಿ/ಮಾಧ್ಯಮ ಸಂಸ್ಥೆಗಳಿಂದ ಪ್ರಕಟವಾದ ಮತಗಟ್ಟೆ ಸಮೀಕ್ಷೆಗಳಲ್ಲಿ ಕೆಲವು ಬಿಜೆಪಿಗೆ, ಮತ್ತಷ್ಟು ಕಾಂಗ್ರೆಸ್ ನೂರರ ಸಂಖ್ಯೆ ದಾಟುತ್ತದೆ ಎಂದು ಹೇಳಿದ್ದರೆ, ಎರಡು ವಾಹಿನಿಗಳು ಬಿಜೆಪಿಗೆ ಸರಳ ಬಹುಮತ ಸಿಗುತ್ತದೆ ಎಂದಿವೆ. ಇನ್ನು ಒಂದು ವಾಹಿನಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದೆ.

ಕರ್ನಾಟಕ ಸಮೀಕ್ಷೆ ಸರಾಸರಿ : ಬಿಜೆಪಿಗೆ 107, ಅಧಿಕಾರಕ್ಕೆ ಹತ್ತಿರಕರ್ನಾಟಕ ಸಮೀಕ್ಷೆ ಸರಾಸರಿ : ಬಿಜೆಪಿಗೆ 107, ಅಧಿಕಾರಕ್ಕೆ ಹತ್ತಿರ

ಬಹುಷ: ರಾಜ್ಯ ಅಸೆಂಬ್ಲಿ ಚುನಾವಣೆಯ ಇತಿಹಾಸದಲ್ಲೇ ಇಷ್ಟು ಕಾವು ಪಡೆದ ಚುನಾವಣೆ ಇನ್ನೊಂದು ಇರಲಿಕ್ಕಿಲ್ಲ. ಕಾಂಗ್ರೆಸ್ ಮುಕ್ತ್ ಭಾರತ್ ಮಾಡಲೇಬೇಕೆಂದು ಜಿದ್ದಿಗೆ ಬಿದ್ದಂತೆ, ಬಿಜೆಪಿ ವರಿಷ್ಠರು ಆಖಾಡಕ್ಕೆ ಇಳಿದಿದ್ದರು. ಅದಕ್ಕೆ ಉತ್ತಮ ಪೈಪೋಟಿಯನ್ನು ಕಾಂಗ್ರೆಸ್ ನೀಡಿತ್ತು ಮತ್ತು ಜೆಡಿಎಸ್ ಕೂಡಾ ಹಿಂದಕ್ಕೆ ಬಿದ್ದಿರಲಿಲ್ಲ.

ಐದಾರು ತಿಂಗಳಿನಿಂದ ಮೂರೂ ಪ್ರಮುಖ ಪಕ್ಷಗಳು ಚುನಾವಣಾ ತಯಾರಿಯಲ್ಲಿದ್ದರೂ, ಇಡೀ ರಾಜ್ಯ ಚುನಾವಣೆಯ ಪ್ರಚಾರದ ದಿಕ್ಕನ್ನು ಬದಲಾಯಿಸಿದ್ದು ಮೋದಿ ಎಂಟ್ರಿ. ತೀವ್ರತೆ ಪಡೆಯದ ಬಿಜೆಪಿ ಪ್ರಚಾರದ ಗೇರ್ ಬದಲಾಯಿಸಿದ್ದು ಮೋದಿ ಚುನಾವಣಾ ಪ್ರಚಾರ ಎನ್ನುವುದಕ್ಕೆ ಅನುಮಾನವೇ ಬೇಡ.

ರೋಚಕ ಫೋಟೋ ಫಿನಿಶ್‌ಗೆ ಅಣಿಯಾಗಿದೆ ಕರ್ನಾಟಕ ಚುನಾವಣೆರೋಚಕ ಫೋಟೋ ಫಿನಿಶ್‌ಗೆ ಅಣಿಯಾಗಿದೆ ಕರ್ನಾಟಕ ಚುನಾವಣೆ

ಮೋದಿ ಚುನಾವಣಾ ಪ್ರಚಾರಕ್ಕೆ ಸಿಗುತ್ತಿರುವ ಅಭೂತಪೂರ್ವ ಜನಬೆಂಬಲದಿಂದಾಗಿ 15 ರಿಂದ 21ಕ್ಕೆ ಮೋದಿ ಚುನಾವಣಾ ಪ್ರಚಾರದ ಸಂಖ್ಯೆಯನ್ನು ಅಮಿತ್ ಶಾ ಏರಿಸಿದ್ದರು. ಬಿಜೆಪಿ ನೂರರ ಗಡಿ ದಾಟಲಿದೆ ಎನ್ನುವ ಸಮೀಕ್ಷೆ ಏನು ಪ್ರಕಟವಾಗಿದೆಯೋ ಅದು ನೈಜ ಫಲಿತಾಂಶದ ಹತ್ತಿರ ಒಂದು ವೇಳೆ ಬಂದರೆ, ಅದಕ್ಕೆ ಒನ್ ಎಂಡ್ ಓನ್ಲೀ ಕಾರಣ ಮೋದಿ ಹವಾ... ಮುಂದೆ ಓದಿ..

ಎಕ್ಸಿಟ್ ಪೋಲ್ ಹೇಗೆ ಸಿದ್ದಪಡಿಸಲಾಗುವುದು?

ಎಕ್ಸಿಟ್ ಪೋಲ್ ಹೇಗೆ ಸಿದ್ದಪಡಿಸಲಾಗುವುದು?

ವೋಟ್ ಮಾಡಿ ಹೊರಬರುವ ಮತದಾರ, ಯಾವ ಪಕ್ಷಕ್ಕೆ ಮತಚಲಾಯಿಸಿದ ಎನ್ನುವ ಸ್ಯಾಂಪಲ್ ಅನ್ನು ಆಧರಿಸಿ, ಮತಗಟ್ಟೆ ಸಮೀಕ್ಷೆ ಸಿದ್ದಪಡಿಸಲಾಗುವುದು. ಹೀಗಾಗಿ ಚುನಾವಣಾಪೂರ್ವ ಸಮೀಕ್ಷೆಗಿಂತ (Pre Poll Survey) ಇದು ಬಹಳಷ್ಟು ನಿಖರವಾಗಿರುತ್ತದೆ ಎನ್ನುವ ಮಾತಿನ ನಡುವೆ ಒಂಬತ್ತು ವಾಹಿನಿ/ಮಾಧ್ಯಮ ಸಂಸ್ಥೆಗಳು ಎಕ್ಸಿಟ್ ಪೋಲ್ ಬಿಡುಗಡೆ ಮಾಡಿದೆ.

ಕಳೆದ ಬಾರಿ ಸರಿಯಾಗಿ ಸಮೀಕ್ಷೆ ನೀಡಿದ್ದ ಚಾಣಕ್ಯ

ಕಳೆದ ಬಾರಿ ಸರಿಯಾಗಿ ಸಮೀಕ್ಷೆ ನೀಡಿದ್ದ ಚಾಣಕ್ಯ

ಟುಡೇಸ್ ಚಾಣಕ್ಯ ಮತ್ತು ಸಿಫೋರ್ 2013ರಲ್ಲಿ ನಡೆಸಿದ ಮತಗಟ್ಟೆ ಸಮೀಕ್ಷೆ ಹೀಗಿತ್ತು. ಅಧಿಕೃತ ಫಲಿತಾಂಶ ಬಂದಿದ್ದು (ಕಾಂಗ್ರೆಸ್ - 122, ಬಿಜೆಪಿ - 40, ಜೆಡಿಎಸ್ - 40, ಇತರರು - 22). ಕಳೆದ ಬಾರಿ ಟುಡೇಸ್ ಚಾಣಕ್ಯ ನೀಡಿದ್ದ ಮತಗಟ್ಟೆ ಹೆಚ್ಚುಕಮ್ಮಿ ಕರಾರುವಕ್ಕಾಗಿತ್ತು.

ಸಿಫೋರ್:
ಕಾಂಗ್ರೆಸ್: 109-120
ಬಿಜೆಪಿ: 49-60
ಜೆಡಿಎಸ್: 34-41
ಕೆಜೆಪಿ: 05-12
ಇತರರು: 10-15

ಟುಡೇಸ್ ಚಾಣಕ್ಯ
ಕಾಂಗ್ರೆಸ್: 121-143
ಬಿಜೆಪಿ: 31-45
ಜೆಡಿಎಸ್: 31-45
ಕೆಜೆಪಿ, ಇತರರು: 08-22

Exit Poll : ಟುಡೇಸ್‌ ಚಾಣಕ್ಯ ಫಲಿತಾಂಶ, ಬಿಜೆಪಿಗೆ ಸ್ಪಷ್ಟ ಬಹುಮತExit Poll : ಟುಡೇಸ್‌ ಚಾಣಕ್ಯ ಫಲಿತಾಂಶ, ಬಿಜೆಪಿಗೆ ಸ್ಪಷ್ಟ ಬಹುಮತ

ಟುಡೇಸ್ ಚಾಣಕ್ಯ ಸರ್ವೇ ಪ್ರಕಾರ, ಬಿಜೆಪಿಗೆ ಸ್ಪಷ್ಟ ಬಹುಮತ

ಟುಡೇಸ್ ಚಾಣಕ್ಯ ಸರ್ವೇ ಪ್ರಕಾರ, ಬಿಜೆಪಿಗೆ ಸ್ಪಷ್ಟ ಬಹುಮತ

ಈ ಬಾರಿ ಟುಡೇಸ್ ಚಾಣಕ್ಯ ನೀಡಿದ ಸರ್ವೇ ಪ್ರಕಾರ, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಸಮೀಕ್ಷೆ ಪ್ರಕಾರ ಬಿಜೆಪಿಗೆ 120, ಕಾಂಗ್ರೆಸ್ 73, ಜೆಡಿಎಸ್ 26 ಮತ್ತು ಇತರರು ಮೂರು ಸ್ಥಾನ ಪಡೆಯಲಿದ್ದಾರೆ. ಸರಳ ಬಹುಮತ ಗಳಿಸಲು 113 ಸ್ಥಾನ ಬೇಕು. (ಎರಡು ಕ್ಷೇತ್ರಕ್ಕೆ ಚುನಾವಣೆ ಮುಂದೂಡಲಾಗಿರುವುದರಿಂದ ಇದು ಸದ್ಯಕ್ಕೆ 112). ರಿಪಬ್ಲಿಕ್ ಟಿವಿ - ಜನ್ ಕೀಬಾತ್ ಜಂಟಿಯಾಗಿ ನಡೆಸಿದ ಸಮೀಕ್ಷೆಯ ಪ್ರಕಾರ ಬಿಜೆಪಿಗೆ 95-114ಸ್ಥಾನ ಸಿಗಲಿದೆ.

ಇಂಡಿಯಾ ಟುಡೇ - ಆಕ್ಸಿಸ್ ಮೈ ಇಂಡಿಯಾ

ಇಂಡಿಯಾ ಟುಡೇ - ಆಕ್ಸಿಸ್ ಮೈ ಇಂಡಿಯಾ

ಇಂಡಿಯಾ ಟುಡೇ - ಆಕ್ಸಿಸ್ ಮೈ ಇಂಡಿಯಾ ಮತ್ತು ಟೈಮ್ಸ್ ನೌ - ವಿಎಂಆರ್ ನೀಡಿದ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ನೂರರ ಗಡಿ ದಾಟಲಿದೆ. ಇವೆರಡು ಕ್ರಮವಾಗಿ 106 ರಿಂದ 118 ಮತ್ತು 90 ರಿಂದ 103 ಸ್ಥಾನ ಸಿಗುತ್ತದೆ ಎಂದು ಹೇಳಿದೆ. ಕಾಪ್ಸ್ ಸಂಸ್ಥೆ ಬೆಂಗಳೂರು ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 16, ಬಿಜೆಪಿ 9 ಮತ್ತು ಜೆಡಿಎಸ್ 1ಸ್ಥಾನ ಪಡೆಯುತ್ತದೆ ಎಂದು ಹೇಳಿದೆ.

ಇಂಡಿಯಾ ಟುಡೇ - ಆಕ್ಸಿಸ್ ಸಮೀಕ್ಷೆ: ಯಾವ ಜಾತಿಯವರ ಮತ ಯಾರಿಗೆ?ಇಂಡಿಯಾ ಟುಡೇ - ಆಕ್ಸಿಸ್ ಸಮೀಕ್ಷೆ: ಯಾವ ಜಾತಿಯವರ ಮತ ಯಾರಿಗೆ?

ಕಾಂಗ್ರೆಸ್ ಅಥವಾ ಬಿಜೆಪಿಗೆ ಜೆಡಿಎಸ್ ಬೆಂಬಲ ಅತ್ಯವಶ್ಯಕ

ಕಾಂಗ್ರೆಸ್ ಅಥವಾ ಬಿಜೆಪಿಗೆ ಜೆಡಿಎಸ್ ಬೆಂಬಲ ಅತ್ಯವಶ್ಯಕ

ಇದು ಬಿಟ್ಟು ಮಿಕ್ಕೆಲ್ಲಾ ಹೊರಬಿದ್ದ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಅಥವಾ ಬಿಜೆಪಿಗೆ ಜೆಡಿಎಸ್ ಬೆಂಬಲ ಅತ್ಯವಶ್ಯಕ. ಸಮೀಕ್ಷೆಯಲ್ಲಿನ ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ, ಎಲ್ಲಾ ಸಂಸ್ಥೆಗಳು ಜೆಡಿಎಸ್ ಪಕ್ಷಕ್ಕೆ ನಲವತ್ತರ ಮೇಲೆ ಬರುತ್ತದೆ ಎಂದು ಹೇಳದೇ ಇರುವುದು. ಐದು ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ, ಇತರರ ಬೆಂಬಲ ಬೇಕಾಗುತ್ತದೆ.

English summary
Karnataka Assembly Elections 2018: People curiosity increased after exit poll result. Todays Chankya predicted BJP will get majority and India Today predicted Congress will retain the power. Other exit poll result says hung assembly ahead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X