Public TV Mega Pre-Poll Survey 2: ಯಾವ ಪಕ್ಷಗಳೂ ಮ್ಯಾಜಿಕ್ ನಂಬರ್ ದಾಟಲ್ಲ; ಪಬ್ಲಿಕ್ ಟಿವಿ ಸಮೀಕ್ಷೆಯಲ್ಲಿ ಬಹಿರಂಗ

2023ರ ಕರ್ನಾಟಕ ವಿಧಾನಸಭಾ ಚುನಾವಣಾ ಅಖಾಡ ರಂಗೇರುತ್ತಿದ್ದು, ಅಧಿಕಾರದ ಗದ್ದುಗೆ ಏರಲು ಬಿಜೆಪಿ, ಕಾಂಗ್ರೆಸ್, ಎಎಪಿ ಮತ್ತು ಜೆಡಿಎಸ್ ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿವೆ. ತಮ್ಮ ಅಭ್ಯರ್ಥಿಗಳ ಗೆಲುವಿಗೆ ರಾಜಕೀಯ ಪಕ್ಷಗಳು ಮತ್ತು ನಾಯಕರು ಟೊಂಕ ಕಟ್ಟಿ ನಿಂತಿದ್ದಾರೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಮುಕ್ತಾಯವಾಗಿವೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.

Karnataka Assembly Election Pre-Poll Public TV Mega Survey 2

ಇನ್ನು ಈ ಮಧ್ಯೆ ಪಬ್ಲಿಕ್‌ ಟಿವಿ ಎರಡನೇ ಬಾರಿ ಸಮೀಕ್ಷೆ ನಡೆಸಿದ್ದು, ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ತಿಳಿಸಿದೆ. ಎಲ್ಲ ಪಕ್ಷಗಳು ತಾವು 120ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದರೂ, ಪಬ್ಲಿಕ್‌ ಟಿವಿ ಸರ್ವೇ ಪ್ರಕಾರ ಯಾವ ಪಕ್ಷಗಳೂ ಮ್ಯಾಜಿಕ್ ನಂಬರ್ ದಾಟುವುದಿಲ್ಲ ಎಂದು ಹೇಳಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಏಪ್ರಿಲ್‌ನಲ್ಲಿ ನಡೆಸಿದ ಪಬ್ಲಿಕ್‌ ಟಿವಿ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಮತ್ತೊಮ್ಮೆ ಅಧಿಕಾರದ ಕನಸು ಕಾಣುತ್ತಿರುವ ಆಡಳಿತರೂಢ ಬಿಜೆಪಿ ಹಾಗೂ ಈ ಬಾರಿ ಸರ್ಕಾರ ನಮ್ಮದೇ ಎಂದು ಬೀಗುತ್ತಿದ್ದ ವಿಪಕ್ಷ ಕಾಂಗ್ರೆಸ್‌ಗೆ ಮರ್ಮಾಘಾತವಾಗಿದೆ.

Karnataka Assembly Election Pre-Poll Public TV Mega Survey 2

ಪಬ್ಲಿಕ್‌ ಟಿವಿ ಸಮೀಕ್ಷೆ ಚಾಪ್ಟರ್-2ರ ಪ್ರಕಾರ, ವಿಪಕ್ಷ ಕಾಂಗ್ರೆಸ್‌ 92ರಿಂದ 102 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದ್ದರೆ, ಬಿಜೆಪಿ ಪಕ್ಷ 83ರಿಂದ 90 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ಗೆ 29ರಿಂದ 34 ಸ್ಥಾನಗಳಲ್ಲಿ ಗೆಲ್ಲಲಿದ್ದು, ಪಕ್ಷೇತರರು 2ರಿಂದ 4 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗಿದೆ.

ಈ ಮೊದಲು ಸಮೀಕ್ಷೆ ಮಾಡಿದ್ದ ಪಬ್ಲಿಕ್‌ ಟಿವಿ, ಕಾಂಗ್ರೆಸ್‌ 98ರಿಂದ 108 ಸ್ಥಾನಗಳು, ಬಿಜೆಪಿಗೆ 85ರಿಂದ 95 ಸ್ಥಾನಗಳು, ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ 28ರಿಂದ 33 ಸ್ಥಾನಗಳು ಸಿಗಬಹುದು ಎಂದು ಹೇಳಿತ್ತು. ಅಲ್ಲದೇ 2 ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎನ್ನಲಾಗಿತ್ತು.

ಮಾರ್ಚ್ 30 ಹಾಗೂ 31ರಂದು ರಾಜಕೀಯ ಪಕ್ಷಗಳ ಟಿಕೆಟ್ ಘೋಷಣೆಗೂ ಮುನ್ನ 31 ಜಿಲ್ಲೆಗಳ 224 ಕ್ಷೇತ್ರಗಳ ಪ್ರಾಂತ್ಯವಾರು ಸಮೀಕ್ಷೆ ಮತ್ತು ಫಲಿತಾಂಶವನ್ನು ಪಬ್ಲಿಕ್ ಟಿವಿ ನೀಡಿತ್ತು.

ಇದೀಗ ಎರಡನೇ ಸಮೀಕ್ಷೆಯೂ ಎಲ್ಲ ಪಕ್ಷಗಳ ಟಿಕೆಟ್ ಘೋಷಣೆಯ ನಂತರ ಹಾಗೂ ಪಕ್ಷಗಳಲ್ಲಿ ಬಂಡಾಯ ಸ್ಫೋಟಗೊಂಡ ನಂತರ ಮಾಡಲಾಗಿರುವ ಸಮೀಕ್ಷೆಯಾಗಿದೆ. ಕರ್ನಾಟಕದ 224 ಕ್ಷೇತ್ರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅಭ್ಯರ್ಥಿಗಳ ಹೆಸರು ಫೈನಲ್ ಆದ ನಂತರ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಮತ್ತೊಮ್ಮೆ ಅತಂತ್ರ ಸರ್ಕಾರ ರಚನೆಯಾಗಲಿದೆ.

ಮತದಾನಕ್ಕೆ ಇನ್ನು 15 ದಿನಗಳ ಕಾಲಾವಕಾಶವಿದ್ದು, ಮುಂದಿನ ದಿನಗಳಲ್ಲಿ ಮತದಾರನ ಒಲವು ಯಾರ ಕಡೆಗೆ ತಿರುಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+