Karnataka 7th Pay Commission; ಸರ್ಕಾರಿ ನೌಕರರಿಗೆ ಮಾರ್ಗಸೂಚಿ
7ನೇ ರಾಜ್ಯ ವೇತನ ಆಯೋಗ ಸರ್ಕಾರದ ವಿವಿಧ ಇಲಾಖೆಗಳು/ ಸಂಸ್ಥೆಗಳು, ನೌಕರರ ಸಂಘಗಳು ಮತ್ತು ಸರ್ಕಾರದ ನೌಕರರುಗಳು ಆಯೋಗಕ್ಕೆ ಉತ್ತರಗಳನ್ನು, ಮನವಿಗಳನ್ನು ಸಲ್ಲಿಸಲು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಬೆಂಗಳೂರು, ಫೆಬ್ರವರಿ 07; ಸರ್ಕಾರಿ ನೌಕರರ ಬೇಡಿಕೆಯಂತೆ ಕರ್ನಾಟಕ ಸರ್ಕಾರ ಮೂವರು ಸದಸ್ಯರ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿದೆ. ಆಯೋಗ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಸಂಬಂಧ ಪ್ರಶ್ನಾವಳಿಗಳನ್ನು ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರಿ ನೌಕರರ (ಯುಜಿಸಿ/ ಎಐಸಿಟಿಇ/ ಐಸಿಎಆರ್/ಎನ್‌ಜೆಪಿಸಿ ವೇತನ ಶ್ರೇಣಿ ಹೊಂದಿರುವವರನ್ನು ಹೊರತುಪಡಿಸಿ) ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ಬೋಧಕೇತರ ಸಿಬ್ಬಂದಿಗಳ ವೇತನ ರಚನೆಯನ್ನು ಪರಿಶೀಲಿಸಿ, ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲು ಆಯೋಗವನ್ನು ರಚಿಸಲಾಗಿದೆ.
ಸರ್ಕಾರದ ವಿವಿಧ ಇಲಾಖೆಗಳು/ ಸಂಸ್ಥೆಗಳು, ನೌಕರರ ಸಂಘಗಳು ಮತ್ತು ಸರ್ಕಾರದ ನೌಕರರುಗಳು ಆಯೋಗಕ್ಕೆ ಉತ್ತರಗಳನ್ನು, ಮನವಿಗಳನ್ನು ಸಲ್ಲಿಸುವಲ್ಲಿ ಅನುಸರಿಸಬೇಕಾದ ಹಾಗೂ ಕಾರ್ಯ ವಿಧಾನದ ಕುರಿತಂತೆ ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದೆ. ದಿನಾಂಕ 17/01/2023ರ ಅಧಿಕೃತ ಜ್ಞಾಪನದಲ್ಲಿ, ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆಗಳು ಮತ್ತು ಇತರೆ ಸೇವಾ ನಿಬಂಧನೆಗಳ ಪರಿಷ್ಕರಣೆ ಕುರಿತಂತೆ ವಿವರವಾದ ಪ್ರಶ್ನಾವಳಿಗಳನ್ನು ಬಿಡುಗಡೆ ಮಾಡಿ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.
ಪ್ರತಿಯೊಂದು ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು/ ಇಲಾಖಾ ಮುಖ್ಯಸ್ಥರು ಆಯಾ ಇಲಾಖೆಯಲ್ಲಿ ದಿನಾಂಕ 31/01/2023 ರಲ್ಲಿದ್ದಂತೆ ಮಾಹಿತಿಗಳನ್ನು ವೇತನ ಆಯೋಗಕ್ಕೆ ದಿನಾಂಕ 10/02/2023ರ ಒಳಗೆ ಕಳುಹಿಸತಕ್ಕದ್ದು ಅಥವಾ ಆಯೋಗವು ವಿಸ್ತರಿಸಿ ನಿಗದಿಪಡಿಸಬಹುದಾದ ದಿನಾಂಕದೊಳಗೆ ಕಳುಹಿಸತಕ್ಕದ್ದು ಎಂದು ಸೂಚಿಸಲಾಗಿದೆ.

ವಿವರವಾದ ಅಧ್ಯಯನದ ಅವಶ್ಯಕತೆ
7ನೇ ರಾಜ್ಯ ವೇತನ ಆಯೋಗದ ಪ್ರಶ್ನಾವಳಿಗಳಲ್ಲಿ ಪ್ರಸ್ತಾಪಿಸಿರುವ ವಿಷಯವನ್ನು ಪರಿಶೀಲಿಸಲು ವಿವರವಾದ ಅಧ್ಯಯನದ ಅವಶ್ಯಕತೆ ಇದೆ. ವೇತನ ಆಯೋಗವು ತನ್ನ ಕಾರ್ಯಕಲಾಪಗಳನ್ನು ನಡೆಸಲು ಸರ್ಕಾರದ ವಿವಿಧ ಇಲಾಖೆಗಳು/ ಸ್ಥಳೀಯ ಸಂಸ್ಥೆಗಳು/ ನಿಗಮ/ ಮಂಡಳಿಗಳು ಹಾಗೂ ರಾಜ್ಯ ಸರ್ಕಾರದ ಯಾವುದೇ ಅಂಗ ಸಂಸ್ಥೆಗಳಿಂದ ಮಾಹಿತಿಗಳು ಮತ್ತು ದಸ್ತಾವೇಜುಗಳನ್ನು ಪರಿಶೀಲಿಸುವ ಅವಶ್ಯಕತೆ ಇರುತ್ತದೆ.
ಪರಿಶೀಲನಾರ್ಹ ಅಂಶಗಳ ಕುರಿತಂತೆ, ಆಯೋಗವು ಬಯಸುವ ವಿಷಯ ಮತ್ತು ಅಧಿಕೃತ ಮಾಹಿತಿಗಳ ಬಗ್ಗೆ ಸೂಕ್ತ ದಾಖಲೆ/ ಮಾಹಿತಿಗಳನ್ನು ಪಡೆಯಲು ಆಯೋಗವು ಸರ್ಕಾರಿ ನೌಕರರು/ ಪರಿಣಿತರು/ ಸಾರ್ವಜನಿಕರನ್ನು ಆಹ್ವಾನಿಸಿ ಅಧ್ಯಯನ ನಡೆಸಬೇಕಾಗಿರುತ್ತದೆ. ಪರಿಶೀಲನಾಂಶಗಳ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು ಮತ್ತು ಸರ್ಕಾರದ ಇತರ ಅಧಿಕಾರಿಗಳ ಅಭಿಪ್ರಾಯಗಳನ್ನು ಸಹ ಆಯೋಗವು ಕೋರಬಹುದು.

ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ
ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರು ಆಯೋಗಕ್ಕೆ ಉತ್ತರಗಳನ್ನು ಸಲ್ಲಿಸುವ ಸಂಬಂಧದಲ್ಲಿ ಒಂದು ನಿರ್ದಿಷ್ಟ ಕಾರ್ಯವಿಧಾನವನ್ನು ಅನುಸರಿಸುವಂತೆ ಸೂಚನೆಗಳನ್ನು ನೀಡಿ, ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕೋರಲಾಗಿದೆ.
ವಾಸ್ತವಿಕ ಹಾಗೂ ಸಾಂದರ್ಭಿಕ ಮಾಹಿತಿ ಮೊದಲಾದವುಗಳನ್ನು ಆಯೋಗಕ್ಕೆ ಒದಗಿಸುವಲ್ಲಿ ಇಲಾಖೆಗಳಿಗೆ ಸಹಕರಿಸಲು ಮತ್ತು ಆಯೋಗದ ವ್ಯಾಪ್ತಿಗೆ ಬರುವ ಪರಿಶೀಲನಾರ್ಹ ಅಂಶಗಳಿಗೆ ಸಂಬಂಧಿಸಿದಂತೆ ತನ್ನ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರತಿಯೊಬ್ಬ ಸರ್ಕಾರಿ ನೌಕರನಿಗೂ ಪೂರ್ಣ ಅವಕಾಶವನ್ನು ಕಲ್ಪಿಸಲು ಸೂಚನೆಗಳನ್ನು ಮಾರ್ಗದರ್ಶನಕ್ಕಾಗಿ ನೀಡಲಾಗಿದೆ. ಆಯೋಗಕ್ಕೆ ಅಗತ್ಯವಾಗಬಹುದಾದ ವಾಸ್ತವಿಕ ಮತ್ತು ಸಾಂದರ್ಭಿಕ ಮಾಹಿತಿಗಳು ಮತ್ತು ಇತರೆ ದಾಖಲೆಗಳನ್ನು ಇಲಾಖೆಗಳು ಒದಗಿಸಬಹುದು.
ಇಲಾಖಾ ಮುಖ್ಯಸ್ಥರು ತಮ್ಮ ಅಧಿಕಾರ ಸ್ಥಾನದಿಂದ ಪ್ರಶ್ನಾವಳಿಗಳಿಗೆ ಉತ್ತರಗಳು/ ವಿವರಣೆ/ ದಾಖಲೆಗಳನ್ನು ತಮಗೆ ಸಂಬಂಧಿಸಿದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಕಳುಹಿಸಬಹುದು. ಕಾರ್ಯದರ್ಶಿಗಳು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ದಾಖಲಿಸಿ, ವೇತನ ಆಯೋಗದ ಕಾರ್ಯದರ್ಶಿಗಳಿಗೆ ನೇರವಾಗಿ ಕಳುಹಿಸಬೇಕು.

ಅನುಕೂಲವಾಗುವಂತಹ ಮನವಿ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ತಮ್ಮ ತಿಳುವಳಿಕೆ ಮತ್ತು ಅನುಭವದ ಆಧಾರದ ಮೇಲೆ ಅವರ ಅಭಿಪ್ರಾಯಗಳನ್ನು ಆಯೋಗದ ಗಮನಕ್ಕೆ ತರಬಹುದು. ಸಚಿವಾಲಯದ ಇತರೆ ಅಧಿಕಾರಿಗಳು ಅಂದರೆ ವಿಶೇಷ ಕಾರ್ಯದರ್ಶಿಗಳು/ ಜಂಟಿ ಕಾರ್ಯದರ್ಶಿಗಳು/ ಉಪ ಸಹ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು/ ಅಧೀನ ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರು ಅವರ ಕಾರ್ಯವ್ಯಾಪ್ತಿಯೊಳಗೆ ಬರುವ ವಿಷಯಗಳ ಬಗ್ಗೆ ಮೌಖಿಕವಾಗಿ ಅಥವಾ ಬರವಣಿಗೆ ಮೂಲಕ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಬಹುದು.
ಸರ್ಕಾರಿ ನೌಕರನು ಅವನ/ ಅವಳ ವೈಯಕ್ತಿಕ ಕುಂದುಕೊರತೆಗಳನ್ನು ಹೊರತುಪಡಿಸಿ, ಅವರ ವೈಯಕ್ತಿಕ ಸಾಮರ್ಥ್ಯದಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರನೂ ಆಯೋಗದ ಕಾರ್ಯಗಳಿಗೆ ಅನುಕೂಲವಾಗುವಂತಹ ಮನವಿ/ ದಾಖಲೆ ಮುಂತಾದವುಗಳನ್ನು ಸಲ್ಲಿಸಬಹುದು. ಆಯೋಗವು ಬಯಸಿದಲ್ಲಿ ಹಾಗೂ ಸಂಸ್ಥೆಗಳು ಒಪ್ಪಿದಲ್ಲಿ, ಸರ್ಕಾರಿ ನೌಕರನು/ ನೌಕರರು ಅವರಿಗೆ ಸಂಬಂಧಿಸಿದ ಸೇವಾ ಸಂಸ್ಥೆಗಳ ಪರವಾಗಿ ಆಯೋಗದ ಮುಂದೆ ಹಾಜರಾಗಬಹುದು.
ಸರ್ಕಾರದ ವಿವಿಧ ಇಲಾಖೆಗಳು/ ಸಂಸ್ಥೆಗಳು/ ಮಂಡಳಿಗಳು ಆಯೋಗಕ್ಕೆ ಮಾಹಿತಿ/ ದಾಖಲೆಗಳನ್ನು ಒದಗಿಸಲು ಹಾಗೂ ಪ್ರಸ್ತಾವನೆ ಸಲ್ಲಿಸಲು ಮೊದಲಿಗೆ ನೋಡಲ್ ಅಧಿಕಾರಿಯನ್ನು ಸಂಪರ್ಕಾಧಿಕಾರಿಯನ್ನಾಗಿ ಅಧಿಸೂಚಿಸಬೇಕು. ರಾಜ್ಯ ವೇತನ ಆಯೋಗವು ಬಿಡುಗಡೆ ಮಾಡಿರುವ ಪ್ರಶ್ನಾವಳಿ ಮತ್ತು ಇತರೆ ಮಾಹಿತಿಗಳು ಆರ್ಥಿಕ ಇಲಾಖೆಯ ಅಧಿಕೃತ ಅಂತರ್ಜಾಲ ತಾಣ www.finance.karnataka.gov.in ನಲ್ಲಿಯೂ ಲಭ್ಯವಿದೆ.

ವೇತನ ಪರಿಷ್ಕರಣೆ ಸೇರಿದಂತೆ ಇತರ ವಿಷಯಗಳು
ಯಾವುದಾದರೂ ವೃಂದದ, ಕೆಲವು ವರ್ಗಗಳ ಹುದ್ದೆಯ ವೇತನ ಶ್ರೇಣಿಯನ್ನು ಪರಿಷ್ಕರಿಸುವ ಬಗ್ಗೆ. ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಿ ಅವುಗಳಿಗೆ ವೇತನ ಶ್ರೇಣಿಯನ್ನು ಮಂಜೂರು ಮಾಡುವ ಬಗ್ಗೆ, ಇತರೆ ವೃಂದಗಳೊಂದಿಗೆ ವೇತನ ಶ್ರೇಣಿಯನ್ನು ಸಮಾನಾಂತರಗೊಳಿಸುವ ಬಗ್ಗೆ. ವೃಂದ ಪುನರಾವಲೋಕನಾ ಸಮಿತಿಯ ತೀರ್ಮಾನಗಳ ಪ್ರಕಾರ ಸೇವೆಯಲ್ಲಿ ಹೊಸ ವೃಂದಗಳನ್ನು ಸೃಷ್ಟಿಸಿ/ ಪ್ರಾರಂಭಿಸಿ, ಅವುಗಳಿಗೆ ಹೊಸ ವೇತನ ಶ್ರೇಣಿಗಳನ್ನು ಮಂಜೂರು ಮಾಡುವ ಬಗ್ಗೆಯೂ ಅಭಿಪ್ರಾಯ/ ಮನವಿ ನೀಡಬಹುದು.
ಆಯೋಗವು ಬಯಸುವ ಅಗತ್ಯ ಮಾಹಿತಿ ಹಾಗೂ ಅಂಕಿ ಅಂಶಗಳನ್ನು ಸಂಗ್ರಹಿಸಿ ಆಯೋಗಕ್ಕೆ ಸಲ್ಲಿಸುವ ಜವಾಬ್ದಾರಿಯು ಇಲಾಖೆ/ ಸಂಸ್ಥೆಗಳ ಸಂಪರ್ಕಾಧಿಕಾರಿಯದ್ದಾಗಿರುತ್ತದೆ. ಸರ್ಕಾರದ ವಿವಿಧ ಇಲಾಖೆಗಳ/ ಸಂಸ್ಥೆಗಳ ಮುಖ್ಯಸ್ಥರುಗಳು ವೇತನ ಆಯೋಗದೊಂದಿಗೆ ಸುಗಮವಾಗಿ ವ್ಯವಹರಿಸಲು ಉಪ ಕಾರ್ಯದರ್ಶಿ ದರ್ಜೆಗಿಂತ ಕಡಿಮೆ ಇಲ್ಲದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ಕೂಡಲೇ ಅಧಿಸೂಚಿಸಬೇಕು.
ನೋಡಲ್ ಅಧಿಕಾರಿಯ ಹೆಸರು, ಪದನಾಮ, ಇಲಾಖೆ/ ಸಂಸ್ಥೆ, ಕಛೇರಿ ವಿಳಾಸ ಮತ್ತು ಸಂವಹನಕ್ಕಾಗಿ ದೂರವಾಣಿ/ ಮೊಬೈಲ್/ ಇ-ಮೇಲ್ ವಿವರಗಳನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು. ಇಲಾಖೆಯು ನೀಡಬಯಸುವ ಮಾಹಿತಿಗಳನ್ನು ಭೌತಿಕ ಪ್ರತಿಯ ಮೂಲಕ ಮತ್ತು ಆಯೋಗದ ಇ-ಮೇಲ್ ವಿಳಾಸ [email protected]ಗೆ ಕಳುಹಿಸಬಹುದು.
-
ಮಾರ್ಚ್ 20ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 104 ಕೋಟಿ ರೂ. ವೆಚ್ಚದಲ್ಲಿ ಉಚಿತ ಶೂ, ಸಾಕ್ಸ್ ವಿತರಣೆಗೆ ಸರ್ಕಾರದ ಆದೇಶ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications