2nd PUC Exam 2025: ದ್ವಿತೀಯ ಪಿಯು ಪರೀಕ್ಷೆ 2025, ಕರಡು ವೇಳಾಪಟ್ಟಿ
ಬೆಂಗಳೂರು, ಡಿಸೆಂಬರ್ 02: 2024ನೇ ವರ್ಷ ಅಂತ್ಯವಾಗುತ್ತಾ ಬಂದಿದೆ. 2025ರಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಬೇಕಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-1ರ ಕರಡು ವೇಳಾಪಟ್ಟಿಯನ್ನು ಪ್ರಕಟಿಸಿದೆ. 1/3/2025 ರಿಂದ 19/3/2023ರ ತನಕ ಪರೀಕ್ಷೆಗಳು ನಡೆಯಲಿವೆ.
ದ್ವಿತೀಯ ಪಿಯುಸಿ 2025ರ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ. ಈಗ ಸರ್ಕಾರ ಮೂರು ಪರೀಕ್ಷೆಗಳನ್ನು ನಡೆಸುತ್ತಿದ್ದು, ಉತ್ತಮ ಫಲಿತಾಂಶವನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶವಿದೆ.

ಸೋಮವಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 1 ರಿಂದ 19ರ ತನಕ ವಿವಿಧ ವಿಷಯದ ಪರೀಕ್ಷೆಗಳು ನಡೆಯಲಿವೆ. ಇದಕ್ಕೆ ಆಕ್ಷೇಪಣೆಗಳನ್ನು ಸ್ವೀಕಾರ ಮಾಡಿದ ಬಳಿಕ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ದ್ವಿತೀಯ ಪಿಯು ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ
* 1/3/2025ರ ಶನಿವಾರ. ಕನ್ನಡ / ಅರೇಬಿಕ್. ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ
* 2/3/2025ರ ಭಾನುವಾರ ರಜೆ
* 3/3/2025ರ ಸೋಮವಾರ. ಗಣಿತ/ ಶಿಕ್ಷಣ ಶಾಸ್ತ್ರ/ ತರ್ಕಶಾಸ್ತ್ರ/ ವ್ಯವಹಾರ ಅಧ್ಯಯನ. ಬೆಳಗ್ಗೆ 10 ರಿಂದ ಮಧ್ಯಾಹ್ನ 1
* 4/3/2025ರ ಮಂಗಳವಾರ. ತಮಿಳು/ ತೆಲಗು/ ಮಲಯಾಳಂ/ ಮರಾಠಿ/ ಉರ್ದು/ ಸಂಸ್ಕೃತ/ ಫ್ರೆಂಚ್. ಬೆಳಗ್ಗೆ 10 ರಿಂದ ಮಧ್ಯಾಹ್ನ 1
* 5/3/2025ರ ಬುಧವಾರ. ರಾಜ್ಯಶಾಸ್ತ್ರ/ ಸಂಖ್ಯಾಶಾಸ್ತ್ರ. ಬೆಳಗ್ಗೆ 10 ರಿಂದ ಮಧ್ಯಾಹ್ನ 1
* 6/3/2025ರ ಗುರುವಾರ ಪರೀಕ್ಷೆಗಳಿಲ್ಲ
* 7/3/2025ರ ಶುಕ್ರವಾರ. ಇತಿಹಾಸ/ ಭೌತಶಾಸ್ತ್ರ. ಬೆಳಗ್ಗೆ 10 ರಿಂದ ಮಧ್ಯಾಹ್ನ 1
* 8/3/2025ರ ಶನಿವಾರ. ಹಿಂದಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1
* 9/3/2025ರ ಭಾನುವಾರ. ರಜೆ
* 10/3/2025ರ ಸೋಮವಾರ. ಐಚ್ಛಿಕ ಕನ್ನಡ/ ಲೆಕ್ಕಶಾಸ್ತ್ರ/ ಭೂಗರ್ಭಶಾಸ್ತ್ರ/ ಗೃಹ ವಿಜ್ಞಾನ. ಬೆಳಗ್ಗೆ 10 ರಿಂದ ಮಧ್ಯಾಹ್ನ 1
* 11/3/2025ರ ಮಂಗಳವಾರ ಪರೀಕ್ಷೆಗಳಿಲ್ಲ
* 12/3/2025ರ ಬುಧವಾರ. ಮನಃಶಾಸ್ತ್ರ/ ರಸಾಯನಶಾಸ್ತ್ರ/ ಮೂಲ ಗಣಿತ. ಬೆಳಗ್ಗೆ 10 ರಿಂದ ಮಧ್ಯಾಹ್ನ 1
* 13/3/2025ರ ಗುರುವಾರ. ಅರ್ಥಶಾಸ್ತ್ರ. ಬೆಳಗ್ಗೆ 10 ರಿಂದ ಮಧ್ಯಾಹ್ನ 1
* 14/3/2025ರ ಶುಕ್ರವಾರ. ಪರೀಕ್ಷೆಗಳಿಲ್ಲ
* 15/3/2025ರ ಶನಿವಾರ. ಇಂಗ್ಲೀಷ್. ಬೆಳಗ್ಗೆ 10 ರಿಂದ ಮಧ್ಯಾಹ್ನ 1
* 16/3/2025ರ ಭಾನುವಾರ. ರಜೆ
* 17/3/2025ರ ಸೋಮವಾರ. ಭೂಗೋಳಶಾಸ್ತ್ರ/ ಜೀವಶಾಸ್ತ್ರ. ಬೆಳಗ್ಗೆ 10 ರಿಂದ ಮಧ್ಯಾಹ್ನ 1
* 18/3/2025ರ ಮಂಗಳವಾರ. ಸಮಾಜಶಾಸ್ತ್ರ/ ವಿದ್ಯುನ್ಮಾನ ಶಾಸ್ತ್ರ/ ಗಣಕವಿಜ್ಞಾನ. ಬೆಳಗ್ಗೆ 10 ರಿಂದ ಮಧ್ಯಾಹ್ನ 1
* 19/3/2025ರ ಬುಧವಾರ. ಹಿಂದೂಸ್ತಾನಿ ಸಂಗೀತ/ ಮಾಹಿತಿ ತಂತ್ರಜ್ಞಾನ/ ರಿಟೈಲ್/ ಆಟೋಮೊಬೈಲ್/ ಹೆಲ್ತ್‌ಕೇರ್/ ಬ್ಯುಟಿ ಅಂಡ್ ವೆಲ್‌ನೆಸ್. ಬೆಳಗ್ಗೆ 10 ರಿಂದ ಮಧ್ಯಾಹ್ನ 12.15
ದ್ವಿತೀಯ ಪಿಯು ಪರೀಕ್ಷೆಗೆ ಖಾಸಗಿಯಾಗಿ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ, ಪರೀಕ್ಷಾ ಫಲಿತಾಂಶ ತಿರಸ್ಕಾರ ಮಾಡಿದ (ಅಂಕಗಳು ತೃಪ್ತಿ ಇರದ ಹಿನ್ನೆಲೆ) ಹೊಸ ವಿದ್ಯಾರ್ಥಿಗಳು ಮತ್ತು ಪುನಾರವರ್ತಿತ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮೂರು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮೂರರ ಪೈಕಿ ಉತ್ತಮ ಫಲಿತಾಂಶವನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶವಿದೆ.












Click it and Unblock the Notifications