New Railway Lines: ತುಮಕೂರು-ದಾವಣಗೆರೆ, ರಾಯದುರ್ಗ ರೈಲು ಮಾರ್ಗದ ಭೂಸ್ವಾಧೀನ ಯಶಸ್ವಿ, ಕಾರ್ಯಾಚರಣೆ ಅಪ್ಡೇಟ್ಸ್

Karnataka 2 New Railway: ರಾಜ್ಯದ ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತ್ಯಧಿಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದರಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಿಂದ ನೇರ ರೈಲು ಮಾರ್ಗ ಸೇರಿ ಒಟ್ಟು ಎರಡು ಹೊಸ ರೈಲು ಮಾರ್ಗಗಳ ಕಾಮಗಾರಿ ಪ್ರಗತಿಯಲ್ಲಿದೆ. ಯೋಜನೆ ಪರಿಶೀಲಿಸಿದ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ.ಸೋಮಣ್ಣ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ಭೂಸ್ವಾಧೀನ ಇನ್ನಿತರ ಕಾರಣಗಳಿಂದ ವಿಳಂಬವಾಗಿದ್ದ ಯೋಜನೆಗಳಿಗೆ ವೇಗ ನೀಡುವಂತೆ ಸೂಚಿಸಿದರು. ಅಡಚಣೆ ಉಂಟು ಮಾಡಿದ್ದ ಭೂಸ್ವಾಧೀನ ಸಮಸ್ಯೆ ನಿವಾರಣೆಯಾಗಿದೆ ಎಂದರು.

ಇಂದು ಮಂಗಳವಾರ ಬೆಂಗಳೂರು ಕಂಟೋನ್ಮೆಂಟ್‌ನ ಮುಖ್ಯ ಆಡಳಿತ ಕಚೇರಿಯಲ್ಲಿ, ತುಮಕೂರು-ಯಶವಂತಪುರ ವಿಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಅಜಯ್ ಶರ್ಮಾ ಮತ್ತು ನೈಋತ್ಯ ರೈಲ್ವೆಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತಿಯಲ್ಲಿ ಸಚಿವ ವಿ.ಸೋಮಣ್ಣ ಅವರು ಪರಿಶೀಲಿಸಿದರು. ತುಮಕೂರು-ದಾವಣಗೆರೆ ಮತ್ತು ತುಮಕೂರು-ರಾಯದುರ್ಗ ಹೊಸ ಮಾರ್ಗ ಯೋಜನೆಗಳ ತ್ವರಿತವಾಗಿ ಕಾರ್ಯಗತಗೊಳಿಸುವ ಅಗತ್ಯತೆ ವಿವರಿಸಿದರು.

New Railway Projects

ರಸ್ತೆ ಓವರ್ ಬ್ರಿಡ್ಜ್ ಮತ್ತು ರಸ್ತೆ ಕೆಳ ಸೇತುವೆ ಕಾಮಗಾರಿಗಳ ಪ್ರಗತಿಯನ್ನು ಸಹ ಅವರು ಪರಿಶೀಲಿಸಿದರು, ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸಂಪರ್ಕವನ್ನು ಸುಧಾರಿಸಲು ಅವುಗಳನ್ನು ಸಕಾಲಿಕವಾಗಿ ಪೂರ್ಣಗೊಳಿಸಬೇಕೆಂದರು.

ಹೊಸ ರೈಲ್ವೆ ಮಾರ್ಗ ಯೋಜನೆಗಳ ಅಪ್ಡೇಟ್, ಶೇ. 92ರಷ್ಟು ಪ್ರಗತಿ

ತುಮಕೂರು-ಚಿತ್ರದುರ್ಗ-ದಾವಣಗೆರೆ (191 ಕಿ.ಮೀ) ಹೊಸ ರೈಲು ಮಾರ್ಗ ಯೋಜನೆ ನಿರ್ಮಾಣ ಪ್ರಗತಿಯಲ್ಲಿದೆ. ರೂ. 1,801 ಕೋಟಿ ಅಂದಾಜು ವೆಚ್ಚವನ್ನು ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರ 50:50 ಸಹಭಾಗಿತ್ವದಲ್ಲಿ ಒದಗಿಸಲಾಗುತ್ತದೆ. ಭೂಸ್ವಾಧೀನದಲ್ಲಿ ಶೇ. 92 ಕ್ಕೂ ಹೆಚ್ಚು ಪ್ರಗತಿ ಸಾಧಿಸಲಾಗಿದೆ. ಉರುಕೆರೆ-ತಿಮ್ಮರಾಜನಹಳ್ಳಿ ವ್ಯಾಪ್ತಿಯ 13.31 ಕಿಲೋ ಮೀಟರ್ ವಿಭಾಗದ ಸಿಆರ್‌ಎಸ್ ಪರಿಶೀಲಿಸಿದ್ದು, ಆ ಕೆಲಸ ಪೂರ್ಣಗೊಂಡಿದ್ದು, ಚಾಲನೆಗೆ ಸಿದ್ಧವಾಗಿದೆ. ಉಳಿದ ವಿಭಾಗಗಳಲ್ಲಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದು, ಯೋಜನೆಯನ್ನು ಫೆಬ್ರವರಿ 2028ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಬೆಂಗಳೂರು-ಉತ್ತರ ಕರ್ನಾಟಕ ರೈಲು ಮಾರ್ಗ: 162 ಕೋಟಿ ವೆಚ್ಚದ ಮಹತ್ವದ ಯೋಜನೆಗೆ ಒಪ್ಪಿಗೆ, ಪ್ರಯೋಜನಗಳೇನು?
ಬೆಂಗಳೂರು-ಉತ್ತರ ಕರ್ನಾಟಕ ರೈಲು ಮಾರ್ಗ: 162 ಕೋಟಿ ವೆಚ್ಚದ ಮಹತ್ವದ ಯೋಜನೆಗೆ ಒಪ್ಪಿಗೆ, ಪ್ರಯೋಜನಗಳೇನು?

ತುಮಕೂರು-ರಾಯದುರ್ಗ (206 ಕಿ.ಮೀ) ಹೊಸ ರೈಲು ಮಾರ್ಗ ಯೋಜನೆಯು ಅಂದಾಜು 2,496 ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿಯಲ್ಲಿದೆ. ಈ ಮಾರ್ಗವು ಬಳ್ಳಾರಿ ಮಾರ್ಗವಾಗಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಸಂಪರ್ಕಿಸುತ್ತದೆ. ಎರಡು ರಾಜ್ಯಗಳ ರೈಲು ಪ್ರಯಾಣಿಕರಿಗೆ, ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ಪ್ರಮುಖ ಸಾರಿಗೆ ಸೇವೆಯಾಗಿ ಅನುಕೂಲ ಒದಗಿಸುತ್ತದೆ.

83 ಕಿ.ಮೀ ಕಾಮಗಾರಿ ಪೂರ್ಣ

ತುಮಕೂರು-ರಾಯದುರ್ಗ ರೈಲ್ವೆ ಮಾರ್ಗದಲ್ಲಿ 83 ಕಿ.ಮೀ ಮಾರ್ಗ ಈಗಾಗಲೇ ಕಾರ್ಯಾರಂಭಗೊಂಡಿದೆ. ತುಮಕೂರು-ಉರುಕೆರೆ ವಿಭಾಗದ ಸಿಆರ್‌ಎಸ್ ಪರಿಶೀಲನೆ ಪೂರ್ಣಗೊಂಡಿದ್ದು, ಪಾವಗಡ-ದೊಡ್ಡಹಳ್ಳಿ ವಿಭಾಗ ಉದ್ಘಾಟನೆಗೆ ಸಿದ್ಧವಾಗಿದೆ. ಉಳಿದ ಭಾಗಗಳಲ್ಲಿ ಕಾಮಗಾರಿಗಳು ಉತ್ತಮ ಪ್ರಗತಿಯಲ್ಲಿ ಸಾಗುತ್ತಿದ್ದು, ಭೂಸ್ವಾಧೀನ ಶೇ. 97 ರಷ್ಟು ಮುಗಿದಿದೆ. ಯಾವುದೇ ಸಮಸ್ಯೆ ಇಲ್ಲದೇ ಕೆಲಸ ಮುನ್ನಡೆಸುವಂತೆ ಗುತ್ತಿಗೆದಾರರು, ಅಧಿಕಾರಿಗಳಿಗೆ ಅವರು ನಿರ್ದೇಶಿಸಿದರು.

ಪ್ರಮುಖ ರೈಲು ಮಾರ್ಗದಲ್ಲಿ ವಿದ್ಯುತ್ ವ್ಯವಸ್ಥೆ ಉನ್ನತೀಕರಣ

ಬೆಂಗಳೂರು -ತುಮಕೂರು ರೈಲು ಮಾರ್ಗದ ವಿದ್ಯುತ್ ಎಳೆತ (ಟ್ರಾಕ್ಸನ್) ವ್ಯವಸ್ಥೆಯ ಉನ್ನತೀಕರಣಕ್ಕೆ ಕೇಂದ್ರವು ಇಂದು ಅನುಮೋದನೆ ನೀಡಿದೆ. ರಾಜ್ಯದಲ್ಲೇ ಹೆಚ್ಚು ಜನದಟ್ಟಣೆ ಕಂಡು ಬರುವ ಮಾರ್ಗ ಇದಾಗಿದ್ದು, ಇಲ್ಲಿನ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಮತ್ತಷ್ಟು ಬಲಪಡಿಸುವ ಅಗತ್ಯವಿತ್ತು. ಹೀಗಾಗಿ 160 ಕೋಟಿ ರೂ.ಗೂ ಅಧಿಕ ವೆಚ್ಚದ ಟ್ರಾಕ್ಸನ್ ಮೇಲ್ದರ್ಜೆಯ ಯೋಜನೆ ರೂಪಾಯಿಸಲಾಗಿದ್ದು, ಕಾರ್ಯಾರಂಭಕ್ಕೆ ಒಪ್ಪಿಗೆ ಸಹ ದೊರೆತಿದೆ.

ಬೆಂಗಳೂರು ಔಟರ್ ರಿಂಗ್ ರಸ್ತೆ ಪ್ರಯಾಣಿಕರಿಗೆ ನಿರಾಶೆ, ನೀಲಿ ಮಾರ್ಗಕ್ಕೆ ಮೆಟ್ರೋ ಬಂದರೂ ಡೆಡ್‌ಲೈನ್ ವಿಸ್ತರಣೆ?
ಬೆಂಗಳೂರು ಔಟರ್ ರಿಂಗ್ ರಸ್ತೆ ಪ್ರಯಾಣಿಕರಿಗೆ ನಿರಾಶೆ, ನೀಲಿ ಮಾರ್ಗಕ್ಕೆ ಮೆಟ್ರೋ ಬಂದರೂ ಡೆಡ್‌ಲೈನ್ ವಿಸ್ತರಣೆ?

ಇದರಿಂದ ಬೆಂಗಳೂರು- ತುಮಕೂರು ರೇಲ್ವೆ ಮಾರ್ಗದಲ್ಲಿ 120 ಕಿಮಿ ಟ್ರ್ಯಾಕ್ ವ್ಯಾಪ್ತಿಯಲ್ಲಿ ಪ್ರಸ್ತುತದಲ್ಲಿ 1x25 ಕೆವಿ ವಿದ್ಯುತ್ ಪೂರೈಕೆ ಆಗುತ್ತದೆ. ಈ ಯೋಜನೆ ಸಾಕಾರ ಬಳಿಕ 2x25 ಕೆವಿ ವಿದ್ಯತ್ ಪೂರೈಕೆ ಆಗುತ್ತದೆ. ಇದರಿಂದ ಸರಕು ಸೇವೆ ರೈಲು, ವೇಗದ ರೈಲುಗಳು ಕಾರ್ಯಾಚರಣೆ ನಿರಂತರವಾಗಿ ಹೆಚ್ಚಲಿದೆ. ತ್ವರಿತ ರೈಲ್ವೆ ಓಡಾಟ ಸಾಧ್ಯವಾಗುತ್ತದೆ ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+