Karnataka 1st PUC Result 2023 : ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ..ನೋಡುವುದು ಹೇಗೆ, ಇಲ್ಲಿದೆ ಮಾಹಿತಿ
ಬೆಂಗಳೂರು, ಮಾರ್ಚ್ 31: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಶುಕ್ರವಾರ ಪ್ರಥಮ ಪಿಯುಸಿ ಫಲಿತಾಂಶ 2023 ಪ್ರಕಟಿಸಿದೆ. 11 ನೇ ತರಗತಿಯ ವಾಣಿಜ್ಯ, ವಿಜ್ಞಾನ, ಕಲಾ ವಿಭಾಗದ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈಗ ತಮ್ಮ ಫಲಿತಾಂಗಳನ್ನು ತಿಳಿಯಬಹುದಾಗಿದೆ.
ವಿದ್ಯಾರ್ಥಿಗಳು ಪ್ರಥಮ ಪಿಯುಸಿ ಫಲಿತಾಂಶ 2023 ಕರ್ನಾಟಕವನ್ನು ಅಧಿಕೃತ ವೆಬ್‌ಸೈಟ್ result.dkpucpa.com ನಲ್ಲಿ ಪರಿಶೀಲಿಸಬಹುದು. ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶಗಳು 2023 ಅನ್ನು ಫಲಿತಾಂಶವನ್ನು ಡೌನ್‌ಲೋಡ್ ಮಾಡಲು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕು. ವಿದ್ಯಾರ್ಥಿಗಳು ಬೆಳಗ್ಗೆ 9.30ಕ್ಕೆ ತಮ್ಮ ಫಲಿತಾಂಶವನ್ನು ಈಗಾಗಲೇ ಪಡೆಯಬಹುದಾಗಿದೆ.

ಪ್ರಥಮ ಪಿಯುಸಿ ಫಲಿತಾಂಶಗಳು ವಿದ್ಯಾರ್ಥಿಗಳ ಹೆಸರು, ನೋಂದಣಿ ಸಂಖ್ಯೆ, ವಿಷಯದ ಹೆಸರು, ಹುಟ್ಟಿದ ದಿನಾಂಕ, ವಿಷಯವಾರು ಅಂಕಗಳು, ಒಟ್ಟು ಅಂಕಗಳು ಮತ್ತು ಅರ್ಹತಾ ಸ್ಥಿತಿಯ ವಿವರಗಳನ್ನು ಹೊಂದಿರುತ್ತದೆ.
ವಿದ್ಯಾರ್ಥಿಗಳು 31-03-2023 ರಂದು ಬೆಳಗ್ಗೆ 09:30ಕ್ಕೆ ತಮ್ಮ ಫಲಿತಾಂಶಗಳನ್ನು ತಿಳಿಯಬಹುದು ಎಂದು ಪ್ರಥಮ ಪಿಯುಸಿ ಕರ್ನಾಟಕ ಫಲಿತಾಂಶದ ವೆಬ್‌ಸೈಟ್ ತಿಳಿಸಿದೆ.

ಪ್ರಥಮ ಪಿಯುಸಿ ಫಲಿತಾಂಶ 2023 ಪರಿಶೀಲಿಸುವ ಹಂತಗಳು ಇಲ್ಲಿವೆ.
1. ಅಧಿಕೃತ ವೆಬ್‌ಸೈಟ್‌ಗೆ result.dkpucpa.com. ಭೇಟಿ ನೀಡಿ
2. ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಲಿಂಕ್‌ನಲ್ಲಿ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
3. ವಿವರಗಳನ್ನು ಸಲ್ಲಿಸಲು 'ಗೋ' ಬಟನ್ ಕ್ಲಿಕ್ ಮಾಡಿ.
4. ಕರ್ನಾಟಕ ಪ್ರಥಮ ಫಲಿತಾಂಶ 2023 ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
5. ವಿಷಯವಾರು ಅಂಕಗಳು ಮತ್ತು ಇತರ ವಿವರಗಳನ್ನು ಪರಿಶೀಲಿಸಿ.
6. ಬಳಿಕ ಪ್ರಿಂಟ್‌ಔಟ್ ತೆಗೆದುಕೊಳ್ಳಿ.












Click it and Unblock the Notifications