Kannadigas: ಐಎಫ್‌ಎಸ್ ಪರೀಕ್ಷೆಯಲ್ಲಿ ಕನ್ನಡಿಗರಾದ ಬಸವರಾಜ ಕೆಂಪವಾಡ - ದೀಕ್ಷಿತ್ ಎನ್ ಹೆಮ್ಮೆಯ ಸಾಧನೆ: ಡಿಕೆಶಿ ಹೇಳಿದ್ದೇನು

Kannadigas: ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಪರೀಕ್ಷೆಯಲ್ಲಿ ಕನ್ನಡಿಗ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸವಡಿ ಗ್ರಾಮದ ಬಸವರಾಜ ದರೆಪ್ಪ ಕೆಂಪವಾಡ ಅವರು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಪರೀಕ್ಷೆಯಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

ರೈತರ ಮಗನಾದ ಬಸವರಾಜ್ ಅವರು ತಮ್ಮ ಎರಡನೇ ಪ್ರಯತ್ನದಲ್ಲಿಯೇ ಈ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರ ಯಶಸ್ಸಿನ ಕಥೆ ರಾಜ್ಯಾದ್ಯಂತ ಅನೇಕ ಯುವಕರಿಗೆ, ವಿಶೇಷವಾಗಿ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಕೊಟ್ಟಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಹ ಮೆಚ್ಚುಗೆ ಸೂಚಿಸಿದ್ದಾರೆ.

Kannadigas

ಬಸವರಾಜ್ ಅವರು ಬೆಳಗಾವಿಯ ಅಥಣಿ ಪಟ್ಟಣದಲ್ಲಿ ಉನ್ನತ ವ್ಯಾಸಂಗ ಮಾಡುವ ಮೊದಲು ಸವಡಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದಾರೆ. ನಂತರ, ಅವರು ಶಿರಸಿಯ ಕಾಲೇಜಿನಿಂದ ಪದವಿ ಪಡೆದಿದ್ದು ಮತ್ತು ಯುಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಿ ನಡೆಸಲು ಬೆಂಗಳೂರಿಗೆ ಬಂದರು. ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳ ಹೊರತಾಗಿಯೂ ಅವರು ಮಾಡಿರುವ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Kannadigas: ಡಿ.ಕೆ ಶಿವಕುಮಾರ್ ಟ್ವೀಟ್

ಇನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬಸವರಾಜ್ ಕೆಂಪವಾಡ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸವದಿಯ ಬಸವರಾಜ್ ಕೆಂಪವಾಡ ಅವರಿಗೆ ಹಾಗೂ 14ನೇ ರ‍್ಯಾಂಕ್ ಪಡೆದ ದೀಕ್ಷಿತ್.ಎನ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

ಕೃಷಿ ಕುಟುಂಬದಲ್ಲಿ ಜನಿಸಿ ಇಡೀ ದೇಶವೇ ತಿರುಗಿ ನೋಡುವಂತಹ ಸಾಧನೆ ಮಾಡಿರುವ ಬಸವರಾಜ್ ಕೆಂಪವಾಡ ಅವರು ಯುವಜನತೆಗೆ ಮಾದರಿ. ಸತತ ಪ್ರಯತ್ನದಿಂದ ಗೆಲುವು ಖಚಿತ ಎಂಬುದಕ್ಕೆ ಬಸವರಾಜ್‌ ಹಾಗೂ ದೀಕ್ಷಿತ್‌ ಎನ್‌ ಅವರೇ ಸಾಕ್ಷಿ. ಮುಂದಿನ ದಿನಗಳಲ್ಲಿ ಅರಣ್ಯ ಹಾಗೂ ಪರಿಸರ ಸಂಪತ್ತನ್ನು ಉಳಿಸಲು ಉತ್ತಮವಾಗಿ ಕಾರ್ಯನಿರ್ವಹಿಸಿ ಹಾಗೂ ನಿಮ್ಮ ಸೇವೆಯಿಂದ ರಾಷ್ಟ್ರಕ್ಕೆ ಅಪಾರ ಕೊಡುಗೆ ದೊರಕಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ನಮ್ಮ ಹಳ್ಳಿಗಳು ಮತ್ತು ಸರ್ಕಾರಿ ಸಂಸ್ಥೆಗಳ ಯುವಕರು ತಮ್ಮ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ಉನ್ನತ ಸ್ಥಾನಕ್ಕೆ ಏರಿದಾಗ, ಅದು ಕರ್ನಾಟಕಕ್ಕೆ ಅಪಾರ ಭರವಸೆ ಮತ್ತು ಹೆಮ್ಮೆಯನ್ನು ನೀಡುತ್ತದೆ. ಭಾರತೀಯ ಅರಣ್ಯ ಸೇವಾ ಪರೀಕ್ಷೆ 2025 ರಲ್ಲಿ ಅಖಿಲ ಭಾರತ 1 ನೇ ರ್ಯಾಂಕ್ ಪಡೆದ ಬಸವರಾಜ ಕೆಂಪವಾಡ ಮತ್ತು ಅಖಿಲ ಭಾರತ 14 ನೇ ರ್ಯಾಂಕ್ ಪಡೆದ ದೀಕ್ಷಿತ್ ಎನ್ ಅವರಿಗೆ ಅಭಿನಂದನೆಗಳು.

DK Shivakumar: ಡಿ.ಕೆ ಶಿವಕುಮಾರ್‌ಗೆ ತೇಜಸ್ವಿ ಸೂರ್ಯ ಮೆಚ್ಚುಗೆ: ಕುಟುಂಬ ಸಂತೋಷಕ್ಕಿಂತ ಕರ್ತವ್ಯಕ್ಕೆ ಆದ್ಯತೆ ಅಂದಿದ್ಯಾಕೆ
DK Shivakumar: ಡಿ.ಕೆ ಶಿವಕುಮಾರ್‌ಗೆ ತೇಜಸ್ವಿ ಸೂರ್ಯ ಮೆಚ್ಚುಗೆ: ಕುಟುಂಬ ಸಂತೋಷಕ್ಕಿಂತ ಕರ್ತವ್ಯಕ್ಕೆ ಆದ್ಯತೆ ಅಂದಿದ್ಯಾಕೆ

ಇವರ ಸಾಧನೆಯು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಶಿರಸಿಯ ಅರಣ್ಯ ಕಾಲೇಜಿಗೆ ಹೆಮ್ಮೆಯ ಕ್ಷಣವಾಗಿದೆ. ಇದು ಪ್ರತಿಭಾನ್ವಿತ ಮತ್ತು ಬದ್ಧ ಯುವ ಮನಸ್ಸುಗಳನ್ನು ಪೋಷಿಸುವುದನ್ನು ಮುಂದುವರಿಸುವ ಸಂಸ್ಥೆಗಳಾಗಿವೆ. ಅವರಿಬ್ಬರೂ ತಮ್ಮ ಸೇವೆ ಮತ್ತು ರಾಷ್ಟ್ರಕ್ಕೆ ಬದ್ಧತೆಯ ಮೂಲಕ ಕರ್ನಾಟಕವನ್ನು ಹೆಮ್ಮೆಪಡುವಂತೆ ಮಾಡುವುದನ್ನು ಮುಂದುವರಿಸಲಿ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+