ಕಲಬುರಗಿ: ನಾಲ್ವರು ಅತ್ಯಾಚಾರಿ ಬಾಲಕರ ಬಂಧನ

ಕಲಬುರಗಿ, ಡಿ. 21: ಚಿಂಚೋಳಿ ತಾಲೂಕಿನ ಚಿಂದಿ ತಾಂಡಾದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ತಲೆಮರೆಸಿಕೊಂಡಿದ್ದ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಒಬ್ಬ ಬಾಲಕ ಸಂತ್ರಸ್ತ ಬಾಲಕಿಯ ಹತ್ತಿರದ ಸಂಬಂಧಿಯಾಗಿದ್ದಾನೆ. ಉಳಿದ ಮೂವರು ಬೇರೆ ಹಳ್ಳಿಯವರಾಗಿದ್ದು ರೇಪ್ ಮಾಡಿ ಪರಾರಿಯಾಗಿದ್ದರು. ಡಿಸೆಂಬರ್ 19 ರಂದು ಶಾಲೆಯಿಂದ ಹಿಂದಿರುಗುತ್ತಿದ್ದ ಬಾಲಕಿಯ ಮೇಲೆ ಮೂರು ಜನ 6 ನೇ ತರಗತಿ ವಿದ್ಯಾರ್ಥಿಗಳು ಹಾಗೂ ಒಬ್ಬ 8ನೇ ತರಗತಿ ವಿದ್ಯಾರ್ಥಿ ಸೇರಿ ಅತ್ಯಾಚಾರ ಎಸಗಿದ್ದರು.[ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಬಾಲಕರು]

arrrest

ಬಾಲಕಿ ಮನೆಗೆ ಮರಳಿದ ನಂತರ ಅಜ್ಜಿಗೆ ಸಂಗತಿ ಮೊದಲು ಗೊತ್ತಾಗಿದೆ. ಆಕೆ ಬಾಲಕಿಯ ಪಾಲಕರನ್ನು ಕರೆಸಿ ವಿಷಯ ತಿಳಿಸಿದ್ದಾಳೆ. ತಕ್ಷಣ ಕುಟುಂಬದವರೆಲ್ಲ ಸೇರಿ ಕಾಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.[ಕಲಬುರಗಿ : ಕಾಂಗ್ರೆಸ್ ಮುಖಂಡ ಗುಂಡಿಗೆ ಬಲಿ]

ಪ್ರಕರಣದ ಬೆನ್ನುಬಿದ್ದ ಪೊಲೀಸರು ತಲೆಮರೆಸಿಕೊಂಡಿದ್ದ ಬಾಲಕರನ್ನು ಭಾನುವಾರ ಮುಂಜಾನೆ ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+