ಎಂಕೆ ಗಣಪತಿ ಪ್ರಕರಣ: ನ್ಯಾಯಾಂಗ ವರದಿಗೆ ಬೆಲೆ ಇಲ್ಲ!
ಬೆಂಗಳೂರು, ಫೆಬ್ರವರಿ 27: ಡಿವೈಎಸ್ಪಿ ಎಂ.ಕೆ ಗಣಪತಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೇಮಿಸಿದ್ದ ನ್ಯಾಯಾಂಗ ಆಯೋಗವು ಕೊನೆಗೂ ತನ್ನ ವರದಿಯನ್ನು ಸಲ್ಲಿಸಿದೆ. ಸಿಐಡಿ ವರದಿಯಂತೆ ಈ ವರದಿ ಪ್ರಕಾರವು ಎಂಕೆ ಗಣಪತಿ ಸಾವಿಗೆ ಮಾನಸಿಕ ಒತ್ತಡವೇ ಕಾರಣ ಎಂದು ಷರಾ ಹಾಕಲಾಗಿದೆ.
ಈ ನಡುವೆ 2017ರ ಅಕ್ಟೋಬರ್ ನಲ್ಲಿ ಸಚಿವ ಕೆಜೆ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಸಿಬಿಐ ನಂತರ ತನಿಖೆಗೆ ಕಾಲಾವಕಾಶ ಕೋರಿತ್ತು. ಆದರೆ, ಇನ್ನೂ ತನ್ನ ತನಿಖಾ ವರದಿಯನ್ನು ಸಲ್ಲಿಸಬೇಕಿದೆ. ಹೀಗಾಗಿ, ನ್ಯಾಯಾಂಗ ಆಯೋಗದ ವರದಿ ಯಾವುದೇ ಬೆಲೆ ಇಲ್ಲ.
ನ್ಯಾಯಾಂಗ ಆಯೋಗದ ವರದಿ ಯಾರ ಕೈಸೇರಿದೆ: ನಿವೃತ್ತ ನ್ಯಾಯಾಧೀಶ ಕೆ.ಎನ್ ಕೇಶವನಾರಾಯಣ ಅವರ ನೇತೃತ್ವದ ನ್ಯಾಯಾಂಗ ಆಯೋಗವು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ತನ್ನ ವರದಿಯನ್ನು ಸಲ್ಲಿಸಿದೆ.
ಸುಮಾರು ಒಂದೂವರೆ ವರ್ಷಗಳ ತನಿಖೆ, ವಿಚಾರಣೆ ಬಳಿಕ ತನ್ನ ವರದಿಯನ್ನು ಸಲ್ಲಿಸಿದೆ. ಸದ್ಯ ವರದಿಯನ್ನು ಪರಿಶೀಲಿಸಲು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಶ್ ಚಂದ್ರ ಅವರಿಗೆ ಹಸ್ತಾಂತರಿಸಲಾಗಿದೆ.

ನ್ಯಾಯಾಂಗ ಆಯೋಗದ ವರದಿಯಲ್ಲೇನಿದೆ
ಎಂಕೆ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ವ್ಯಕ್ತಿಯ ಕೈವಾಡ ಕಂಡು ಬಂದಿಲ್ಲ. ಮಾನಸಿಕ ಒತ್ತಡವೇ ಗಣಪತಿ ಅವರ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ಇದಲ್ಲದೆ, ಪ್ರಮುಖ ಆರೋಪಿಗಳಾದ ಅಂದಿನ ಗೃಹ ಸಚಿವ ಕೆಜೆ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಎ.ಎಂ ಪ್ರಸಾದ್, ಪ್ರಣವ್ ಮೊಹಾಂತಿ ಅವರನ್ನು ನ್ಯಾಯಾಂಗ ಆಯೋಗ ವಿಚಾರಣೆಗೊಳಪಡಿಸಿಲ್ಲ.

ವಿಚಾರಣೆ ನಡೆಸಿದ್ದು ಹೇಗೆ?
ಸುಮಾರು ಒಂದೂವರೆ ವರ್ಷಗಳ ಕಾಲ ತನಿಖೆ ನಡೆಸಿದ ಆಯೋಗವು ಸುಮಾರು 50 ಸಾಕ್ಷ್ಯಗಳ ವಿಚಾರಣೆ ನಡೆಸಿ, ಸತ್ಯ ಶೋಧನಾ ಸಮಿತಿ ಮಾದರಿಯ ವರದಿಯನ್ನು ತಯಾರಿಸಿ, 320ಪುಟಗಳ ವರದಿ ಇದಾಗಿದೆ. ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿಗಳ ಪರಿಶೀಲನೆ ನಂತರ ವರದಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ, ಮುಂದಿನ ತೀರ್ಮಾನವನ್ನು ಕರ್ನಾಟಕ ಸರ್ಕಾರ ಕೈಗೊಳ್ಳಬೇಕಾಗುತ್ತದೆ.

ಎಂಕೆ ಗಣಪತಿ ಆತ್ಮಹತ್ಯೆ
ಕೊಡಗಿನ ಮಡಿಕೇರಿಯ ಲಾಡ್ಜ್ ವೊಂದರಲ್ಲಿ ಮಂಗಳೂರಿನ ಡಿವೈಎಸ್ಪಿಯಾಗಿದ್ದ ಎಂ.ಕೆ ಗಣಪತಿ ಅವರು ಜುಲೈ 7, 2016ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಂದರ್ಭದಲ್ಲಿ ಅವರು ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿದ್ದರು. ಸಾಯುವುದಕ್ಕೂ ಮೊದಲು ನೀಡಿದ್ದ ಸಂದರ್ಶನದಲ್ಲಿ ಗಣಪತಿ ತಮ್ಮ ಸಾವಿಗೆ ಕೆ.ಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ, ಎ.ಎಂ ಪ್ರಸಾದ್ ಕಾರಣ ಎಂದು ಹೇಳಿದ್ದರು.

ತನಿಖೆ ಎತ್ತ ಸಾಗಿದೆ?
ವಿಡಿಯೋ ಸಾಕ್ಷ್ಯದ ಮೇಲೆ ಆರಂಭವಾದ ಪೊಲೀಸರ ತನಿಖೆ ನಂತರ ಸಿಐಡಿ ಪಾಲಾಯಿತು. ಸಿಐಡಿ ತನಿಖೆ ನಡೆಸಿ, ಕೆಜೆ ಜಾರ್ಜ್ ಸೇರಿದಂತೆ ಮೂವರಿಗೂ ಕ್ಲೀನ್ ಚಿಟ್ ನೀಡಿ, ಕೋರ್ಟಿಗೆ ಬಿ ರಿಪೋರ್ಟ್ ಸಲ್ಲಿಸಿತು. ರಾಜೀನಾಮೆ ನೀಡಿದ್ದ ಜಾರ್ಜ್ ಮತ್ತೆ ಸಂಪುಟ ಸೇರಿದರು. ಗಣಪತಿ ಕುಟುಂಬದವರ ಅರ್ಜಿ ಪುರಸ್ಕರಿಸಿದ ಸುಪ್ರೀಂಕೋರ್ಟ್, ಪ್ರಕರಣವನ್ನು ಸಿಬಿಐಗೆ ವಹಿಸಿದ್ದು, ತನಿಖೆ ನಿಧಾನಗತಿಯಿಂದ ಸಾಗಿದೆ. ಸಿಬಿಐ ವರದಿ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications