Jowar Price Today: ರಾಜ್ಯದ ಮಾರುಕಟ್ಟೆಗಳಲ್ಲಿ ಇಂದು 'ಜೋಳ'ದ ಬೆಳೆ ಎಷ್ಟಿದೆ! ದರ ಪಟ್ಟಿ ಇಲ್ಲಿದೆ

ಬೆಂಗಳೂರು, ಅಕ್ಟೋಬರ್ 02: ಕರ್ನಾಟಕದ ರೈತರು ಕಳೆದ ವರ್ಷ ಮುಂಗಾರು ಬೆಳೆದು ಕಳೆದುಕೊಂಡಾಗ ಹಿಂಗಾರು (ರಾಬಿ) ಬೆಳೆಯಾದ 'ಜೋಳ'ದ (Jowar Rate) ಮೇಲೆ ಭಾರೀ ಭರವಸೆ ಇಟ್ಟುಕೊಂಡಿದ್ದರು. ಮಾರುಕಟ್ಟೆಯಲ್ಲಿ ಜೋಳಕ್ಕೆ ಐತಿಹಾಸಿಕ ಬೆಲೆ ಸಿಗಲಿದೆ ಎನ್ನುಷ್ಟರಲ್ಲಿ ದರ ಕುಸಿದಿತ್ತು. ಇದೀಗ ಮುಂಗಾರು ಅಂತ್ಯಗೊಂಡಿದ್ದು, ಹಿಂಗಾರು ಬೆಳೆ ಬೆಳೆಯಲು ರೈತರು ಸಜ್ಜಾಗುತ್ತಿದ್ದಾರೆ. ಈ ವೇಳೆ ಜೋಳದ ಮಾರುಕಟ್ಟೆ ದರ ಎಷ್ಟಿದೆ ಎಂಬ ಮಾಹಿತಿ, ಪಟ್ಟಿ ಇಲ್ಲಿದೆ ನೋಡಿ.

ಮುಂಗಾರು ಮಳೆಗೆ ಬೆಳೆಯುವ ಬೆಳೆಯನ್ನು ಖಾರೀಫ್ ಎಂದು, ಹಿಂಗಾರು ಆರಂಭವಾದ ತಿಂಗಳಾಂತ್ಯದಿಂದ ಚಳಿಗಾಲದಲ್ಲಿ ಬೆಳೆಯುವ ಬೆಳೆಯನ್ನು ರಾಬಿ ಎಂದು ಕರೆಯುತ್ತಾರೆ. ಸದ್ಯ ಹಿಂಗಾರು ಆರಂಭವಾಗಿದೆ. ವರ್ಷ ಮೊದಲ ಬೆಳೆ ತೆಗೆದ ರೈತರು ಹಿಂಗಾರು ಬಿತ್ತನೆಗೆ ಸಜ್ಜಾಗಿದ್ದಾರೆ. ಇದರಲ್ಲಿ ಜೋಳ ಹೆಚ್ಚು ಬಿತ್ತನೆ ಆಗುವ ನಿರೀಕ್ಷೆ ಈ ವರ್ಷವು ದಟ್ಟವಾಗಿದೆ.

Jowar Price on October 2nd in Karnataka Markets Know Rate list here

ರಾಜ್ಯದ ಉತ್ತರ ಕರ್ನಾಟಕದ ಭಾಗಗಳಲ್ಲಿ ಈ ಜೋಳವನ್ನು ಹೆಚ್ಚು ಬಿತ್ತನೆ ಮಾಡುತ್ತಾರೆ. ದಾವಣಗೆರೆ, ಹಾವೇರಿ, ಧಾರವಾಡ, ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೋಳ ಹೆಚ್ಚಾಗಿ ಬೆಳೆಯುತ್ತಾರೆ. ಅಲ್ಲಿಂದಲೇ ಇಡೀ ರಾಜ್ಯದ ಮಾರುಕಟ್ಟೆಗಳಿಗೆ, ಪೂರೈಕೆ ಆಗುತ್ತವೆ.

ಕರ್ನಾಟಕ ವಿವಿಧ ಮಾರುಕಟ್ಟೆಗಳಲ್ಲಿ ಜೋಳದ ಬೆಳೆ ಎಷ್ಟಿದೆ? ವಿವರ

* ಬಳ್ಳಾರಿ ಜಿಲ್ಲೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಜೋಳಕ್ಕೆ ರೂ. 1819 ನಿಂದ 2387 ರೂಪಾಯಿ (ಸರಾಸರಿ ಬೆಲೆ 2246 ರೂ)

* ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಜೋಳದ ಬೆಲೆ ರೂ. 2589 ಇದೆ (ಸರಾಸರಿ ದರ 2589 ರೂಪಾಯಿ)

* ಗದಗ ನಗರ ಮಾರುಕಟ್ಟೆಯಲ್ಲಿ ಜೋಳದ ದರ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ ರೂ. 1001 ರಿಂದ 2417 ರೂಪಾಯಿ (ಸರಾಸರಿ ಬೆಲೆ 1841 ರೂಪಾಯಿ)

* ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಪ್ರತಿ ಕ್ವಿಂಟಾಲ್ ಜೋಳದ ದರ ರೂ.1510 ರಿಂದ 2830 ರೂಪಾಯಿ (ಸರಾಸರಿ ಬೆಲೆ ರೂ. 1883)

* ಬೀದರ್ ಬಸವ ಕಲ್ಯಾಣದ ಮಾರುಕಟ್ಟೆಯಲ್ಲಿ ಜೋಳ ಕ್ವಿಂಟಾಲ್ ದರ ರೂ. 2100 ರಿಂದ 2400 ರೂ. ಇದೆ (ಸರಾಸರಿ 2250 ರೂ.)

* ಕಲಬುರಗಿ ನಗರ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಜೋಳದ ಬೆಲೆ 2100 ರೂ.ನಿಂದ 3500 ರೂಪಾಯಿ (ಸರಾಸರಿ ದರ 2800).

* ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಜೋಳದ ಬೆಲೆ ಕ್ವಿಂಟಾಲ್‌ಗೆ 1700 ರೂ.ನಿಂದ 2200 ರೂಪಾಯಿ (ಸರಾಸರಿ 2000).

* ಬಾಗಲಕೋಟೆಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಜೋಳದ ಬೆಲೆ ಕನಿಷ್ಠ ಮತ್ತು ಗರಿಷ್ಠ 1900 ರೂಪಾಯಿ (ಸರಾಸರಿ 1900 ರೂಪಾಯಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+