Job Fair: ಜೂನ್ 15 ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ
ಬೆಂಗಳೂರು, ಜೂನ್ 12: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜೂನ್ 15 ರಂದು ಉದ್ಯೋಗ ಮೇಳ ನಡೆಯಲಿದ್ದು, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಮತ್ತು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ವತಿಯಿಂದ ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ.
ಕೆಎಸ್ಡಿಸಿ ಕಛೇರಿಯ ಕಲ್ಯಾಣ ಸುರಕ್ಷಾ ಭವನ, 4ನೇ ಮಹಡಿ, ಡೈರಿ ಸರ್ಕಲ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-29 ಬೆಳಗ್ಗೆ 09.30 ರಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇನ್ನೂ ಉದ್ಯೋಗ ಮೇಳೆದಲ್ಲಿ ಹಲವು ಹುದ್ದೆಗಳಾದ ಸ್ಟೀವರ್ಡ್, ಕ್ಯಾಪ್ಟನ್, ಅಡುಗೆ ಸಹಾಯಕ, ಮಾಣಿ, ಮೇಲ್ವಿಚಾರಕ, ಬಾಣಸಿಗ ಸೇರಿದಂತೆ ಇತರೆ ವಿಭಾಗಗಳಲ್ಲಿ ಕೆಲಸ ನಿರ್ವಹಿಸಲು ಉದ್ಯೋಗಾವಕಾಶವಿದೆ.

ಇನ್ನೂ ಬೆಂಗಳೂರಿನಲ್ಲಿ ಕೆಲಸ ಮಾಡಲು ಸಿದ್ದರಿರುವ 10ನೇ ತರಗತಿ, ಪಿಯುಸಿ, ಡಿಪ್ಲೊಮಾದಲ್ಲಿ ಪಾಸ್ ಅಥವಾ ಅನುತ್ತೀರ್ಣ ಮತ್ತು ಆಸಕ್ತರು ಯಾರೂಬೇಕಾದರು ಭಾಗವಹಿಸಬಹುದಾಗಿದೆ. ಇಎಸ್ಐ, ಪಿಎಫ್ ಒದಗಿಸುವುದರೊಂದಿಗೆ 13000 ರೂ. ದಿಂದ 16000 ರೂ. ಸಂಬಳ ನೀಡಲಾಗುತ್ತಿದೆ.
ಇನ್ನೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಹೇಗೆ? ಎಂದರೇ. ಆಸಕ್ತರು ನಿಮಗದ ಜಾಲತಾಣಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು ಅಥವಾ ಜೂನ್ 15ರಂದು ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಉದ್ಯೋಗ ಮೇಳ ನಡೆಯುವ ಸ್ಥಳಕ್ಕೆ ನೇರವಾಗಿ ಭಾಗವಹಿಸುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಯಾಗಿ 9019485688, 08182-255294ಗೆ ಸಂಪರ್ಕಿಸಬಹುದಾಗಿದೆ.












Click it and Unblock the Notifications