ಮೇಲ್ಮನೆಯ ಉಪ–ಸಭಾಪತಿಯಾಗಿ ಮರಿತಿಬ್ಬೇಗೌಡ

ಬೆಂಗಳೂರು, ಆಗಸ್ಟ್ 02: ರಾಜ್ಯ ವಿಧಾನ ಪರಿಷತ್ತಿನ ನೂತನ ಉಪಸಭಾಪತಿಯಾಗಿ ಜಾತ್ಯಾತೀತ ಜನತಾದಳದ ಮರಿತಿಬ್ಬೇಗೌಡ ಅವರು ಆಯ್ಕೆಯಾಗಿದ್ದಾರೆ.

ಮೇಲ್ಮನೆಯ ಉಪ-ಸಭಾಪತಿ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಮರಿತಿಬ್ಬೇಗೌಡ ಅವರು ಕಾಂಗ್ರೆಸ್ಸಿನ ತಮ್ಮ ಪ್ರತಿಸ್ಪರ್ಧಿ ಧರ್ಮಸೇನಾ ಅವರ ವಿರುದ್ಧ 13 ಮತಗಳ ಅಂತರದಲ್ಲಿ ಜಯಗಳಿಸಿದರು. ಜಾತ್ಯಾತೀತ ಜನತಾದಳದ ಮರಿತಿಬ್ಬೇಗೌಡ ಅವರಿಗೆ 42 ಮತಗಳು ಹಾಗೂ ಕಾಂಗ್ರೆಸ್ಸಿನ ಧರ್ಮಸೇನಾ ಅವರಿಗೆ 29 ಮತಗಳು ಲಭಿಸಿತ್ತು.

JDS mariitibbe Gowda Legislative Council Deputy Chairman

'ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸಲು ಉಪ ಸಭಾಪತಿ ಸ್ಥಾನವು ಯಾವುದೇ ರೀತಿ ಅಡ್ಡಿಯಾಗದು. ಬದಲಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವೆ. ನನ್ನನ್ನು ಆಯ್ಕೆ ಮಾಡಿದ ಜೆಡಿಎಸ್ ಮತ್ತು ಬಿಜೆಪಿಯ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುವೆ' ಎಂದು ಉಪ ಸಭಾಪತಿ ಮರಿತಿಬ್ಬೇಗೌಡ ಪ್ರತಿಕ್ರಿಯಿಸಿದ್ದಾರೆ.

ನಿರೀಕ್ಷೆಯಂತೆ ಆಯ್ಕೆ: ಚುನಾವಣೆ ಹಿನ್ನೆಲೆಯಲ್ಲಿ ವಿಪ್ ಜಾರಿ ಮಾಡಿದ್ದರೂ, ಕಾಂಗ್ರೆಸ್ಸಿನ ಸದಸ್ಯರಾದ ಕೆ.ಗೋವಿಂದರಾಜು, ಎಂ.ಆರ್. ಸೀತಾರಾಂ ಸದನಕ್ಕೆ ಗೈರು ಹಾಜರಾಗಿದ್ದರು. ಆಂತರಿಕ ಒಪ್ಪಂದದ ಹಿನ್ನೆಲೆಯಲ್ಲಿ ಮೇಲ್ಮನೆ ಉಪ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಸ್ಥಾನವನ್ನು ಸಹೋದ್ಯೋಗಿ ಮರಿತಿಬ್ಬೇಗೌಡ ಅವರಿಗೆ ಬಿಟ್ಟುಕೊಟ್ಟಿದ್ದರು.

ಉಪ ಸಭಾಪತಿ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡರನ್ನು ಜೆಡಿಎಸ್ ಕಣಕ್ಕಿಳಿಸಿತ್ತು. ಬಿಜೆಪಿ ಕೂಡ ಇದಕ್ಕೆ ಬೆಂಬಲ ಪ್ರಕಟಿಸಿತ್ತು.
ಮೇಲ್ಮನೆಯಲ್ಲಿ ಬಿಜೆಪಿ-30, ಕಾಂಗ್ರೆಸ್-28, ಜೆಡಿಎಸ್-12, ಪಕ್ಷೇತರ-4 ಹಾಗೂ ಸಭಾಪತಿಯ ಸ್ಥಾನವೂ ಸೇರಿ 75 ಸಂಖ್ಯಾಬಲವಿದೆ.

ಸದನದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಗ್ಗೂಡಿದ ಪರಿಣಾಮ ಸಭಾಪತಿ ಮತ್ತು ಉಪ ಸಭಾಪತಿ ಸ್ಥಾನವನ್ನು ಕ್ರಮವಾಗಿ ಬಿಜೆಪಿ ಮತ್ತು ಜೆಡಿಎಸ್ ಹಂಚಿಕೊಂಡಂತಾಗಿದೆ. ಮೇಲ್ಮನೆ ನೂತನ ಉಪ ಸಭಾಪತಿಯಾಗಿ ಆಯ್ಕೆಯಾದ ಮರಿತಿಬ್ಬೇಗೌಡ ಅವರನ್ನು ಸಭಾಪತಿ ಡಿ.ಎಚ್.ಶಂಕರಮೂರ್ತಿ, ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಸಭಾ ನಾಯಕ ಎಸ್.ಆರ್. ಪಾಟೀಲ್, ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಸೇರಿ ಹಲವು ಸದಸ್ಯರು ಅಭಿನಂದಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+