ಜೆಡಿಎಸ್ ನಾಯಕ ಫಾರೂಕ್ ಮನೆ ಮೇಲೆ ಐಟಿ ದಾಳಿ

ಇತ್ತೀಚೆಗೆ ಕಾಂಗ್ರೆಸ್ ನಾಯಕರ ಮನೆಯ ಮೇಲೆ ದಾಳಿಗಳಾಗಿದ್ದು, ಇದೀಗ ಜೆಡಿಎಸ್ ನಾಯಕರೊಬ್ಬರ ಮನೆ ಮೇಲೂ ಐಟಿ ರೈಡ್ ಆಗಿರುವುದು ರಾಜಕೀಯ ವಲಯದಲ್ಲಿ ಸದ್ದು ಮಾಡಿದೆ.

ಬೆಂಗಳೂರು, ಫೆಬ್ರವರಿ 23: ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ಮನೆಗಳ ಮೇಲೆ ಕೆಲ ದಿನಗಳಿಂದ ನಡೆಯುತ್ತಿರುವ ಆದಾಯ ತೆರಿಗೆ ಇಲಾಖೆಯ ದಾಳಿಗಳು ಮುಂದುವರಿದಿದ್ದು, ಗುರುವಾರ (ಫೆ. 23) ಜೆಡಿಎಸ್ ನಾಯಕ ಹಾಗೂ ಉದ್ಯಮಿ ಬಿ.ಎಂ. ಫಾರೂಕ್ ಅವರಿಗೆ ಸೇರಿದ ಮನೆಗಳ ಮೇಲೆ ಇಲಾಖಾ ಅಧಿಕಾರಿಗಳು ರೈಡ್ ಮಾಡಿದ್ದಾರೆ.

ತೆರಿಗೆ ಇಲಾಖೆಯ ಸುಮಾರು 50 ಅಧಿಕಾರಿಗಳು ಫಾರೂಕ್ ಅವರಿಗೆ ಸೇರಿದ ಮಂಗಳೂರು ಹಾಗೂ ಬೆಂಗಳೂರು ನಗರಗಳಲ್ಲಿರುವ ಅವರ ಮನೆಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

JDS leader Farook's residences, offices raided by IT

ದಾಳಿ ವೇಳೆ, ಮೊಯಿದ್ದೀನ್ ಅವರಿಗೆ ಸೇರಿದ 737 ಕೋಟಿ ಮೊತ್ತದ ಚರಾಸ್ಥಿ ಹಾಗೂ 544.67 ಕೋಟಿ ಮೊತ್ತದ ಸ್ಥಿರಾಸ್ಥಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾರು ಫಾರುಕ್?
ಜೆಡಿಎಸ್ ನಾಯಕರಾದ ಫಾರೂಕ್, ಕಳೆದ ವರ್ಷ ನಡೆದಿದ್ದ ರಾಜ್ಯಸಭಾ ಚುನಾವಣೆ ವೇಳೆ ಜೆಡಿಎಸ್ ನಿಂದ ನಾಮಾಂಕಿತಗೊಂಡಿದ್ದರು. ಅವರು, ಕಾಂಗ್ರೆಸ್ ನ ಶಾಸಕರಾದ ಮೊಯಿದ್ದೀನ್ ಬಾವಾ ಅವರ ಸಂಬಂಧಿಯೂ ಹೌದು.

ರಾಜ್ಯದಿಂದ ಐದು ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಅವರು ಜೆಡಿಎಸ್ ಪರವಾಗಿ ಸ್ಪರ್ಧಿಸಿದ್ದರು. ಆದರೆ, ಆ ಸಂದರ್ಭದಲ್ಲಿ ತಮ್ಮ ಅಭ್ಯರ್ಥಿಗಳಿಗೆ ಬೇಕಾದ ಮತಗಳಿಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಲಂಚ ಪಡೆದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಫಾರೂಕ್ ಅವರು ಚುನಾವಣಾ ಕಣದಿಂದ ಹಿಂದೆ ಸರಿಯಬೇಕಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+