Get Updates
Get notified of breaking news, exclusive insights, and must-see stories!

ರಾಷ್ಟ್ರೀಯ ಜಾನಪದ-ಸಾಂಸ್ಕೃತಿಕ ಕೇಂದ್ರವಾಗಿ ಜಾನಪದ ಲೋಕ

ಬೆಂಗಳೂರು, ಮಾರ್ಚ್ 01: ರಾಮನಗರದಲ್ಲಿರುವ ಜಾನಪದ ಲೋಕವನ್ನು‌ ರಾಷ್ಟ್ರೀಯ ಜಾನಪದ ಮತ್ತು‌ ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು 10 ಕೋಟಿ ರೂಗಳ‌ ಅನುದಾನವನ್ನು‌ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ‌ ಘೋಷಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ‌ ಟಿ.ತಿಮ್ಮೇಗೌಡ ಅವರ‌ ನೇತೃತ್ವದ ನಿಯೋಗ ಈ ಮನವಿ ಸಲ್ಲಿಸಿತು.

ಜಾನಪದ ಲೋಕ ರಾಷ್ಟ್ರಮಟ್ಟದ ಕೇಂದ್ರವಾಗಿ ರೂಪುಗೊಳ್ಳಬೇಕು. ರಾಜಸ್ಥಾನದ ಚೌಕಿದಾನಿ ಮಾದರಿಯಲ್ಲಿ‌ಅಭಿವೃದ್ಧಿಪಡಿಸಬೇಕು. ಜೊತೆಗೆ ಜಾನಪದ ಲೋಕದಲ್ಲಿ ಬುಡಕಟ್ಟು ಜನಾಂಗದ‌ ಕುಟೀರಗಳ ನಿರ್ಮಾಣ,"ಧ್ವನಿ ಬೆಳಕಿನ ಜಾನಪದ ಕಾರ್ಯಕ್ರಮ ವ್ಯವಸ್ಥೆ,ಮ್ಯೂಸಿಯಂಗಳನ್ಮು‌ ರಾಷ್ಟ್ರ ಮಟ್ಟದ ಮ್ಯೂಸಿಯಂಗಳ ಮಾದರಿಯಲ್ಲಿ ಉನ್ನತ ದರ್ಜೆಗೇರಿಸುವುದು,ಜಿಲ್ಲಾ ಘಟಕಗಳ ಕಾರ್ಯಕ್ರಮಗಳಿಗೆ ಇನ್ನಷ್ಟು ಪ್ರೋತ್ಸಾಹ ಸೇರಿದಂತೆ ಅಭಿವೃದ್ಧಿ ಯೋಜನೆಗಳ ರೂಪು ರೇಷೆಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಿ ಮುಂಬರುವ ಆಯವ್ಯಯದಲ್ಲಿ ಘೋಷಿಸುವಂತೆ ಒತ್ತಾಯಿಸಲಾಯಿತು. ಕರ್ನಾಟಕ ಜಾನಪದ ಪರಿಷತ್ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಮತ್ತಿತರರು ನಿಯೋಗದಲ್ಲಿದ್ದರು.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಮನಗರದಿಂದ 4 ಕಿ.ಮೀ. ದೂರದಲ್ಲಿ ಜಾನಪದ ಲೋಕ ಸಿಗುತ್ತದೆ. ಆಕರ್ಷಕ ಹೆಬ್ಬಾಗಿಲುಳ್ಳ ಜಾನಪದ ಲೋಕ ನಿವೃತ್ತ ಐ.ಎ.ಎಸ್. ಅಧಿಕಾರಿ ಸಾಹಿತಿ ಜಾನಪದ ಬ್ರಹ್ಮ ದಿ.ಎಸ್.ಎಲ್. ನಾಗೇಗೌಡರ ಕನಸಿನ ಸಾಕಾರ ರೂಪ. ಹದಿನೈದು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಜಾನಪದ ಲೋಕದಲ್ಲಿ ವಿಹರಿಸುವುದೇನೆಂದರೆ ಕರ್ನಾಟಕದ ಗ್ರಾಮೀಣ ಸಂಸ್ಕೃತಿ ಆಳ-ಹರಹುಗಳ ವಿಸ್ಮಯ ಜಗತ್ತನ್ನು ಹೊಕ್ಕಂತೆ ಭಾಸವಾಗುತ್ತದೆ.

Janapada Loka as National Cultural centre grant requested to Yediyurappa

ಸುಮಾರು 1500 ಜನಗಳು ಕೂರಬಹುದಾದ ವಿಶಾಲ ಬಯಲು ರಂಗಮಂದಿರವಿದೆ. ಗ್ರೀಸ್‍ನ ಎಪಿಕ್ ರಂಗಮಂದಿರದ ಮಾದರಿಯಲ್ಲಿ ನಿರ್ಮಿಸಿರುವ ಇಲ್ಲಿ ವರ್ಷವಿಡಿ ಅನೇಕ ಸಾಹಿತ್ಯಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಜಾನಪದ ಕಲೆಗಳಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರ ಹಾಗೂ ಇನ್ನಿತರ ದೃಶ್ಯ ಪ್ರದರ್ಶನಗಳಿಗಾಗಿ ವಿಡಿಯೋ ಸ್ಕೋಪ್‍ನ ಪ್ರತ್ಯೇಕ ಸಭಾಂಗಣ ಇದೆ. ಲೋಕಮಾತಾ ಮಂದಿರದ ಸಮೀಪದಲ್ಲೇ ಚಿತ್ರಕುಟೀರವಿದೆ.

Janapada Loka as National Cultural centre grant requested to Yediyurappa

ಲೋಕಮಂದಿರದಲ್ಲಿ ಗ್ರಾಮೀಣ ಕಲೆಗಳ ಮತ್ತು ಕಲಾ ಪ್ರದರ್ಶನಕ್ಕಾಗಿ ಬಳಸುವ ವಾದ್ಯಗಳು ಹಾಗೂ ಹಳ್ಳಿಗರು ಬಳಸುವ ಸರಕು ಸಾಧನಗಳು, ತೊಗಲು ಗೊಂಬೆ, ಯಕ್ಷಗಾನ ಬಯಲಾಟದ ವಿವಿಧ ಗೊಂಬೆಗಳು, ನಾಣ್ಯಗಳು, ಅಳತೆ ಮಾಪಕಗಳು ಇತ್ಯಾದಿಗಳ ಸಂಗ್ರಹವಿದೆ. ಅಯ್ಯಂಗಾರರ ಮಾಳ, ಶಿಲ್ಪ ಮಾಳ, ಕುಂಬಾರಿಕೆ ಹಾಗೂ ಗೊಂಬೆ ತಯಾರಿಕೆಯು ಇಲ್ಲಿನ ಇತರೆ ಆಕರ್ಷಣಿಗಳು. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ರೆಸ್ಟೋರೆಂಟ್ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+