ಅಂಗವಿಕಲತೆ ಪ್ರಮಾಣ ಪತ್ರ ನೀಡಲು ಹೊಸ ಮಾನದಂಡ, ತಿಳಿಯಿರಿ

ಬೆಂಗಳೂರು, ನವೆಂಬರ್ 30; ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಅಂಗವಿಕಲತೆಯ ಬಗ್ಗೆ ವೈದಕೀಯ ಪ್ರಮಾಣ ಪತವನ್ನು ನೀಡುವಾಗ ಅನುಸರಿಸಬೇಕಾದ ಮಾನದಂಡಗಳ ಕುರಿತು ಹೊಸ ಸುತ್ತೋಲೆ ಹೊರಡಿಸಿದೆ.

ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು. ಬೆಂಗಳೂರು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಉಚ್ಚ ನ್ಯಾಯಾಲಯದ ಆದೇಶ ದಿನಾಂಕ 22/9/2022 ಉಲ್ಲೇಖ ಮಾಡಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ.

Issuing Physically Challenged Certificate New Circular

ಸುತ್ತೋಲೆಯ ವಿವರಗಳು; ವೈದ್ಯಕೀಯ ಪ್ರಮಾಣ ನೀಡುವಾಗ ತಿದ್ದಿ ಬರೆಯುವುದು, ಓದಲು ಸಾಧ್ಯವಾಗದಂತೆ ಬರೆಯುವುದು ಮತ್ತು ಪ್ರಮಾಣ ಪತ್ರದಲ್ಲಿ ನಮೂದಿಸಿದ ಅಂಗವಿಕಲತೆ Calculation Shrrt ಲಗತ್ತಿಸದೆ ಇರುವುದು ಕಂಡು ಬಂದಿರುತ್ತದೆ.

ಇಂತಹ ಸಂದರ್ಭಗಳಲ್ಲಿ ಇತರ ಇಲಾಖೆಗಳ ನೇಮಕ ಸಂದರ್ಭದಲ್ಲಿ ವೈದ್ಯಕೀಯ ರಜೆ ಖಾತರಿಗೊಳಿಸುವ ಸಲುವಾಗಿ, ಸ್ವಯಂ ನಿವೃತ್ತಿ ಸಂದರ್ಭದಲ್ಲಿ ವೃಂದ ಬದಲವಣೆ ಸಂದರ್ಭದಲ್ಲಿ ಮರು ವರಿಶೀಲನಗೆ ಕೋರಿಕೆ ನೀಡುತ್ತಿರುತ್ತಾರೆ.

ಇಂತಹ ಸಂದರ್ಭಗಳಲ್ಲಿ ಇತರ ವೈದ್ಯಕೀಯ ಮಂಡಳಿಗಳಿಗೆ ನಿರ್ದೇಶಿಸಿದಾಗ ಅಥವಾ ಬೋಧಕ ಆಸ್ಪತ್ರೆಯ ವೈದ್ಯಕೀಯ ಮಂಡಳಿಗಳಿಗೆ ನಿರ್ದೇಶಿಸಿದಾಗ ವ್ಯತ್ಯಾಸ ಕಂಡು ಬಂದಿರುತ್ತದೆ. ಕೆಲವು ಸಂದರ್ಭಗಳನ್ನು ಹೊರತು ಪಡಿಸಿ ಅಂಗವಿಕಲತೆಯ ಶೇಕಡವಾರು ಹೆಚ್ಚಿನ ಬದಲಾವಣೆಯಾದಲ್ಲಿ ವಿಚಾರಣೆಗಾಗಿ ಮೂಲ ಅಂಗವಿಕಲತೆಯ ಪ್ರಮಾಣ ವಶಕ್ಕೆ ಬೇಕಾದ ವೈದ್ಯಕೀಯ ದಾಖಲೆಗಳು, ವೈದ್ಯಕೀಯ ಪರೀಕ್ಷೆಗಳ ವಿವರ ( ಅಡಿಯೋಲಜಿ ವರದಿ, ಎಂಆರ್‌, Vision Test) ಇತ್ಯಾದಿಗಳು ಆಸ್ಪತ್ರೆಯಲ್ಲಿ ವೈದ್ಯಕೀಯ ದಾಖಲಾತಿಯ ವಿಭಾಗದಲ್ಲಿ ನಿಯಮಾನುಸಾರ ಕಾಯ್ದಿರಿಸಬೇಕಾಗುತ್ತದೆ.

ಮಾನ್ಯ ಉಚ್ಚನ್ಯಾಯಾಲವು ರಿಟ್ ಅರ್ಜಿ ಆದೇಶದಲ್ಲಿ, ಅಂಗವಿಕಲತೆಯ ಸಂಬಂಧ ನೀಡಲಾಗುತ್ತಿರುವ ಹಲವಾರು ವೈದ್ಯಕೀಯ ಮಂಡಳಿ ಪ್ರಮಾಣ ಪತ್ರಗಳನ್ನು ಗ್ರಹಿಸಲು/ ಅರ್ಥೈಸಿಕೊಳ್ಳಲು ಆಗುತ್ತಿಲ್ಲ. ಹಲವು ಕಾಲಂಗಳಲ್ಲಿ ಯಾವ ಶಾರೀರಿಕ ಭಾಗಗಳು ಊನವಾಗಿರುತ್ತದೆ ಎಂಬುದನ್ನು ಭರ್ತಿ ಮಾಡದ ಕಾರಣ ಹಾಗೂ ದುಬರ್ಲತೆ/ ಧಕ್ಕೆಯಾಗಿರುವ ಬಗ್ಗೆ, ಬರವಣಿಗೆಯಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ವಾದಿ/ ಪ್ರತಿವಾದಿಗಳ ವಾದಗಳನ್ನು ಸರಾಗವಾಗಿ ಅರ್ಥೈಸಿಕೊಳ್ಳುವುದರಲ್ಲಿ ಅನನುಕೂಲವಾಗುತ್ತಿರುತ್ತದೆ ಎಂದು ಅಭಿಪ್ರಾಯವನ್ನು ವೈದ್ಯಕೀಯ ಮಂಡಳಿ ಪ್ರಮಾಣ ಪತ್ರಗಳನ್ನು ನೀಡುವಾಗ ಅನುಸರಿಸಬೇಕಾದ ಮಾನದಂಡಗಳನ್ನು ಉಲ್ಲೇಖಿಸಿ ನಿರ್ದೇಶನ ನೀಡಿರುತ್ತದೆ ಎಂದು ಸುತ್ತೋಲೆ ಹೇಳಿದೆ.

ಇನ್ನು ಮುಂದೆ ಅಂಗವಿಕಲತೆಯ ಬಗ್ಗೆ, ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣ ಪತ್ರಗಳನ್ನು ನೀಡಲಾಗುವ ಸಮಯದಲ್ಲಿ ಅರ್ಜಿ ನಮೂನ IV ರಲ್ಲಿನ ಎಲ್ಲಾ ಕಾಲಂಗಳನ್ನು ಸಾಮಾನ್ಯ ಮನುಷ್ಯನಿಗೂ ಅರ್ಥವಾಗುವ ರೀತಿಯಲ್ಲಿ ನಮೂದಿಸಬೇಕೆಂದು ಹಾಗೂ ಸಂಬಂಧಪಟ್ಟ ತಜ್ಞ ವೈದ್ಯರು ವೈದ್ಯಕೀಯ ಪ್ರಮಾಣ ಪತ್ರದಲ್ಲಿ ಅಂಗವಿಕಲತೆಯ ನಿರ್ದಿಷ್ಟತೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.

ಅಂಗವಿಕಲತೆ ದೃಢೀಕರಿಸುವಾಗ ಸಂಬಂಧವನ್ನು ತಜ್ಞ ವೈದ್ಯರು ಮಾತ್ರವೇ ಪ್ರಮಾಣೀಕರಿಸಬೇಕು ಹಾಗೂ ತಜ್ಞ ವೈದ್ಯರು ಪ್ರಮಾಣೀಕರಿಸಬಾರದು. ಇದನ್ನು ಹೊರತುವಡಿಸಿ ಇತರ ತಜ್ಞ ವೈದ್ಯರು ಅಂಗವಿಕಲತೆ ಪ್ರಮಾಣದ/ ವೈದ್ಯಕೀಯ ರಜೆಗೆ ಶಿಫಾರಸ್ಸು ನೀಡಿದಲ್ಲಿ ಅದನ್ನು ಅಮಾನ್ಯ ಮಾಡಲಾಗುವುದು, ಯಾವ ವೈದ್ಯರು ಈ ಸೂಚನೆಗಳನ್ನು ಉಲ್ಲಂಘಿಸುತ್ತಾರೋ ಅವರುಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆ ಹೇಳಿದೆ.

ಸಂಶಯಾಸ್ಪದ ಪ್ರಕರಣಗಳಲ್ಲಿ ಸಂಬಂಧಪಟ್ಟ ವೈದ್ಯಕೀಯ ಮಂಡಳಿಗಳಿಗೆ ಪೂರಕ ವೈದ್ಯಕೀಯ ದಾಖಲೆಗಳನ್ನು, ಹಾಜರು ಪಡಿಸಲು ಕೇಳಿದಾಗ ಉದಾ ಅಡಿಯೋಗ್ರಾಂ, ಎಂಆ‌ಐ, Vision Test yas ಇತ್ಯಾದಿಗಳನ್ನು ಎನ್‌ಎಂಸಿ ಮಾರ್ಗಸೂಚಿಗಳನ್ವಯ ಕ್ರೋಢೀಕರಿಸುವುದು. ಸದರಿ ತವಾಸದ ವರದಿಗಳನ್ನು (Investigation Report) ಸಂಬಂಧವು ಅಭ್ಯರ್ಥಿ/ ಸಿಬ್ಬಂದಿ ಒದಗಿಸಲು ಸಾಧ್ಯವಾಗದೇ ಹೋದಲ್ಲಿ ಅನುಮಾನ್ಪದ ಪ್ರಕರಣವೆಂದು ಪರಿಗಣಿಸಿ ಮರು ಪರಿಶೀಲನೆಗೆ ಆದೇಶಿಸಲಾಗುವುದು ಎಂದು ಸುತ್ತೋಲೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+